ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೆಂಪೇಗೌಡ ಮತ್ತು ಟಿಪ್ಪು ವಿಶ್ವವಿದ್ಯಾನಿಲಯ ಸ್ಥಾಪನೆ : ಸಿ.ಎಂ.ಇಬ್ರಾಹಿಂ
ನವೆಂಬರ್ 16, 2022
ಮೈಸೂರು ಯಾವುದೇ ಅಭಿವೃದ್ಧಿ ಕೆಲಸ ಮಾಡದ ಪ್ರತಾಪ್ ಸಿಂಹ ಎರಡು ಸಮಾಜದ ಮಧ್ಯೆ ವಿಷವನ್ನು ಹಾಕುವ ಕೆಲಸ ಮಾಡುತ್ತಿದ್ದು, ಸಾಂಸ್ಕøತಿಕವಾಗಿ ಮತ್ತು ಸೈಕ್ಷಣಿಕವಾಗಿ ಪ್ರಬುದ್ಧರಾಗಿರುವ ಮೈಸೂರಿಗರನ್ನು ಸಂಸದರು ಅಜ್ಞಾನದ ಕಡೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದರು. ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಂಜನಗೂಡು ನಂಜನಗೂಡು ನಂಜುಂಡೇಶ್ವರ ದೇವಸ್ಥಾನಕ್ಕೆ ಪಚ್ಚೇವಜ್ರವನ್ನು ಟಿಪ್ಪು ಸುಲ್ತಾನ್ ಕೊಟ್ಟಿದ್ದು.ಇದನ್ನ ಪ್ರತಾಪ ಸಿಂಹ ವಾಪಸ್ ಇಸ್ಕೊತ್ತಾನಾ?, ಮೋದಿ ನಿಂತು ಭಾಷಣ ಮಾಡುವ ಕೆಂಪು ಕೋಟೆಯನ್ನ ಷಹಜಹಾನ್ ಕಟ್ಟಿಸಿದ್ದು, ಅಲ್ಲಿ ನಿಂತು ಯಾಕೆ ಭಾಷಣ ಬಿಗಿತೀರಿ ಅಂತ ಪ್ರತಾಪಸಿಂಹ ಅದನ್ನು ಒಡೆದು ಬಿಡುತ್ತಾರಾ ? ಎಂದು ಪ್ರಶ್ನಿಸಿದರು. ಟಿಪ್ಪು ಸುಲ್ತಾನ್ ಶೃಂಗೇರಿ ಶಾರದ ಪೀಠವನ್ನ ಪುನರ್ ನಿರ್ಮಿಸಿದ್ದಾರೆ ಎಂದು ಅಲ್ಲಿನ ಗುರುಗಳೇ ಹೇಳಿದ್ದಾರೆ. ಟಿಪ್ಪು ಸುಲ್ತಾನ್ ಬ್ರಿಟಿಷರ ಪರವಾಗಿದ್ದ ತನ್ನ ವೈರಿಗಳಿಗೆ ಶಿಕ್ಷೆ ಕೊಟ್ಟಿದ್ದಾನೆ. ಆದರೆ, ತನ್ನನ್ನು ನಂಬಿದವರಿಗೆ ಎಂದಿಗೂ ಮೋಸ ಮಾಡಿಲ್ಲ ಇತಿಹಾಸವನ್ನು ತಿಳಿದು ಬಿಜೆಪಿಯವರು ಮಾತನಾಡಬೇಕು, ಆದರೆ, ಚುನಾವಣೆ ಹತ್ತಿರ ಬರುತ್ತಿದಂತೆ ಈ ರೀತಿ ಮಾಡುತ್ತಿದ್ದಾರೆ. ಪ್ರತಾಪ ಸಿಂಹ ಯಾವುದೇ ಅಭಿವೃದ್ಧಿ ಕೆಲಸಗಳನ್ನ ಮಾಡಿಲ್ಲ.ಎರಡು ಸಮಾಜದ ಮಧ್ಯೆ ವಿಷ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಟಿಪ್ಪು ನಿಜ ಕನಸುಗಳು ನಾಟಕ ತಡೆ ಕುರಿತು ಮಾತನಾಡಿ, ಮೈಸೂರಿನ ನ್ಯಾಯಾಲಯಕ್ಕೆ ಈಗಾಗಲೇ ಮೊರೆ ಹೋಗಲಾಗಿದೆ. ನಾಳೆ ಅಥವಾ ನಾಳಿದ್ದು ಬೆಂಗಳೂರಿನಲ್ಲಿ ನ್ಯಾಯಾಲಯದ ಮೊರೆ ಹೊಗಲಾಗುವುದು. ಕಾನೂನು ಹೋರಾಟದ ಮೇಲೆ ನಮಗೆ ನಂಬಿಕೆ ಇದೆ ಎಂದರು.
ಟಿಪ್ಪು ಕೊಂದವರು ಇಲ್ಲಿನ ಒಕ್ಕಲಿಗರು ಎಂದು ಅಡ್ಡಂಡ ಕಾರ್ಯಪ್ಪ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ. ವಾಸ್ತವದಲ್ಲಿ ಟಿಪ್ಪು ಆಳ್ವಿಕೆಯಲ್ಲಿ ಒಕ್ಕಲಿಗರು ಸಂತುಷ್ಟವಾಗಿದ್ದು, ಟಿಪ್ಪು ತನ್ನ ಮಕ್ಕಳನ್ನು ಬ್ರಿಟೀಷರಿಗೆ ಅಡವಿಟ್ಟಾಗ ಅವರನ್ನು ಬಿಡಿಸಲು ಹಣ ಸಂಗ್ರಹ ಮಾಡಿ ಕೊಟ್ಟಿದ್ದರು. ಒಕ್ಕಲಿಗ ಸಮುದಾಯ ಅನ್ನದಾತರು ಎಂದು ಇಬ್ರಾಹೀಂ ಹೇಳಿದರು. ಟಿಪ್ಪು ಪ್ರತಿಮೆ ನಿರ್ಮಾಣ ವಿಚಾರವಾಗಿ ಮಾತನಾಡಿ, ಪ್ರತಿಮೆಗೆ ನಮ್ಮಲ್ಲಿ ಅವಕಾಶ ಇಲ್ಲ. ಅಲ್ಲದೇ, ಪೂಜೆ ಮಾಡುವುದು, ಕುಂಕುಮ ಹಚ್ಚುವುದು ನಮ್ಮಲ್ಲಿ ಇಲ್ಲ. ಬಡವರಿಗೆ ಸಹಾಯ ಮಾಡುವುದು ನಮ್ಮಲ್ಲಿರುವುದು. ಇದೇ ನಮ್ಮಲ್ಲಿರುವ ಆಚರಣೆ. ಆದರೆ, ರಾಜಕೀಯಕೋಸ್ಕರ ಟಿಪ್ಪು ಪ್ರತಿಮೆ ಮಾಡುವ ಪ್ರಶ್ನೆಯೇ ಇಲ್ಲ .ಎಲ್ಲಿಯಾದರೂ ಮುಸ್ಲಿಂ ಸಮುದಾಯವರ ಪ್ರತಿಮೆ ಇರುವುದನ್ನ ತೋರಿಸಿ? ಈ ಬಗ್ಗೆ ಧರ್ಮ ಗುರುಗಳೊಂದಿಗೆ ಚರ್ಚಿಸಿ ಎಂದು ತನ್ವೀರ್‍ಗೆ ಹೇಳಿದ್ದೇನೆ ಎಂದು ಅಸಮಾಧಾನ ಹೊರಹಾಕಿದರು. ಪರಿಸ್ಥಿತಿ ಬದಲಾಗಿದೆ ಅಂತಾ ಧರ್ಮ ಬದಲಾಯಿಸಲು ಆಗುತ್ತಾ ?ರಾಜಕೀಯ ಕಾರಣಗಳಿಂದ ಧರ್ಮ ಬದಲಾಯಿಸಲು ಆಗಲ್ಲ. ರಾಜಕಾರಣ ಇವತ್ತು, ಇರುತ್ತೇ. ನಾಳೆ ಸಾಯುತ್ತೇ ನಮಗೆ ಧರ್ಮನೇ ಮುಖ್ಯ, ಟಿಪ್ಪು ಪ್ರತಿಮೆ ಸ್ಥಾಪನೆಗೆ ನಮ್ಮಲ್ಲಿ ಅವಕಾಶವಿಲ್ಲ .ತನ್ವೀರ್ ಸೇಠ್ ಅವರ ಅವರ ತಂದೆ ಅಜೀಜ್ ಸೇಠ್ 50 ವರ್ಷ ರಾಜಕೀಯದಲ್ಲಿ ಕೆಲಸ ಮಾಡಿದ್ದಾರೆ. ಅವರ ಪ್ರತಿಮೆ ಎಲ್ಲಾದರೂ ಇದೆಯಾ, ಏಕೆ ಹಾಕಿಲ್ಲ? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ, ಟಿಪ್ಪು ಜಯಂತಿ ಆಚರಣೆಗೆ ತಂದರು. ಅಂದೇ ನಾನು ಜಯಂತಿ ಬೇಡ ಅಂತ ಹೇಳಿದ್ದೇ. ಆದರೆ, ಅವರು ನನ್ನ ಮಾತು ಕೇಳಲಿಲ್ಲ. ಟಿಪ್ಪು ಜಯಂತಿ ಮಾಡಿದ್ದು ತಪ್ಪು. ನಮ್ಮಲ್ಲಿ ಜಯಂತಿ ಆಚರಣೆ ಇಲ್ಲ ಎಂದರು. ದೆಹಲಿ ಯುವತಿ ಕೊಲೆ ಪ್ರಕರಣ ಲವ್ ಜಿಹಾದ್ ಗೆ ತಿರುಗಿದ ವಿಚಾರವಾಗಿ ಮಾತನಾಡಿ, ಪ್ರಮೋದ ಮುತಾಲಿಕ್ ಗೆ ಲವ್ ಮಾಡಿ ಗೊತ್ತಿಲ್ಲ. ಮೊದಲು ಲವ್ ಮಾಡಿ ಟೇಸ್ಟ್ ನೋಡಲು ಹೇಳಿ. ಈ ವಿಚಾರವನ್ನ ಇಗ್ನೋರ್ ಮಾಡಿ, ಚರ್ಚೆಯಾಗಬೇಕಿರುವ ವಿಚಾರಗಳು ಸಾಕಷ್ಟು ಇದೆ ಎಂದು ಹೇಳಿದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಟಿಪ್ಪು ವಿಶ್ವವಿದ್ಯಾಲಯವನ್ನ ಕೋಲಾರ, ಶ್ರೀರಂಗಪಟ್ಟಣದಲ್ಲಿ ಮಾಡುತ್ತೇವೆ. ಅಲ್ಲದೇ, ಕೆಂಪೇಗೌಡ ವಿಶ್ವ ವಿದ್ಯಾನಿಲಯ ಮಾಡುತ್ತೇವೆ. ಇನ್ನು ಆರು ತಿಂಗಳು ತಡೆಯಿರಿ ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎಂದು ತಿಳಿಸಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಅಧಿಕಾರಾವಧಿಯಲ್ಲಿ ಆಗುತ್ತಿರುವ ಅಹಿತಕರ ಘಟನೆ, ಸಮಾಜದಲ್ಲಿ ಶಾಂತಿ ಕದಡುವ ಘಟನೆಗಳು ನಡೆಯದಂತೆ ಕುಮಾರಸ್ವಾಮಿ ನೋಡಿಕೊಳ್ಳುತ್ತಾರೆ. ಜನರಿಗೆ ಬೇಕಾಗಿರುವುದು ಶಾಂತಿ ಹಾಗೂ ನೆಮ್ಮದಿ ಎಂದರು. ಸುದ್ದಿಗೋಷ್ಠಿಯಲ್ಲಿ ಧಾರ್ಮಿಕ ಮುಖಂಡರು ಹಾಗೂ ಜೆಡಿಎಸ್ ಮುಖಂಡರು ಹಾಜರಿದ್ದರು. ಸುದ್ದಿಗೋಷ್ಠಿಗೂ ಮುನ್ನ ರಂಗಾಯಣದಲ್ಲಿ ನ.20ರಂದು ಪ್ರದರ್ಶನಗೊಳ್ಳಲಿರುವ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ ತಡೆಯುವ ಬಗ್ಗೆ ಧಾರ್ಮಿಕ ಮುಖಂಡರೊಂದಿಗೆ ಸಿ.ಎಂ.ಇಬ್ರಾಹಿಂ ಅವರು ಸಭೆ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಅಬ್ದುಲ್ ಖಾದರ್ ಶಾಹೀದ್, ಮುತಹೀರ್ ಪಾಷ, ಆಫ್ತಾಬ್, ಜೀಷಾನ್, ಹಾಫೀಝ್ ಅರ್ಷದ್ ಸಾಬ್, ಸಜ್ಜಾದ್ ಸಾಬ್, ಕಲೀಂಭಾಯ್ ಮುಂತಾದವರು ಇದ್ದರು.
0 ಕಾಮೆಂಟ್‌ಗಳು