ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಕುರುಬ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ

ವರದಿ-ಶಾರುಕ್ ಖಾನ್, ಹನೂರು 

ಹನೂರು : ಶಿಕ್ಷಣದಿಂದ ಜಗತ್ತಿನ ಅರಿವು ಹೆಚ್ಚಾಗುವುದಲ್ಲದೇ ತಮ್ಮ ಕುಟುಂಬದ ಶಕ್ತಿಯೂ ಬಲವಾಗುತ್ತದೆ. ಜತೆಗೆ ನಮ್ಮ ಗ್ರಾಮಾಭಿವೃದ್ಧಿ, ದೇಶಾಭಿವೃದ್ಧಿಯೂ ಆಗುವ ಕಾರಣ ಎಲ್ಲರೂ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂದು ಎಎಪಿ ಪಕ್ಷದ ಮುಖಂಡ  ಮತ್ತಿಪುರ ನಾಗೇಂದ್ರ ತಿಳಿಸಿದರು 
ಶ್ರೀ ಶಿವಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಕೊಳ್ಳೇಗಾಲ ತಾಲೂಕು ಕುರುಬರ ಸಂಘ ಹಾಗೂ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕುರುಬ ಸಮುದಾಯದ ವಿದ್ಯಾರ್ಥಿಗಳ  ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. 
ಸಮುದಾಯದ ಮಕ್ಕಳು ಹೆಚ್ಚು ಶಿಕ್ಷಿತರಾಗಬೇಕು. ಇದರಿಂದ ತಮ್ಮ ಮುಂದಿನ ಪೀಳಿಗೆಯೂ ವಿದ್ಯಾವಂತರಾಗುತ್ತಾರೆ. ಇದರಿಂದ ಉತ್ತಮ ಸಮಾಜ ನಿರ್ಮಾಣ ವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಕುರುಬ ಸಂಘ ರಾಜ್ಯಾಧ್ಯಕ್ಷ  ಸುಬ್ರಹ್ಮಣ್ಯ, ಕೊಳ್ಳೇಗಾಲ ತಾಲೂಕು ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಮತ್ತು ಸಮುದಾಯದ ಮುಖಂಡರು ಇದ್ದರು.
ಕಾರ್ಯಕ್ರಮದಲ್ಲಿ ಮತ್ತಿಪುರದ ಪ್ರಕೃತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಾಗೇಂದ್ರ ಮತ್ತು ಹರೀಶ್ ಅವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ನೆನಪಿನ ಕಾಣಿಕೆಯನ್ನು ನೀಡಿದರು. 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು