ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಎದುರು ರಾಹುಲ್ ಗಾಂಧಿ ಕಬ್ಬು ಜಗಿಯುತ್ತಿರುವ ಫೋಟೋ ವೈರಲ್

ಪಾಂಡವಪುರ : ತಾಲ್ಲೂಕಿನ ಜೀವನಾಡಿ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ (ನಿರಾಣಿ ಶುರ‍್ಸ್) ಎದುರು ರಾಹುಲ್ ಗಾಂಧಿ ಕಬ್ಬು ಜಗಿಯುತ್ತಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ರೈತರ ಸಂತಸಕ್ಕೆ ಪಾರವಿಲ್ಲದಂತಾಗಿದೆ.
ರಾಹುಲ್ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಶ್ರೀರಂಗಪಟ್ಟಣ ತಾಲ್ಲೂಕಿನ ಗಡಿ ಗ್ರಾಮವಾದ ದರಸಗುಪ್ಪೆ ದಾಟಿ ಪಾಂಡವಪುರ ತಾಲ್ಲೂಕಿಗೆ ಕಾಲಿಡುತ್ತಿದ್ದಂತೆ ರಸ್ತೆ ಬದಿಯಲ್ಲಿ ಎದುರಾಗುವ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಎದುರು ಕಬ್ಬು ತುಂಬಿದ ಗಾಡಿಗಳನ್ನು ಕಂಡು ಪುಳಕಿತರಾದ ರಾಹುಲ್ ಗಾಂಧಿ ಕಬ್ಬಿನ ಜಲ್ಲೆ ಮುರಿದು ಜಗಿದರು. ಈ ವೇಳೆ ರೈತರೊಂದಿಗೆ ಕೆಲಕಾಲ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಿದರು.
ರಾಹುಲ್ ಕಬ್ಬು ಜಗಿಯುತ್ತಿರುವ ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೂರಾರು ಜನರು ಹಂಚಿಕೊಂಡಿದ್ದಾರೆ.
ಕೆಲವರ ಅಭಿಪ್ರಾಯ ಈ ಕೆಳಕಂಡಂತಿದೆ
`ನನ್ ಮಗನ್ದ್ ದಂ ಇದ್ರೆ ತಾಕತ್ ಇದ್ರೆ ಹಿಂಗೆ ಕಬ್ಬು ಸಿಗಿದಾಕ್ಲಿ, ನೋಡ್ಮಾ, ನೋಡೇ ಬುಡ್ಮಾ’
-ಷಣ್ಮುಖೇಗೌಡ,

`ಮಂಡ್ಯದ ರಸ್ತೆಗಳಲ್ಲಿ ಅಷ್ಟೊತ್ತು ನಡೆದು ಕಬ್ಬು ತಿನ್ನಲಿಲ್ಲ ಅಂದರೇ..?
-ದೊಡ್ಡಿಪಾಳ್ಯ ನರಸಿಂಹಮೂರ್ತಿ
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು