ಮಾರಕಾಸ್ತ್ರದಿಂದ ಇರಿದು ಬಿಜೆಪಿ ಮಾಜಿ ಮುಖಂಡನ ಬರ್ಬರ ಹತ್ಯೆ

ಕಲಬುರಗಿ : ಮಾರಕಾಸ್ತ್ರದಿಂದ ಇರಿದು  ಬಿಜೆಪಿ ಮಾಜಿ ಮುಖಂಡನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ನಡೆದಿದೆ.
ಮಲ್ಲಿಕಾರ್ಜುನ್ ಮುತ್ಯಾಲ ಹಣಮನಳ್ಳಿ (64) ಮೃತ  ಬಿಜೆಪಿ ಮಾಜಿ ನಾಯಕ ಎಂದು ಗುರುತಿಸಲಾಗಿದೆ. ಕೋಲಿ ಕಬ್ಬಲಿಗ ಸಮಾಜದ ತಾಲೂಕು ಘಟಕದ ಮುಖಂಡರಾಗಿದ್ದ ಮಲ್ಲಿಕಾರ್ಜುನ್, ಸೇಡಂ ಪಟ್ಟಣದ ಕೆಇಬಿ ಕಚೇರಿ ಎದುರು ವಿಷ್ಣು ಎಲೆಕ್ಟ್ರಾನಿಕ್ಸ್ ಎಂಬ ಹೆಸರಿನ ಎಲೆಕ್ಟ್ರಾನಿಕ್ ಅಂಗಡಿ ಹೊಂದಿದ್ದರು. ರಾತ್ರಿ ಅಂಗಡಿಯಲ್ಲಿಯೇ ಮಲಗಿದ್ದ ವೇಳೆ ಹಿಂಬಾಗಿಲಿನಿಂದ ಅವರನ್ನು ಸಂಪರ್ಕಿಸಿದ ದುಷ್ಕರ್ಮಿಗಳು ಅಂಗಡಿಯಿಂದ ಹೊರಕ್ಕೆ ಕರೆದು ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾರೆ.

ಈ ಬಗ್ಗೆ ಸೇಡಂ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಕೊಲೆಗೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ ತನಿಖೆ ನಡೆದಿದೆ.   ಮುತ್ಯಾಲ ಬಿಜೆಪಿ ಹಿಂದುಳಿದ ವರ್ಗದ ಉಪಾಧ್ಯಕ್ಷರಾಗಿದ್ದರು. ಇತ್ತೀಚೆಗೆ ಅವರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು