ದಸರಾ ಹಬ್ಬವನ್ನು ಅಧಿಕೃತವಾಗಿ ನಾಡಹಬ್ಬ ಎಂದು ಘೋಷಿಸಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲಬೇಕು


 1972ರಲ್ಲಿ ಮೈಸೂರಿನವರೇ ಆದಂತಹ ದೇವರಾಜ ಅರಸು ಅವರು ನಾಡಿನ ಮುಖ್ಯಮಂತ್ರಿಯಾಗಿದ್ದರು. ಜೊತೆಗೆ ಮೈಸೂರಿನ ಶಾಸಕ ಜಯದೇವರಾಜ ಅರಸು ಅವರು ಅರಸು ಸಂಬಂಧಿಕರಾಗಿದ್ದರು. ಹೀಗಾಗಿ ಎಲ್ಲರೂ ಸೇರಿ ಮುಖ್ಯಮಂತ್ರಿ ದೇವರಾಜು ಅರಸು ಅವರನ್ನ ಭೇಟಿಯಾಗಿ ದಸರಾ ಹಬ್ಬವನ್ನ ಸರ್ಕಾರವೇ ಮುಂದಾಳತ್ವ ತೆಗೆದುಕೊಂಡು ಆಚರಿಸುವಂತೆ ಮನವಿ ಮಾಡುತ್ತಾರೆ. ಆ ಮನವಿಯನ್ನು ಒಪ್ಪಿದ ದೇವರಾಜ ಅರಸು ಅವರು, ಸರ್ಕಾರವೇ ದಸರಾ ಆಚರಿಸುವ ಸಂಪ್ರದಾಯವನ್ನ 1972ರಲ್ಲಿ ಆರಂಭಿಸುತ್ತಾರೆ. ಕನ್ನಡಾಂಬೆ ಹಾಗೂ ಭಾರತಾಂಬೆಯ ಫೋಟೋ ಬದಲು ನಾಡದೇವತೆಯಾದ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವಂತೆ ಸೂಚಿಸುತ್ತಾರೆ.. ಅμÉ್ಟೀ ಅಲ್ಲ, ಅದಕ್ಕಾಗಿ ಅರಮನೆಯಲ್ಲಿದ್ದ ಬಂಗಾರದ ಸಿಂಹಾಸನವನ್ನೂ ತರಿಸುತ್ತಾರೆ. ದಸರಾ ಹಬ್ಬಕ್ಕಾಗಿ ಸರ್ಕಾರದಿಂದ ಇಂತಿಷ್ಟು ಹಣವನ್ನ ಕೂಡ ಮೀಸಲಿಡುತ್ತಾರೆ. ಅಲ್ಲಿಂದಲೇ ದಸರಾ ಅಧಿಕೃತವಾಗಿ ನಾಡಹಬ್ಬವಾಗಿದ್ದು. ಜಂಬೂ ಸವಾರಿಯಲ್ಲಿ ತಾಯಿ ಚಾಮುಂಡೇಶ್ವರಿಯ ಮೆರವಣಿಗೆ ಆರಂಭವಾಗಿದ್ದು.

ಇಂಟರೆಸ್ಟಿಂಗ್ ಏನಂದ್ರೆ ದಸರಾ ಮೆರವಣಿಗೆಯಲ್ಲಿ ತಾಯಿ ಚಾಮುಂಡೇಶ್ವರಿಗೆ ಪುμÁ್ಪರ್ಚನೆ ಮಾಡಿದ ಮೊಟ್ಟ ಮೊದಲ ಮುಖ್ಯಮಂತ್ರಿ ಎನಿಸಿಕೊಂಡವರು ಕೂಡ ದೇವರಾಜ ಅರಸು ಅವರೇ. ಅರಸು ಆರಂಭಿಸಿದ ನಾಡಹಬ್ಬ ಇಂದಿಗೂ ನಿಂತಿಲ್ಲ. ಇಡೀ ವಿಶ್ವವನ್ನೇ ತನ್ನತ್ತ ಸೆಳೆಯುತ್ತಿದೆ. ಮೈಸೂರು ಪರಂಪರೆಯನ್ನ ಜಗತ್ತಿಗೆ ಸಾರುತ್ತಿದೆ..ರಾಜ ವಂಶಸ್ಥರು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಸುವ ಮೂಲಕ ಪರಂಪರೆಯನ್ನ ಮುಂದುವರೆಸಿದ್ದಾರೆ. 

ಲೇಖಕರು-ಜಾಕೀರ್ ಹುಸೇನ್ 
(ಅಧ್ಯಕ್ಷರು ಡಿ.ದೇವರಾಜ ಅರಸು ಪ್ರತಿಮೆ  ಪ್ರತಿಷ್ಠಾಪನಾ ಸಮಿತಿ ಮೈಸೂರು)



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು