ಕೊಲೆಯಾದ ರೌಡಿ ಶೀಟರ್ ಅರುಣ್ ಅಲಿಯಾಸ್ `ಕಪ್ಪೆ’ ಮೇಲೆ ಪೋಕ್ಸೋ ಕೇಸ್ ದಾಖಲಾಗಿತ್ತು.
ನವೆಂಬರ್ 29, 2022
ಮಂಡ್ಯ : ಇತ್ತೀಚೆಗೆ ಕೊಲೆಯಾದ ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯ ಅರುಣ್ ಅಲಿಯಾಸ್ ಕಪ್ಪೆ ಮೇಲೆ 4 ಕೇಸುಗಳಿದ್ದು, ಪೋಕ್ಸೋ ಕೇಸ್ ಕೂಡ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ಮೇಲೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿತ್ತು. 24 ವರ್ಷದ ಅರುಣ್ ಅಲಿಯಾಸ್ ಕಪ್ಪೆ ಮೇಲೆ 2019 ರಲ್ಲಿ ಸೆಕ್ಷನ್ 307 ಅಡಿ ಕೊಲೆ ಯತ್ನ ಪ್ರಕರಣ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಪ್ರಕರಣದಲ್ಲಿ ಈಗ ಅರುಣ್ ಕೊಲೆ ಮಾಡಿರುವ ದೇವರಾಜ್ ಎ1 ಆರೋಪಿ. ಅಲ್ಲದೆ, ಚಿನ್ನದ ಸರ ಕಳವು ಮಾಡಿದ ಹಿನ್ನೆಲೆಯಲ್ಲಿ ರಾಬರಿ ಕೇಸ್ ಕೂಡ ದಾಖಲಾಗಿದೆ. ಕಾಲೇಜು ಹುಡುಗಿಯೊಬ್ಬಳನ್ನು ನನ್ನನ್ನು ಪ್ರೀತಿಸು, ಇಲ್ಲದಿದ್ದರೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಹಿನೆಲೆಯಲ್ಲಿ ಈತನ ಮೇಲೆ ಪೋಕ್ಸೋ ಸೇರಿದಂತೆ ಇನ್ನೂ ಒಂದು ಕೇಸ್ ಕೆ.ಎಂ.ದೊಡ್ಡಿ ಠಾಣೆಯಲ್ಲಿ ದಾಖಲಾಗಿರುವ ಅಂಶ ಬಯಲಿಗೆ ಬಂದಿದೆ.
0 ಕಾಮೆಂಟ್‌ಗಳು