ಸಚಿವ ಸೋಮಣ್ಣರಿಂದ ದಲಿತ ಮಹಿಳೆಗೆ ಕಪಾಳ ಮೋಕ್ಷ ಖಂಡಿಸಿ ಮುಡಿಗೊಂಡ ಸೇತುಬೆ ಬಳಿ ರೈತಸಂಘ, ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ

 ವರದಿ-ಶಾರುಕ್ ಖಾನ್, ಹನೂರು 

ಹನೂರು : ಗುಂಡ್ಲುಪೇಟೆ ತಾಲೂಕಿನ ಅಂಗಳ ಗ್ರಾಮದಲ್ಲಿ ಚಾಮರಾಜನಗರ ಜಿಲ್ಲೆ ಉಸ್ತುವಾರಿ ಸಚಿವ ವಿ.ಸೋಮಣ್ಣ ಒಬ್ಬ ದಲಿತ ಮಹಿಳೆಯ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿರುವುದು ಹೀನ ಕೃತ್ಯ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಆಮ್ ಆದ್ಮಿ ಪಾರ್ಟಿ ವತಿಯಿಂದ ಮುಡಿಗೊಂಡ ಸೇತುವೆ ಬಳಿ ಸೋಮಣ್ಣ ವಿರುದ್ಧ ರಸ್ತೆ ತಡೆ ಪ್ರತಿಭಟನೆ ನಡೆಯಿತು. 
ಸಚಿವ ವಿ.ಸೋಮಣ್ಣ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಹರೀಶ್, ನಾಗೇಂದ್ರ, ಕೆಂಪಣ್ಣ, ನಿಂಗರಾಜಣ್ಣ, ರೇವಣ್ಣ, ಮಹದೇವ ನಾಯಕ, ಸುರೇಶ್, ಲೋಕೇಶ,  ರವಿ, ಸುಂದರ್, ಶಶಿಕುಮಾರ್, ಪ್ರದೀಪ್ ಹಾಗೂ  ಕರ್ನಾಟಕ ರಾಜ್ಯ ರೈತ ಸಂಘದ ಗೌಡೇಗೌಡ, ರವಿನಾಯ್ಡು, ಶಿವರಾಂ, ಶಿವಕುಮಾರ್, ಮಾದೇವ, ಮಾದೇವಪ್ಪ, ದೊಡ್ಡಯ್ಯ, ಮಹಿಳಾ ಘಟಕದ ಕನಕಮ್ಮ, ಮಾರಿಮುತ್ತು, ಮಾದೇವಿ, ವೇಲು ಸ್ವಾಮಿ, ಮಹೇಶ, ರಾಜಣ್ಣ ವೆಂಕಟೇಶ್ ಹಾಗೂ ಇನ್ನಿತರರು ರಸ್ತೆ ತಡೆ ಚಳುವಳಿಯಲ್ಲಿ ಭಾಗವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು