ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನರಾಂ ಪುತ್ಥಳಿಗಳಿಗೆ ಮಾಲಾರ್ಪಣೆ ಸಲ್ಲಿಸಿ ಮಂಡ್ಯದಿಂದ ಜೈ ಭೀಮ್ ಜನ ಜಾಗೃತಿ ಜಾಥಕ್ಕೆ ಬೀಳ್ಕೊಡುಗೆ
ನವೆಂಬರ್ 06, 2022
ಮಂಡ್ಯ : ಬಹುಜನ ಸಮಾಜ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಸಂವಿಧಾನ ಸಂರಕ್ಷಣೆಗಾಗಿ 'ಜೈಭೀಮ್ ಜನಜಾಗೃತಿ ಜಾಥಾ' ರಥವು ಮಳವಳ್ಳಿ ತಾಲೂಕಿಗೆ ತೆರಳುವ ಮುನ್ನ ಮಂಡ್ಯದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದ 'ಬಾಬಾಸಾಹೇಬ್ ಡಾ.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ' ರವರ ಪುತ್ತಳಿಗಳಿಗೆ ಮಾಲಾರ್ಪಣೆ ಸಲ್ಲಿಸಿದ ಬಳಿಕ ಬೀಳ್ಕೊಡಲಾಯಿತು. ರಾಷ್ಟ್ರೀಯ ಸಂಯೋಜಕರು ಹಾಗೂ ರಾಜ್ಯ ಉಸ್ತುವಾರಿಗಳಾದ ನಿತಿನ್ ಸಿಂಗ್, ರಾಜ್ಯಾಧ್ಯಕ್ಷರಾದ ಎಂ.ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷರಾದ ಎಸ್.ಶಿವಶಂಕರ್. ಮಂಡ್ಯ ತಾಲೂಕು ಅಧ್ಯಕ್ಷರಾದ ಕೆ.ಎಂ.ಅನಿಲ್ ಕುಮಾರ್, ಉಪಾಧ್ಯಕ್ಷರಾದ ಮಧುಕುಮಾರ್. ತಾಲೂಕು ಉಸ್ತುವಾರಿ ಕುಮಾರ್, ಮೇಲುಕೋಟೆ.ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಯೋಗನಂದಗೌಡ ಇತರರು ಹಾಜರಿದ್ದರು.
0 ಕಾಮೆಂಟ್‌ಗಳು