ಶ್ರೀಕಂಠೇಶ್ವರನ ಹುಂಡಿಯಲ್ಲಿ ಒಂದೂವರೆ ಕೋಟಿ ನಗದು, 64 ವಿದೇಶಿ ಕರೆನ್ಸಿಗಳು ಸಂಗ್ರಹ
ನವೆಂಬರ್ 04, 2022
ಹುಂಡಿಯಲ್ಲಿ 167 ಗ್ರಾಂ ಚಿನ್ನ, 9 ಕೆ.ಜಿ 150 ಗ್ರಾಂ ಬೆಳ್ಳಿ ಹಾಕಿರುವ ಭಕ್ತರು
-ಹೆಚ್.ಎಸ್.ಚಂದ್ರ, ನಂಜನಗೂಡು
ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಹುಂಡಿ ಪರ್ಕಾವಣೆ ಕಾರ್ಯ ಶುಕ್ರವಾರ ನಡೆಸಲಾಗಿದ್ದು ಹುಂಡಿಯಲ್ಲಿ 1 ಕೋಟಿ 52 ಲಕ್ಷದ 75 ಸಾವಿರದ 136 ರೂ ನಗದು, 167 ಗ್ರಾಂ ಚಿನ್ನ , 9 ಕೆ.ಜಿ 150 ಗ್ರಾಂ ಬೆಳ್ಳಿ , 64 ವಿದೇಶಿ ಕರೆನ್ಸಿಗಳು ಸಂಗ್ರಹಗೊಂಡಿದೆ ಎಂದು ದೇವಾಲಯದ ಎಇಒ ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ. ಕಳೆದ ಸೆಪ್ಟೆಂಬರ್ 16 ರಂದು ದೇವಾಲಯದ ಹುಂಡಿ ಪರ್ಕಾವಣೆ ಕಾರ್ಯ ನಡೆಸಲಾಗಿತ್ತು. ಮತ್ತೆ ಒಂದೂವರೆ ತಿಂಗಳ ಅವಧಿಯಲ್ಲಿ ದೇವಾಲಯದ ಹುಂಡಿಯಲ್ಲಿ 1 ಕೋಟಿ 52 ಲಕ್ಷದ 75 ಸಾವಿರ ಸಂಗ್ರಹಗೊಳ್ಳುವ ಮೂಲಕ ಶ್ರೀಕಂಠೇಶ್ವರ ಮತ್ತೆ ಕೋಟ್ಯಾಧೀಶ್ವರನಾಗಿದ್ದಾನೆ. ಹುಂಡಿ ಪರ್ಕಾವಣೆ ಕಾರ್ಯದಲ್ಲಿ ಸ್ವಸಹಾಯ ಮಹಿಳಾ ಸಂಘದ ಸದಸ್ಯರು ಭಾಗಿಯಾಗಿದ್ದರು.
0 ಕಾಮೆಂಟ್‌ಗಳು