ಶಿಂಶಾ ನದಿಯಲ್ಲಿ ಕೊಚ್ಚಿ ಹೋದ ಯುವಕ


ಮಂಡ್ಯ : ತಂದೆಯೊಂದಿಗೆ ಮೀನು ಹಿಡಿಯಲು ಹೋದ ಮಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮದ್ದೂರು ಪಟ್ಟಣದ ಕೊಲ್ಲಿ ಸರ್ಕಲ್ ಬಳಿಯ ಶಿಂಶಾ ನದಿಯಲ್ಲಿ ನಡೆದಿದೆ. 
ಮದ್ದೂರು ಪಟ್ಟಣದ ಹೊಳೆ ಬೀದಿಯ ಹಳೇ ಮಸೀದಿ ರಸ್ತೆಯ ನಿವಾಸಿ ಅಮ್ಜದ್ ಉಲ್ಲಾ ಖಾನ್ ಪುತ್ರ ಮುಯೀನ್ ಪಾμÁ (18) ಮೃತಪಟ್ಟಿರುವ ದುರ್ದೈವಿ. 
ಮೋಟಾರ್ ಬೈಕ್ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಮುಯೀನ್ ಪಾμÁ ಸಂಜೆ 3.30 ರ ಸುಮಾರಿಗೆ ತನ್ನ ತಂದೆ ಅಮ್ಜದ್ ಉಲ್ಲಾ ಖಾನ್ ನೊಂದಿಗೆ ಕೊಲ್ಲಿ ಸರ್ಕಲ್ ಬಳಿಯ ಶಿಂಶಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದಾನೆ. ಈ ವೇಳೆ ಈತನ ಜೊತೆಯಲ್ಲಿದ್ದ ಇಬ್ಬರು ಸಹಪಾಠಿಗಳು ನದಿಯಲ್ಲಿ ಈಜಾಡುತ್ತಿದ್ದರು. ಮುಯೀನ್ ಸಹ ಈಜಾಡಲು ಹೋದಾಗ ಕಾಲು ಜಾರಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದಾನೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ತಂಡ ಮೃತ ದೇಹ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 
ಸ್ಥಳಕ್ಕೆ ಮದ್ದೂರು ಠಾಣೆಯ ಪಿಎಸ್‍ಐ ಉಮೇಶ್ ಹಾಗೂ ಸಿಬ್ಬಂದಿಗಳು ಭೆಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು