20 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಎಸ್.ಪುಟ್ಟರಾಜು ಭೂಮಿಪೂಜೆ

ಪಾಂಡವಪುರ : ಸುಮಾರು 20 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ಸಣಬ, ತಿರುಮಲಾಪುರ, ಕೆರೆತೊಣ್ಣೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಎಸ್.ಪುಟ್ಟರಾಜು ಭೂಮಿಪೂಜೆ ಸಲ್ಲಿಸಿದರು.

ಬಳಿಕ ಅವರು ಮಾತನಾಡಿ, ಲೋಕೋಪಯೋಗಿ ಇಲಾಖೆ ವತಿಯಿಂದ ಅತ್ಯಂತ ಗುಣಮಟ್ಟದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಹಿಂದೆ ಈ ಕಾಮಗಾರಿಯು 16.5 ಕೋಟಿಗೆ ಟೆಂಡರ್ ಆಗಿತ್ತು. ಈಗ 3.80 ಕೋಟಿ ಹೆಚ್ಚುವರಿ ಅನುದಾನ ಸಿಕ್ಕಿದೆ. ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಗುಣಮಟ್ಟದಲ್ಲಿ ಮಾಡಲಾಗುವುದು ಈ ಮೂಲಕ ಕೆರೆ ತೊಣ್ಣೂರು ಗ್ರಾಮದಿಂದ ಬ್ಯಾಟರಾಯನಪುರ ಮಾರ್ಗವಾಗಿ ತಿರುಮಲಾಪುರ, ಸಣಬದ ಕೊಪ್ಪಲು, ಕಾಮನಾಯಕನ ಹಳ್ಳಿ ಮಾರ್ಗವಾಗಿ ನೀಲನಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸಲಾಗುತ್ತದೆ ಎಂದರು. 

ಈ ಸಂದರ್ಭದಲ್ಲಿ ಸಣಬ ಗ್ರಾಪಂ ಸದಸ್ಯೆ ಜಯಲಕ್ಷ್ಮಿ, ಕೆರೆತೊಣ್ಣೂರು ಗ್ರಾಪಂ ಸದಸ್ಯರಾದ ಲೋಕೇಶ್, ಶ್ವೇತಾ, ಮುಖಂಡರಾದ ಕರಿಗಿರಿಗೌಡ, ಕೃಷ್ಣೇಗೌಡ, ನಾಗಣ್ಣ, ರಾಮು, ತಿಮ್ಮೇಗೌಡ, ವಿಜೇಂದ್ರ, ಚನ್ನಕೃಷ್ಣ ಮುಂತಾದವರು ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು