ದಲಿತ ಮಹಿಳೆಗೆ ಸಚಿವ ಸೋಮಣ್ಣ ಕಪಾಳಮೋಕ್ಷ ಖಂಡಿಸಿ ನಂಜನಗೂಡಿನಲ್ಲೂ ಪ್ರತಿಭಟನೆ

 ವರದಿ-ಹೆಚ್.ಎಸ್.ಚಂದ್ರ, ನಂಜನಗೂಡು

ನಂಜನಗೂಡು : ದಲಿತ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳ ಮೋಕ್ಷ ಮಾಡಿದ್ದನ್ನು ಖಂಡಿಸಿ ರೈತ, ದಲಿತ ಮತ್ತು ವಿವಿಧ ಸಂಘಟನೆಗಳಿಂದ ನಂಜನಗೂಡಿನಲ್ಲಿ ಪ್ರತಿಭಟನೆ ನಡೆಯಿತು.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಅಂಗಳ ಗ್ರಾಮದಲ್ಲಿ ವಸತಿ ಸಚಿವ ವಿ. ಸೋಮಣ್ಣ ಹಕ್ಕು ಪತ್ರ ವಿತರಣೆ ವೇಳೆ ವಿಧವೆ ಮಹಿಳೆಯು ತನ್ನ ಕಷ್ಟವನ್ನು ಹೇಳಿಕೊಂಡು ನನಗೂ ಒಂದು ನಿವೇಶನ ಕೂಡಿ ಎಂದು ಕೇಳಿದ ಸಂದರ್ಭದಲ್ಲಿ ಸಚಿವರು ಮಹಿಳೆಯ ಕಪಾಳಕ್ಕೆ ಹೊಡೆದುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಚಿವರ ನಡವಳಿಕೆಯನ್ನು ಖಂಡಿಸಿ ನಂಜನಗೂಡಿನ ಅಂಬೇಡ್ಕರ್ ಸರ್ಕಲ್‍ನಲ್ಲಿ ಸಾಮೂಹಿಕ ನಾಯಕತ್ವದಡಿಯಲ್ಲಿ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಸಚಿವರ ವಿರುದ್ಧ ಘೋಷಣೆ ಕೂಗಿ ರಾಜಿನಾಮೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಇಮ್ಮಾವು ರಘು, ಸತೀಶ್ ರಾವ್, ಕನಕ ನಗರ ಶಿವಣ್ಣ, ಮಹದೇವು, ಮಂಜು, ಅಳಗಂಚಿಪುರ ದೊಡ್ಡಯ್ಯ, ವಳಗೆರೆ ಮಹದೇವಸ್ವಾಮಿ, ಕುಮಾರ್ ಇನ್ನಿತರರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು