ಗೃಹ ಬಳಕೆ ಅಡುಗೆ ಅನಿಲ ಕಾಳ ಸಂತೆಯಲ್ಲಿ ಮಾರಾಟ ಆರೋಪ : ಸಿಲಿಂಡರ್ ರಸ್ತೆಗಿಟ್ಟು ಗ್ರಾಹಕರ ಪ್ರತಿಭಟನೆ

ವರದಿ-ಶಾರುಕ್ ಖಾನ್, ಹನೂರು

ಹನೂರು : ಅಡುಗೆ ಅನಿಲ ಸಮರ್ಪಕವಾಗಿ ಪೂರೈಕೆ ಮಾಡದ ಕಾರಣ ಗ್ರಾಹಕರು ಗ್ಯಾಸ್ ಸಿಲಿಂಡರ್ ರಸ್ತೆಗಿಟ್ಟು ಪ್ರತಿಭಟನೆ ನಡೆಸಿದ ಘಟನೆ ಮಲೆ ಮಹದೇಶ್ವರಬೆಟ್ಟ ಗ್ರಾಮದ ಮುಖ್ಯರಸ್ತೆಯಲ್ಲಿ ಗುರುವಾರ ಮದ್ಯಾಹ್ನ ನಡೆಯಿತು.
ಗ್ರಾಮದ ಇಂಡೇನ್ ಗ್ಯಾಸ್ ಏಜೆನ್ಸಿಯವರು ಗೃಹ ಬಳಕೆ ಅನಿಲ ಸಿಲಿಂಡರ್‍ಗಳನ್ನು ಕಾಳ ಸಂತೆಯಲ್ಲಿ ಹೋಟೆಲ್‍ಗಳಿಗೆ ಮತ್ತು ಫಾಸ್ಟ್ ಫುಡ್ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದು, ಕಳೆದ 3 ತಿಂಗಳಿಂದಲೂ ಸಹ ನಮಗೆ ಸಮರ್ಪಕವಾಗಿ ಸಿಲಿಂಡರ್  ಪೂರೈಕೆ ಮಾಡುತ್ತಿಲ್ಲ ಎಂದು ಗ್ರಾಹಕರು ಆರೋಪಿಸಿದರು.
ಇಂದೂ ಸಹ ಬೆಳಿಗ್ಗೆ 9 ಗಂಟೆಯಿಂದ ಮದ್ಯಾಹ್ನ 12 ಗಂಟೆ ತನಕವೂ ಕಾದು ಸಿಲಿಂಡರ್ ನೀಡದ ಕಾರಣ ಬೇಸತ್ತ ಗ್ರಾಹಕರು ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಲ್ಲಿ ಸಿಲಿಂಡರ್ ಇಟ್ಟು ಪ್ರತಿಭಟನೆ ನಡೆಸಿದರು.
ಇದೇ ವೇಳೆ ಪೋಲಿಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ ಮನವೋಲಿಸಿದಾಗ ಪ್ರತಿಭಟನೆ ಹಿಂಪಡೆಯಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು