ಅನ್ನದಾತನಿಂದಲೂ ೪೦ ಪರ್ಸೆಂಟ್ ಕಮಿಷನ್ ವಸೂಲಿ : ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ.


 ಮಂಡ್ಯ : ರಾಜ್ಯದಲ್ಲಿ ಅನ್ನ ಕೊಡುವ ರೈತರು ಮತ್ತು ಕಾರ್ಮಿಕರಿಂದಲೂ ೪೦ ಪರ್ಸೆಂಟ್ ಕಮಿಷನ್ ಪಡೆಯುವ ಅತ್ಯಂತ ಭ್ರಷ್ಟ ಸರ್ಕಾರವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಭಾರತ್ ಜೋಡೋ ಯಾತ್ರೆ ಉದ್ಧೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ೪೦ ಪರ್ಸೆಂಟ್ ಕಮಿಷನ್ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಪ್ರತಿಯೊಬ್ಬರಿಂದಲೂ ೪೦ ಪರ್ಸೆಂಟ್ ತೆಗೆದುಕೊಳ್ಳುತ್ತಾರೆ. ರೈತರು ಕಾರ್ಮಿಕರಿಂದಲೂ ೪೦ ಕಮಿಷನ್ ಪಡೆಯುತ್ತಾರೆ. ಇಂತಹ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಡಬೇಕು ಎಂದು ಹೇಳಿದರು. 


ದಲಿತ ಮಹಿಳೆಯರಿಂದ ಬೆಲ್ಲದಾರತಿ :

ಭಾರತ್ ಜೋಡೋ ಪಾದಯಾತ್ರೆ ಕೆನ್ನಾಳು ಗ್ರಾಮದಿಂದ ಪಾಮಡವಪುರಕ್ಕೆ ಹೋಗುವಾಗ ಮಾರ್ಗಮಧ್ಯೆ ಸಿಗುವ ಹರಳಹಳ್ಳಿ ಗ್ರಾಮದಲ್ಲಿ ದಲಿತ ಮಹಿಳೆಯರು ರಾಹುಲ್ ಗಾಂಧಿಯವರಿಗೆ ಬೆಲ್ಲದಾರತಿ ಎತ್ತಿ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಮತ್ತು ಮುಖಂಡರು ಈ ಕಾರ್ಯಕ್ರಮ ಆಯೋಜಿಸಿದ್ದರು. ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೂಡು, ರಂಗಾಯಣ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ) ಕಾಂಗ್ರೆಸ್ ಮುಖಂಡರಾದ ಶೆಟ್ಟಳ್ಳಿ ಮಂಜು ಇನ್ನಿತರರು ಇದ್ದರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು