ಹಿರೇಮರಳಿ ಗ್ರಾಮದಲ್ಲಿ ಶ್ರೀ ಗಣಪತಿ ದೇವಸ್ಥಾನ ಹಾಗೂ ನವಗ್ರಹ ದೇವಸ್ಥಾನ ಉದ್ಘಾಟನೆ : ಅನ್ನ ಸಂತರ್ಪಣೆ : ಶಾಸಕ ಸಿ.ಎಸ್.ಪುಟ್ಟರಾಜುಗೆ ಸನ್ಮಾನ
ನವೆಂಬರ್ 11, 2022
ಪಾಂಡವಪುರ : ತಾಲ್ಲೂಕಿನ ಹಿರೇಮರಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗಣಪತಿ ದೇವಸ್ಥಾನ ಹಾಗೂ ನವಗ್ರಹ ದೇವಸ್ಥಾನವನ್ನು ಶಾಸಕ ಸಿ.ಎಸ್.ಪುಟ್ಟರಾಜು ಶುಕ್ರವಾರ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತಸಂಘದ ವರಿಷ್ಠ ನಾಯಕಿ ಸುನೀತಾ ಪುಟ್ಟಣ್ಣಯ್ಯ ಅವರು ದೇವಾಲಯದ ಕಳಸ ಸ್ಥಾಪನೆ ಮಾಡಿದರು. ಜತೆಗೆ ಬಿಜೆಪಿ ಮುಖಂಡರಾದ ಡಾ.ಎನ್.ಎಸ್.ಇಂದ್ರೇಶ್ ನವಗ್ರಹ ದೇವಾಲಯ ಪ್ರತಿಷ್ಠಾಪನೆ ಮಾಡಿದರು. ಗುರುವಾರ ಮಧ್ಯಾಹ್ನ 3.00 ಗಂಟೆಯಿಂದಲೇ ದೇವಾಲಯಗಳ ಪ್ರಾರಂಭೋತ್ಸವದ ಪೂಜಾ ಕೈಂಕರ್ಯಗಳು ಪ್ರಾರಂಭವಾದವು. ಧ್ವಜಾರೋಹಣ, ಪುಣ್ಯಾ, ಅಂಕುರಾರ್ಪಣೆ, ಗಂಗಾಪೂಜೆ, ವಾಸ್ತು ರಾಕೋಘ್ನ, ಗಣಪತಿ ಪೂಜೆ, ಆದಿವಾಸಿಗಳು ಕಾರ್ಯಕ್ರಮ ನಡೆದು, ಶುಕ್ರವಾರ ಬೆಳಗ್ಗೆ 6 ಗಂಟೆಗೆ ಕಳಾಸಾರ್ಪಣೆ, ಪ್ರಧಾನ ದೇವರ ಹೋಮ ಪೂರ್ಣಾಹುತಿ, ಮಹಾಭೀ ಷೇಕ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮದ ಯಜಮಾನರುಗಳಾದ ಈರೇಗೌಡ (ಕೋರಿಶೆಟ್ಟರ), ಚನ್ನೇಗೌಡ (ಜೊಲ್ಲಪ್ಪರ), ಈರಣ್ಣ (ಬಚ್ಚಪ್ಪರ), ಶಿವಣ್ಣ (ದಾಸಪ್ಪರ), ಈರೇಗೌಡ (ಬೋರಿಶೆಟ್ಟರ), ತಮ್ಮೇಗೌಡ (ಕನಕನ), ರಮೇಶ (ಕುರಿಮುಟ್ಟ), ಹೆಚ್.ಸಿ. ರಾಮೇಗೌಡ, ರಾಮೇಗೌಡ (ಕರಿಯೊನ್ನಯರ), ಕೆ. ಜವರೇಗೌಡ, ಬಿ. ಕೃಷ್ಣಗೌಡ, ಕೃಷ್ಣಗೌಡ (ಹಲಗೇಗೌಡರ), ಹೆಚ್.ಡಿ. ರಾಜಶೇಖರಯ್ಯ, ಎಲ್. ಪುಟ್ಟರಾಜು, ಹೆಚ್.ಬಿ. ಚಲುವೇಗೌಡ (ಬಕೋಡಿ), ಹಿರೇಮರಳಿ ಗ್ರಾಮ ಪಂಚಾಯಿತಿ, ಹಿರೇಮರಳಿ ಹಾಲು ಉತ್ಪಾದಕರ ಸಹಕಾರ ಸಂಘ, ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ, ಶ್ರೀ ಮಹಾಲಿಂಗೇಶ್ವರ ಸೇವಾ ಸಮಿತಿ, ಶ್ರೀ ಬಸವೇಶ್ವರ ಸೇವಾ ಸಮಿತಿ, ಶ್ರೀ ಮುತ್ತಲ ನರಸಮ್ಮ ಸೇವಾ ಸಮಿತಿ, ಶ್ರೀ ವೀರಾಂಜನೇಯ ಸೇವಾ ಸಮಿತಿ, ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಪದಾಧಿಕಾರಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಜತೆಗೆ ಶ್ರೀ ಗಣಪತಿ ಸೇವಾ ಸಮಿತಿಯ ಲಕ್ಷ್ಮೀನಾರಾಯಣಗೌಡ, ಹೆಚ್.ಕೆ. ವಿಜೇಂದ್ರ, ಹೆಚ್.ಬಿ. ಚೆಲುವರಾಜು, ಹೆಚ್.ಜೆ. ಷಣ್ಮುಖ, ಹೆಚ್.ಕೆ. ರಾಮಕೃಷ್ಣಗೌಡ, ಹೆಚ್.ಪಿ. ಕರುಣಾಕರ, ಸ್ವಾಮೀಗೌಡ (ಹೆಚ್.ಎಸ್.ವಿ), ಹೆಚ್.ಕೆ. ನಾರಾಯಣಗೌಡ, ಹೆಚ್.ಬಿ. ಚೆಲುವೇಗೌಡ (ಬಕೋಡಿ), ಜೆ. ಧನಂಜಯ, ಹೆಚ್.ಇ. ಶ್ರೀಕಂಠೇಗೌಡ, ಹೆಚ್.ಪಿ. ಶಿವಕುಮಾರ್, ಹೆಚ್.ಸಿ. ರಮೇಶ್ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.
0 ಕಾಮೆಂಟ್‌ಗಳು