ಬಿಆರ್‍ಸಿ ಕೇಂದ್ರದ ಮುಂಭಾಗ ಶಿಕ್ಷಕರ ಫೈಟಿಂಗ್ : ಸಿಸಿ ಟಿವಿಯಲ್ಲಿ ದಾಖಲು
ನವೆಂಬರ್ 03, 2022
ವರದಿ-ಶಾರುಕ್ ಖಾನ್ ಹನೂರು
ಹನೂರು : ಶಿಕ್ಷಕರಿಬ್ಬರು ಪಟ್ಟಣದ ಬಿಆರ್‍ಸಿ ಕೇಂದ್ರದ ಎದುರು ಮಾರಾಮಾರಿ ನಡೆಸಿದ ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಇದೀಗ ಎಲ್ಲೆಡೆ ವೈರಲ್ ಆಗಿದೆ. ಒಬ್ಬ ಶಿಕ್ಷಕ ಮತ್ತು ಪ್ರಭಾರ ಬಿಆರ್‍ಸಿ ಇಬ್ಬರು ಮೊದಲು ಮಾತನಾಡಿ ನಂತರ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ ಘಟನೆಯೂ ನಡೆದಿದೆ. ಈ ನಡುವೆ ಮತ್ತಿಬ್ಬರು ಶಿಕ್ಷಕರು ಇವರ ಫೈಟಿಂಗ್ ಬಿಡಿಸಿದ್ದಾರೆ.
ಶಿಕ್ಷಕರ ಮಾರಾಮಾರಿಗೆ ಕಾರಣ ತಿಳಿದು ಬಂದಿಲ್ಲ. ಆದರೆ, ಶಿಕ್ಷಕರು ಹೊಡೆದಾಡಿಕೊಂಡಿದ್ದು, ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ತನಿಖೆ ನೆಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
0 ಕಾಮೆಂಟ್‌ಗಳು