3 ಪರ್ಸೆಂಟ್ ಜನರು ದೇಶದ 99 ಪರ್ಸೆಂಟ್ ಖಜಾನೆ ಖಾಲಿ ಮಾಡುತ್ತಿದ್ದಾರೆ : ಪ್ರೊ.ರವಿವರ್ಮ ಕುಮಾರ್ ಆತಂಕ

ಮೈಸೂರು : 3 ಪರ್ಸೆಂಟ್ ಮೇಲ್ವರ್ಗದ ಜನರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10 ಮೀಸಲಾತಿ ಪಡೆಯುವ ಮೂಲಕ ದೇಶದ 99 ಪರ್ಸೆಂಟ್ ಖಜಾನೆಯನ್ನು ಖಾಲಿ ಮಾಡುತ್ತಿದ್ದಾರೆ ಎಂದು ಖ್ಯಾತ ನ್ಯಾಯವಾದಿ, ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ಬಿ.ರವಿವರ್ಮ ಕುಮಾರ್ ಆತಂಕ ವ್ಯಕ್ತಪಡಿಸಿದರು. 
ಮೈಸೂರು ರಾಮಕೃಷ್ಣ ನಗರದ ರಮಾಗೋವಿಂದ ರಂಗಮಂದಿರದಲ್ಲಿ 
ಮೈಸೂರಿನ ವಿಚಾರವಾದಿ ಬಳಗ ಏರ್ಪಡಿಸಿದ್ದ ಡಾ.ಹರೀಶ್ ಕುಮಾರ್ ಬರೆದಿರುವ ``ಸಿದ್ಧರಾಮಯ್ಯ 75 ಸಮಾಜವಾದಿ-ಜನನಾಯಕನ-ಜೀವನ-ಸಿದ್ಧಾಂತ-ಸಾಧನೆ’’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಶೇ.10 ಇಡಬ್ಲೂಎಸ್ ಮೀಸಲಾತಿ ಹೋರಾಟದಲ್ಲಿ ಸುಪ್ರೀಂ ಕೋರ್ಟ್‍ನಲ್ಲೂ ನಮಗೆ ಸೋಲಾಗಿದೆ. ಆದರೆ, ಕಾಂಗ್ರೆಸ್ ಪಕ್ಷ ಒಂದು ಸ್ಪಷ್ಟ ನಿರ್ಧಾರ ಕೈಗೊಂಡು ಸುಪ್ರೀಂ ಕೋರ್ಟ್ ತೀರ್ಪಿನ ಪುನರ್ ಪರಿಶೀಲನೆಗೆ ಅರ್ಜಿ ಸಲ್ಲಿಸಬೇಕು. ಸಿದ್ದರಾಮಯ್ಯ ಮೊದಲಿನಿಂದಲೂ ಶೇ.10 ಮೀಸಲಾತಿಯ ವಿರುದ್ಧ ಇದ್ದಾರೆ. ಅವರ ಒತ್ತಾಸೆಯಿಂದಲೇ ಕಾಂಗ್ರೆಸ್ ಪಕ್ಷ ತನ್ನ ನಿಲುವು ಬದಲಿಸಿದೆ. ಆಂಟಿ ಡಿಫೆಕ್ಷನ್ ಕಾನೂನು ಜಾರಿ ಬಂದ ಬಳಿಕ ಯಾವುದೇ ಪಕ್ಷದಲ್ಲಿ ಪ್ರಜಾತಂತ್ರ ಉಳಿದಿಲ್ಲ. ಯಾವುದೇ ಚರ್ಚೆ ಇಲ್ಲದೆ 24 ಗಂಟೆಯಲ್ಲಿ ಶೇ.10 ಇಡಬ್ಲೂಎಸ್ ಮೀಸಲಾತಿ ಕಾನೂನು ಜಾರಿ ಮಾಡಿ ಶೇ.50 ಇದ್ದ ಮೀಸಲಾತಿಗೆ ಸಂವಿಧಾನ ತಿದ್ದುಪಡಿ ತಂದು ಶೇ.60 ಮಾಡಲಾಯಿತು. ಎಲ್ಲ ಜಾತಿಗಳಿಗೂ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಯಬೇಕು ಎಂದರು.
ಇಂದು ರಾಜ್ಯದ ಯಾವುದೇ ಪತ್ರಿಕೆ, ಚಾನಲ್‍ಗಳಲ್ಲಿ ನಿರಂತರವಾಗಿ ಕವರೇಜ್ ಗಿಟ್ಟಿಸುತ್ತಿರುವುದೇ ಸಿದ್ದರಾಮಯ್ಯ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏನು ಕೆಲಸ ಮಾಡದಿದ್ದರೂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದು  ಗಮನಾರ್ಹ.
ಸಿದ್ದರಾಮಯ್ಯ ತಾವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಘೋಷಣೆ ಮಾಡಿದ ಅನ್ನಭಾಗ್ಯ ಯೋಜನೆ ಕರ್ನಾಟದಲ್ಲಿ ಜಾರಿಯಾದ ಸಮಯದಲ್ಲಿ ಪಕ್ಕದ ರಾಜ್ಯಗಳಾದ ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ನಿರಂತರಾಗಿ ಜನರು ಹಸಿವಿನಿಂದ ಸಾಯುತ್ತಿದ್ದರು. ಅನ್ನಭಾಗ್ಯ ಯೋಜನೆ ಜಾ ರಿಯಾ ದ ಬಳಿಕ ಕರ್ನಾಟದದಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಹಸಿವಿನಿಂದ ಸಾಯಲಿಲ್ಲ. ಇದು ಅನ್ನಭಾಗ್ಯ ಯೋಜನೆಯ ಬಹುದೊಡ್ಡ ಸಾಧನೆ. ಜತೆಗೆ ಬಾಲಕಾರ್ಮಿಕ ಪ್ರವೃತ್ತಿ ತಾಂಡವವಾಡುತ್ತಿದ್ದ ಈ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಯಾದ ನಂತರ ಕ್ರಮೇಣ ಬಾಲಕಾರ್ಮಿಕ ಪದ್ಧತಿ ಕ್ಷೀಣಿಸಿ ಸರ್ವಶಿಕ್ಷ ಅಭಿಯಾನದ ಸಾಕ್ಷತ್ಕಾರವಾಯಿತು. ಸಿದ್ದರಾಮಯ್ಯ ತಮ್ಮ ಆಡಳಿತದ ಅವಧಿಯಲ್ಲಿ ಗುಟ್ಕಾ ನಿಷೇಧ ಮಾಡಿದ್ದನ್ನು ನಾಡಿನ ಪ್ರಖ್ಯಾತ ವಕೀಲರುಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಕೊನೆಗೆ ಸಿದ್ದರಾಮಯ್ಯ ಅವರೇ ಗೆದ್ದರು. ಇದರಿಂದ ಲಕ್ಷಾಂತರ ಜನರು ತಂಬಾಕು ಸೇವನೆ ಬಿಟ್ಟು ಕ್ಯಾನ್ಸರ್ ರೋಗದಿಂದ ಮುಕ್ತರಾದರು ಎಂದರು.

ಸಿದ್ದರಾಮಯ್ಯ ಸರ್ಕಾರದ ಕಾರ್ಯಕ್ರಮಗಳ ತುಲನಾತ್ಮಕ ಅಧ್ಯಯನ ನಡೆಯಬೇಕು. ಯಾವ ಯೋಜನೆ ಎಷ್ಟು ಜನರಿಗೆ ಅನುಕೂಲವಾಗಿದೆ ಎಂಬುದು ಗೊತ್ತಾಗಬೇಕು. 
ಕಾಂಗ್ರೆಸ್ ಪಕ್ಷ ಇಡಬ್ಲ್ಯೂ ಎಸ್ ಮೀಸಲಾತಿ ವಿಚಾರ ಮರು ಪರಿಶೀಲಿಸಲು ಮುಂದಾಗಿದೆ ಎನ್ನುವುದು ಸಂತೋಷದ ವಿಷಯ ಸಿದ್ದರಾಮಯ್ಯ ಅವರು ರಾಷ್ಟ್ರಕ್ಕೆ ಮಾದರಿಯಾಗುವ ನಾಯಕರು ಅವರನ್ನು ಕುರಿತು ರಾಜಕೀಯ ವಿಜ್ಞಾನಿಯಾಗಿರುವ ಡಾ.ಹರೀಶ್ ಪೂರಕ ಮಾಹಿತಿಗಳನ್ನು ಅಧಿಕೃತವಾಗಿ ಪಡೆದು ಅತ್ಯುತ್ತಮ ಪುಸ್ತಕ ಬರೆದಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಎಂಎಲ್‍ಸಿ ಡಾ.ಡಿ.ತಿಮ್ಮಯ್ಯ, ಪ್ರಗತಿಪರ ಚಿಂತಕ ಪ.ಮಲ್ಲೇಶ್, ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು, ಲೇಖಕ ಡಾ ಹರೀಶ್ ಕುಮಾರ್, ಕೆ.ಎಸ್.ಶಿವರಾಮು ಇನ್ನಿತರರು ಇದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು