`ಅರ್ಥವಿಲ್ಲದ ಬಿಜೆಪಿ ಜನಸಂಕಲ್ಪ ಯಾತ್ರೆ ; ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಲೇವಡಿ

ಮೈಸೂರು : ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವ ಸಾಧನೆ ಮಾಡದಿದ್ದರೂ ಯಾವ ಅರ್ಥದಲ್ಲಿ ಜನಸಂಕಲ್ಪ ಸಮಾವೇಶ ಆಯೋಜಿಸುತ್ತಿದೆ ಎಂಬುದು ತಿಳಿಯದು ಎಂದು ಕೆಪಿಸಿಸಿ ವಕ್ತಾರರಾದ ಎಚ್.ಎ. ವೆಂಕಟೇಶ್ ಲೇವಡಿ ಮಾಡಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿರೋಧ ಪಕ್ಷವಾಗಿ ಕಾಂಗ್ರೆಸ್ ಪಕ್ಷವು ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳ ವೈಫಲ್ಯ ಎತ್ತಿ ಹೇಳುತ್ತಿದೆ. ಆದರೆ ಕಳೆದ ಚುನಾವಣೆ ವೇಳೆ ಜನರಿಗೆ ನೀಡಿದ್ದ ಪ್ರಣಾಳಿಕೆಯಲ್ಲಿನ ಯಾವ ಭರವಸೆ ಈಡೇರಿಸಲಾಗಿದೆ ಎಂಬುದನ್ನು ಬಿಜೆಪಿ ತಿಳಿಸಲಿ. ಜೊತೆಗೆ ಕಾಂಗ್ರೆಸ್ ಸಹಾ ತಾನು ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆ ತಿಳಿಸಲಿದೆ. ಈ ಕುರಿತು ಬಿಜೆಪಿ ಜೊತೆಗೆ ಚರ್ಚೆಗೆ ತಮ್ಮ ಪಕ್ಷ ಸಿದ್ಧವಿದೆ ಎಂದು ಸವಾಲೆಸೆದರು.
ಇನ್ನು, ಬಿಜೆಪಿ ಆಡಳಿತದ ವೇಳೆ ನಿರುದ್ಯೋಗ ಹೆಚ್ಚಿದೆ. ದುಡಿಯುವ ಕೈಗಳಿಗೆ ಸರ್ಕಾರ ಉದ್ಯೋಗ ನೀಡುತ್ತಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಿನಲ್ಲಿ ಸರ್ಕಾರಿ ಕಾಲೇಜುಗಳನ್ನು ಮುಚ್ಚಲಾಗುತ್ತಿದೆ. ಇದೇ ವೇಳೆ ಬಿ.ಎಸ್. ಯಡಿಯೂರಪ್ಪ ಸ್ಥಳೀಯ ಭ್ರಷ್ಟರಾಗಿದ್ದರೆ, ಬಸವರಾಜ ಬೊಮಾಯಿ ಅವರು ಅಂತಾರಾಷ್ಟ್ರೀಯ ಭ್ರμÁ್ಟಚಾರಿಯಾಗಿದ್ದಾರೆಂದು ವ್ಯಂಗ್ಯವಾಡಿದರು.
ಬಳಿಕ, ಬಿಟ್ ಕಾಯಿನ್ ಹಗರಣ ಅಂತಾರಾಷ್ಟ್ರೀಯ ಮಟ್ಟದ್ದಾಗಿದ್ದರೂ ಅದರ ಬಗ್ಗೆ ತನಿಖೆ ನಡೆಸದೇ ಕಾಂಗ್ರೆಸ್‍ನವರ ವಿರುದ್ಧ ಇಡಿ ದಾಳಿ ನಡೆಸಲಾಗುತ್ತಿದೆ. ಆದ್ದರಿಂದ ಕಾಂಗ್ರೆಸ್ ಮುಕ್ತ ರಾಜ್ಯ ಮಾಡುತ್ತೇವೆ ಎನ್ನುತ್ತಿರುವ ಬಿಜೆಪಿಯವರಿಗೆ ಜನರು ಚುನಾವಣೆ ವೇಳೆ ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಬಗ್ಗೆ ಭಯವಿರುವ ಕಾರಣದಿಂದಲೇ ಬಿಜೆಪಿಯವರು ಕಾಂಗ್ರೆಸ್ ಪಕ್ಷದವರ ವಿರುದ್ಧ ಟೀಕೆ ಮಾಡುತ್ತಿದ್ದಾರೆಂದರು.
ಇದೇ ವೇಳೆ ಇಲ್ಲಿನ ಸಂಸದರು ಅಲ್ಲಲ್ಲಿ ಫೋಟೋ ತೆಗೆಸಿಕೊಳ್ಳುವುದು, ತಾವು ಮಾಡದ ಕೆಲಸವನ್ನು ತಾವೇ ಮಾಡಿದ್ದೆಂದು ಹೇಳಿಕೊಳ್ಳುವುದರಲ್ಲೇ ನಿರತರಾಗಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಎನ್.ಎಸ್. ಗೋಪಿನಾಥ್, ಮಹೇಶ್, ಇನ್ನಿತರರು ಹಾಜರಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು