ಕಾರು ಚಾಲಕರು, ಮಾಲೀಕರ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ
ನವೆಂಬರ್ 30, 2022
ಹನೂರು : ಪಟ್ಟಣದಲ್ಲಿ ಕಾರು ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಬುಧವಾರ ಬೆಳಿಗ್ಗೆ ಚಾಲಕರು ಮತ್ತು ಮಾಲೀಕರು ತಮ್ಮ ವಾಹನಗಳನ್ನು ಅಲಂಕರಿಸಿ, ಕನ್ನಡದ ದ್ವಜವನ್ನು ಹಾಕಿಕೊಂಡು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ಇದಕ್ಕೂ ತಹಶೀಲ್ದಾರ್ ಆನಂದಯ್ಯ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಬಳಿಕ ಅವರು ಮಾತನಾಡಿ, ಕನ್ನಡ ನಾಡು ನುಡಿಗೆ ಅನೇಕ ಮಹನೀಯರು ಹೋರಾಡಿದ್ದಾರೆ. ಅಲ್ಲದೇ ಅನೇಕ ರೀತಿಯಲ್ಲಿ ಕೊಡುಗೆಗಳನ್ನು ನೀಡಿದ್ದಾರೆ. ಇಂಥಹ ಸುಸಂದರ್ಭಗಳಲ್ಲಿ ಅಂತಹ ಎಲ್ಲಾ ಮಹಾನೀಯರನ್ನು ಸ್ಮರಿಸಿ ಗೌರವಿಸಿದರೆ ನಿಜಕ್ಕೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದರು. ಇದೇ ಸಂದರ್ಭದಲ್ಲಿ ಚೆಸ್ಕಾಂ ಇಲಾಖೆಯ ರಂಗಸ್ವಾಮಿ ಮುಖಂಡರಾದ ಅನಂತು ರಾಜಪ್ಪ ಶಿಕ್ಷಕ ಧರ್ಮಲಿಂಗಮ್ ರಾಜು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
0 ಕಾಮೆಂಟ್‌ಗಳು