ಶ್ರೀ ನಾಗಮಲೆ ಮಹದೇಶ್ವರ ಸ್ವಾಮಿ ಸೇವಾ ಸಮಿತಿಯಿಂದ ಶ್ರೀಕ್ಷೇತ್ರ ನಾಗಮಲೆಯಲ್ಲಿ ಅನ್ನ ಸಂತರ್ಪಣೆ
ನವೆಂಬರ್ 24, 2022
ಹನೂರು : ಕಾರ್ತಿಕ ಮಾಸದ ಅಮಾವಾಸ್ಯೆ ಪ್ರಯುಕ್ತ ನಾಗಮಲೆ ಶ್ರೀಕ್ಷೇತ್ರದಲ್ಲಿ ನೂರಾರು ಭಕ್ತಾದಿಗಳಿಗೆ ಶ್ರೀ ನಾಗಮಲೆ ಗ್ರೂಪ್ಸ್ ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ನಡೆಯಿತು. ಇಂದು ಬೆಳಿಗ್ಗೆ ನಾಗಮಲೆಯ ಶ್ರೀ ಮಹದೇಶ್ವರ ಸ್ವಾಮಿಗೆ ವಿವಿಧ ಅಭಿμÉೀಕಗಳನ್ನು ನೆರವೇರಿಸಿ ಬಳಿಕ ಅನ್ನದಾನವನ್ನು ಪ್ರಾರಂಭಿಸಲಾಯಿತು. ಬೆಟ್ಟ ಗುಡ್ಡಗಳನ್ನು ಹತ್ತಿ, ಸುತ್ತಿ, ಬಸವಳಿದು ಬಂದಿದ್ದ ಭಕ್ತಾದಿಗಳು ಸ್ವಾಮಿಯ ಪ್ರಸಾದವನ್ನು ಸೇವಿಸಿ ಸಂತೃಪ್ತರಾದರು. ಸಂಜೆ 5 ಗಂಟೆಯವರೆಗೂ ನಡೆದ ದಾಸೋಹದಲ್ಲಿ ಸಾವಿರಾರು ಭಕ್ತರು ಪ್ರಸಾದವನ್ನು ಸೇವಿಸಿದರು. ಈ ಸಂದರ್ಭದಲ್ಲಿ ಶ್ರೀ ನಾಗಮಲೆ ಗ್ರೂಪ್ಸ್ ನ ಎಲ್ಲಾ ಸದಸ್ಯರುಗಳು ಹಾಜರಿದ್ದರು.
0 ಕಾಮೆಂಟ್‌ಗಳು