ಸರಗಳ್ಳನ ಬಂಧನ : 13 ಲಕ್ಷ ಮೌಲ್ಯದ 290 ಗ್ರಾಂ ಚಿನ್ನಾಭರಣ ವಶ
ನವೆಂಬರ್ 02, 2022
ಮೈಸೂರು : ನಗರದ ಸರಸ್ವತಿಪುರಂ, ಕೃಷ್ಣರಾಜ ಅಪರಾಧ ಪತ್ತೆ ದಳ ಮತ್ತು ಅಶೋಕಪುರಂ ಠಾಣೆಯ ಪೋಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅ.29 ರಂದು ಒಬ್ಬ ಸರಗಳ್ಳನನ್ನು ಬಂಧಿಸಿ ಆತನಿಂದ 13 ಲಕ್ಷ ರೂ. ಮೌಲ್ಯದ 290 ಗ್ರಾಂ ಚಿನ್ನಾಭರವಣವನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿಯು ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳು ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿರುವುದಾಗಿ ತಿಳಿಸಿದ್ದು, 8 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಈ ಸಂಬಂಧ 290 ಗ್ರಾಂ ತೂಕದ 9 ಚಿನ್ನದ ಸರಗಳನ್ನು ಪೊಲೀಸರು ವಶಪಡಿಸಿಕೊಂಡಿರುತ್ತಾರೆ. ಈ ಪ್ರಕರಣದ ಪತ್ತೆಯಿಂದ ಸರಸ್ವತಿಪುರಂ, ವಿಜಯನಗರ, ಮಂಡಿ, ವಿದ್ಯಾರಣ್ಯಪುರಂ, ಕುವೆಂಪುನಗರ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯ ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಡಿಸಿಪಿ ಎಂ.ಎಸ್.ಗೀತ, ಎಸಿಪಿ ಎಸ್.ಇ. ಗಂಗಾಧರಸ್ವಾಮಿ ನೇತೃತ್ವದಲ್ಲಿ ಸರಸ್ವತಿಪುರಂ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಸಿ.ಎಂ.ರವೀಂದ್ರ, ಪಿಎಸ್‍ಐ ಎಂ.ಕೆ.ಸ್ಮಿತಾ, ಸಿಬ್ಬಂದಿಗಳಾದ ಪಿ.ಜೆ.ರಾಜು, ನಾರಾಯಣಶೆಟ್ಟಿ, ಹೆಚ್.ಜೆ.ಲೋಕೇಶ್, ಮೋಹನ್ ಕುಮಾರ್, ರಾಘವೇಂದ್ರ, ಉಮೇಶ್, ಮಂಜು, ಬಸವರಾಜು, ಮನ್ಯಾಳ್, ಪವನ್, ರವಿಕುಮಾರ್, ಮಹೇಶ್, ಸಾಗರ್, ಸುರೇಶ್, ಹರೀಶ್‍ಕುಮಾರ್, ವೆಂಕಟೇಶ್, ಶ್ರೀನಿವಾಸ, ಸೋಮಶೇಖರ, ಶಿಲ್ಪಾ, ಹರೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪತ್ತೆ ಕಾರ್ಯವನ್ನು ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಶ್ಲಾಘಿಸಿದ್ದಾರೆ.
0 ಕಾಮೆಂಟ್‌ಗಳು