ಮೂರು ದಿನಗಳ ``ಪುನೀತೋತ್ಸವ’’ ಪ್ರಚಾರ ವಾಹನಕ್ಕೆ ಸಿ.ಅಶೋಕ್, ಶಿವರಾಜು ಚಾಲನೆ

ಪಾಂಡವಪುರ : ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ನವೆಂಬರ್,25 ರಿಂದ ಮೂರು ದಿನಗಳ ಕಾಲ ನಡೆಯುವ ``ಪುನೀತೋತ್ಸವ’’ ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರಚಾರ ವಾ ಹನಕ್ಕೆ ಮಂಡ್ಯ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಅಶೋಕ್ ಹಾಗೂ ಎಸ್‍ಟಿಜಿ ಶಿಕ್ಷಣ ಸಂಸ್ಥೆಯ ಸಿಇಒ ಸಿ.ಪಿ.ಶಿವರಾಜು ಕನ್ನಡ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಿ.ಪಿ. ಶಿವರಾಜು ಮಾತನಾಡಿ, ಪಾಂಡವ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿರುವ ``ಪುನೀತೋತ್ಸವ’’ ಕಾರ್ಯಕ್ರದ ಪ್ರ ಯುಕ್ತ ಐದು ಪ್ರಚಾರ ವಾಹನಗಳು ಹೋಬಳಿಗೆ ಒಂದರಂತೆ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ತೆರಳಿ ಕಾರ್ಯಕ್ರಮದ ಬಗ್ಗೆ ಪ್ರಚಾರ ನಡೆಸುತ್ತವೆ. ಪುನೀತ್ ರಾಜಕುಮಾರ್ ಅವರ ಜನಪರ ನಿಸ್ವಾರ್ಥ ಸೇವೆಯ ಸ್ಮರಣೆ ಹಾಗೂ ಅವರ ದಾರಿಯಲ್ಲಿ ಇಂದಿನ ಯುವ ಜನತೆ ಸಾಗುವ ದೃಷ್ಟಿಯಿಂದ ಈ ಕಾರ್ಯಕ್ರಮ ರೂಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕೆಂದು ಅವರು ಕೋರಿದರು. 
ಇದೇ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬೆಳ್ಳಾಳೆ ಮಲ್ಲೇಶ್ ಮಾತನಾಡಿ, ಶಾಸಕ ಸಿ.ಎಸ್.ಪುಟ್ಟರಾಜು ಅವರು ನಮ್ಮ ತಾಲ್ಲೂಕಿನ ಸಾಂಸ್ಕøತಿಕ ರಾಯಭಾರಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ಪುನೀತ್ ರಾಜಕುಮಾರ್ ಸ್ಮರಣೆ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮೂರು ದಿನಗಳ ಕಾಲ ಅದ್ಧೂರಿ ಸಾಂಸ್ಕøತಿಕ ಸಂಭ್ರಮ  ನಡೆಸಲಾಗುವುದು. ಡಾ.ರಾಜಕುಮಾರ್ ಕುಟುಂಬದವರು ಸೇರಿದಂತೆ ಕನ್ನಡ ಚಿತ್ರರಂಗದ ಹೆಸರಾಂತ ನಟ, ನಟಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ತಾಲ್ಲೂಕಿನ ಜನತೆಗೆ ಅವರನ್ನು ಖುದ್ದು ನೋಡಿ ಸಂಭ್ರಮಿಸುವ ಅವಕಾಶ ಸಿಕ್ಕಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅವರು ಕೋರಿದರು.
ಮಂಡ್ಯ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಅಶೋಕ್, ಪುರಸಭೆ ಅಧ್ಯಕ್ಷೆ ಅರ್ಚನಾಚಂದ್ರು, ಸದಸ್ಯರಾದ ಇಮ್ರಾನ್ ಷರೀಫ್, ಸುನೀತಾ, ಗಿರೀಶ್, ಸೋಮಶೇಖರ್, ಜೆಡಿಎಸ್ ಮುಖಂಡ ಟೌನ್ ಚಂದ್ರು, ಕಸಪಾ ಅಧ್ಯಕ್ಷ ಮೇನಾಗರ ಪ್ರಕಾಶ್ ಇನ್ನಿತರರು ಇದ್ದರು.



 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು