ನಾಳೆ ಕರ್ನಾಟಕ ಪತ್ರಕರ್ತರ ಸಂಘದ ಹನೂರು ತಾಲ್ಲೂಕು ಘಟಕ ಉದ್ಘಾಟನೆ : ಸಾಧಕರಿಗೆ ಸನ್ಮಾನ


-ಶಾರುಕ್ ಖಾನ್, ಹನೂರು
ಹನೂರು : ಕರ್ನಾಟಕ ಪತ್ರಕರ್ತರ ಸಂಘ ಹನೂರು ತಾಲ್ಲೂಕು ಘಟಕದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 50ಕ್ಕೂ ಹೆಚ್ಚು ಸಾಧಕರಿಗೆ ನಾಳೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಅಧ್ಯಕ್ಷ ಕುಮಾರ್ ದೊರೆ ತಿಳಿಸಿದ್ದಾರೆ.
ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ಕಲ್ಯಾಣ ಮಂಟಪದಲ್ಲಿ ಭಾನುವಾರ ಕರ್ನಾಟಕ ಪತ್ರಕರ್ತರ ಸಂಘ ಹನೂರು ತಾಲ್ಲೂಕು ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ರೈತರು ಸೇರಿದಂತೆ ಚಲನಚಿತ್ರ ನಿರ್ದೇಶಕ ಚೇತನ್ ಕುಮಾರ್, 
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮರಗದಮಣಿ, ಲೊಕ್ಕನಹಳ್ಳಿ ಸಿ. ನಾಗರಾಜು, ಡಾ.ಚಂದ್ರಪ್ಪ, ಪರಿಸರ ಪ್ರೇಮಿ ವೆಂಕಟೇಶ್, ಕೃಷ್ಣಗೌಡ, ನರಗೀಸ್ ಭಾನು ಮುಂತಾದವರನ್ನು ಗೌರವಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು