ಕಡೇ ಕಾರ್ತಿಕ ಸೋಮವಾರ : ಮಲೆ ಮಹದೇಶ್ವರರ ದೀಪೋತ್ಸವಕ್ಕೆ ಸಕಲ ಸಿದ್ಧತೆ

 -ಶಾರುಕ್ ಖಾನ್, ಹನೂರು

ಹನೂರು :  ಕಡೇ ಕಾರ್ತಿಕ ಸೋಮವಾರ ದಂದು  ಮಲೆಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡುವಿನ ಬಳಿ ನಡೆಯುವ ದೀಪೋತ್ಸವಕ್ಕೆ (ಮಹಾಜ್ಯೋತಿ ದರ್ಶನ) ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.
ನ.21 ರ ಸೋಮವಾರ ಕಡೇ ಕಾರ್ತಿಕ ಸೋಮವಾರವಾಗಿದೆ. ಸ್ವಾಮಿಗೆ ಬೆಳಗಿನ ಜಾವ ವಿಶೇಷ ಪೂಜೆಯನ್ನು ನೆರವೇರಿಸಲಾಗುವುದಲ್ಲದೆ, ಬಸವ, ಹುಲಿ ಹಾಗೂ ರುದ್ರಾಕ್ಷಿ ವಾಹನಗಳ ಉತ್ಸವಗಳು ಜರುಗಲಿವೆ. ಜೊತೆಗೆ ರಾತ್ರಿ 7ಕ್ಕೆ ಎಂದಿನಂತೆ ಚಿನ್ನದ ತೇರಿನ ಉತ್ಸವವು ಜರುಗಲಿದೆ. ಇದರ ಜೊತೆಗೆ ಸಂಜೆ ದೀಪದಗಿರಿ ಒಡ್ಡುವಿನ ಬಳಿ ಮಹದೇಶ್ವರರ ಮಹಾಜ್ಯೋತಿ ದರ್ಶನ (ದೀಪೋತ್ಸವ) ನಡೆಯಲಿದೆ. ಆಗಮಿಸುವ ಜನರಿಗೆ ಪ್ರಾಧಿಕಾರದ ವತಿಯಿಂದ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ಶೌಚಗೃಹ ಹಾಗೂ ದಾಸೋಹ ವ್ಯವಸ್ಥೆ ಮಾಡಲಾಗಿದ್ದು, ಸೂಕ್ತ ಪೊಲೀಸ್ ಬಂದೋಬಸ್ ಮಾಡಿಕೊಡಲಾಗಿದೆ. ಮಲೆ ಮಹದೇಶ್ವರ ಸ್ವಾಮಿಗೆ ನಸುಕಿನಿಂದಲೇ ವಿಶೇಷ ಪೂಜೆಗಳು ನೆರವೇರಿದವು. ಬಿಲ್ವಾರ್ಚನೆ, ಮಹಾಮಂಗಳಾರತಿ, ಗಂಧದ ಅಭಿμÉೀಕ, ಪುμÁ್ಪರ್ಚನೆ, ರುದ್ರಾಭಿμÉೀಕ ನೆರವೇರಿಸಿದ ಬಳಿಕ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ಸಂಜೆ ವಿಶೇಷ ಅಭಿμÉೀಕ ಮಹಾ ಮಂಗಳಾರತಿ ನೈವೈದ್ಯ ನಂತರ ವಿಶೇಷ ಉತ್ಸವದೊಂದಿಗೆ ದೇವಾಸ್ಥಾನದ ದಕ್ಷಿಣ ದಿಕ್ಕಿನಲ್ಲಿರುವ ದೀಪದಗಿರಿ ಒಡ್ಡಿಗೆ ಉತ್ಸವ ಮೂರ್ತಿಯನ್ನು ಸಕಲ ಬಿರುದಾವಳಿಯೊಂದಿಗೆ ಶ್ರೀ ಸಾಲೂರು ಬೃಹನ್ಮಠದ ಶ್ರೀಗಳ ನೇತೃತ್ವದಲ್ಲಿ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಉತ್ಸವ ಮಾಡುತ್ತಾ, ದೇವಸ್ಥಾನ ಆಗಮಿಕರು ಮತ್ತು ಬೇಡಗಂಪಣ ಅರ್ಚಕರು ಪುಣ್ಯಾಹ ಸ್ವಸ್ತಿವಾಚನ ಪಂಚಕಲಶ, ದಿಕ್ಪಾಲಕರ ಪೂಜೆ ಹೋಮಹವನಾದಿ ಶುದ್ಧಿಕರಣ ಪೂಜೆ ಮಾಡಲಾಯಿತು. ಅನಂತರ ಮಹಾಜ್ಯೋತಿ ದೀಪಕ್ಕೆ μÉೂೀಡಶೋಪಚಾರ ಪೂಜೆ ಮಾಡಿ ಶ್ರೀ ಮಠದ ಪೀಠಾಧಿಪತಿ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿಗಳು ದೀಪವನ್ನು  ಪ್ರಜ್ವಲಿಸುವ ಮೂಲಕ ಪೂಜಾಕಾರ್ಯವನ್ನು ನೆರವೇರಿಸಿದರು.

ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಗಳು, ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಂದ ಬಂದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಮಹದೇಶ್ವರ ದರ್ಶನ ಮಾಡಿದರು. ವಿವಿಧ ಸೇವೆಗಳನ್ನು ಸಲ್ಲಿಸಿ ಹರಕೆ ತೀರಿಸಿದರು.
ಜಾತ್ರೆಯ ಅಂಗವಾಗಿ ದೇವಾಲಯದ ಹೊರ ಆವರಣವಲ್ಲದೇ, ಒಳಾಂಗಣದಲ್ಲೂ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಮಹದೇಶ್ವರ ಸ್ವಾಮಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು.
ದಾಸೋಹ ವ್ಯವಸ್ಥೆ: 
ದೇವಾಲಯಕ್ಕೆ ಭೇಟಿ ನೀಡಿದ್ದ ಭಕ್ತರಿಗೆ ದಾಸೋಹ ವ್ಯವಸ್ಥೆ (ತಿಂಡಿ) ಮಾಡಲಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆ, 
ರಾತ್ರಿ 8:30 ನಂತರ ತಾನೆ ದೀಪದ ಗಿರಿ ಒಡ್ಡಿನಲ್ಲಿ ದೀಪೋತ್ಸವವೂ ವಿಜೃಂಭಣೆಯಿಂದ ಜರುಗಿತು. ಹಾಗೂ ಕಡೇ ಕಾರ್ತೀಕದ  ಧಾರ್ಮಿಕ ವಿಧಿವಿಧಾನಗಳಂತೆ ಎಲ್ಲ ಪೂಜೆಗಳೂ ಸಂಪನ್ನಗೊಂಡವು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು