ಚಾಮುಂಡೇಶ್ವರಿ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಸಭೆಯಲ್ಲಿ 112 ಜನರಿಗೆ ಸಾಗುವಳಿ ಮಂಜೂರು

 ಮೈಸೂರು : ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ  ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆದ ಅಕ್ರಮ-ಸಕ್ರಮ ಸಮಿತಿ ಸಭೆಯಲ್ಲಿ ನಮೂನೆ-53 ಮತ್ತು ನಮೂನೆ-57 ರಲ್ಲಿ ಅರ್ಜಿ ಸಲ್ಲಿಸಿದ್ದ 112 ಜನರಿಗೆ ಸಾಗುವಳಿ ಮಂಜೂರು ಮಾಡಲಾಯಿತು.
ಚಾಮುಂಡೆಶ್ವರಿ ಕ್ಷೇತ್ರದ ದೊಡ್ಡಮಾರಗೌಡನಹಳ್ಳಿ-16, ಕಮರಹಳ್ಳಿ-2, ಕರಕರನಹಳ್ಳಿ-5, ಯಚಲಹಳ್ಳಿ-8, ಬೊಮ್ಮೇನಹಳ್ಳಿ-19,  ನಾಗವಾಲ-16, ಚಿಕ್ಕನಹಳ್ಳಿ-27, ರಟ್ನಹಳ್ಳಿ-6, ದಡದಹಳ್ಳಿ-3,  ಎಸ್.ಹೆಮ್ಮನಹಳ್ಳಿ-1, ಗುಂಗ್ರಾಲ್‍ಛತ್ರ-4, ಕಲೂರು ನಾಗನಹಳ್ಳಿ-5 ಜನರು ಸೇರಿದಂತೆ ಒಟ್ಟು 112 ಜನರಿಗೆ ಸಾಗುವಳಿಯನ್ನು ಇಂದು ನಡೆದ ಅಕ್ರಮ-ಸಕ್ರಮ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಅಕ್ರಮ-ಸಕ್ರಮ ಸಮಿತಿ ಸಭೆಯಲ್ಲಿ ನಮೂನೆ-53 ಮತ್ತು ನಮೂನೆ-57 ರಲ್ಲಿ ಒಟ್ಟು 1692 ಅರ್ಜಿಗಳನ್ನು ಸಲ್ಲಿಸಿದ್ದು, ಅವುಗಳಲ್ಲಿ 402 ಅರ್ಜಿಗಳು ಮೈಸೂರು ನಗರದಿಂದ 10 ಕಿ.ಮೀ.ವ್ಯಾಪ್ತಿಯೊಳಗೆ ಬರುವುದರಿಂದು ತಿರಸ್ಕರಿಸಿದ್ದು, ಉಳಿಕೆ 1178 ಅರ್ಜಿಗಳ ಪೈಕಿ 917 ಅರ್ಜಿಗಳು ಸ್ವೀಕೃತವಾಗಿದ್ದು, ಈ ಅರ್ಜಿಗಳು ಗೋಮಾಳ, ಹಿಡುವಳಿ, ಕೆರೆ/ಕಟ್ಟೆ ಜಮೀನುಗಳಿಗೆ ಸಂಬಂಧಪಟ್ಟಿರುವ ಕಾರಣ 261 ಅರ್ಜಿಗಳು ವರದಿಗಾಗಿ ಬಾಕಿ ಇಡಲಾಗಿದೆ. 
ಚಿಕ್ಕನಹಳ್ಳಿ, ಮಾವಿನಹಳ್ಳಿ, ಗುಮ್ಮಚನಹಳ್ಳಿ, ಮದ್ದೂರು, ಅರಸನಕೆರೆ ಗ್ರಾಮಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯವರು ಜಂಟಿಯಾಗಿ ಸರ್ವೆ ಮಾಡಬೇಕಾಗಿರುವುದರಿಂದ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯವರು ಜಂಟಿಯಾಗಿ ಸರ್ವೆ ಮಾಡಿ ವರದರಿಯನ್ನು ಡಿಸೆಂಬರ್ ತಿಂಗಳೊಳಗೆ ನೀಡಲು ಸೂಚಿಸಲಾಯಿತು.
ಸಭೆಯಲ್ಲಿ ತಹಶೀಲ್ದಾರ್ ಗಿರೀಶ್, ಸದಸ್ಯರುಗಳಾದ ಹೂಟಗಳ್ಳಿ ರವಿ, ಪ್ರಮೀಳಾ ನಾಯಕ್, ಜೆ.ಪಿ.ರತ್ನಮ್ಮ,  ಎ.ಡಿ.ಎಲ್.ಆರ್. ವಿವೇಕ್, ಆರ್.ಎಫ್.ಓ. ಸುರೇಂದ್ರ, ಉಪತಶೀಲ್ದಾರ್‍ಗಳಾದ ನಿಂಗಪ್ಪ, ಕುಬೇರ, ಲೋಕೇಶ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು