ಚಾಮುಂಡಿಪುರಂನಲ್ಲೂ ಪಟಾಕಿ ವ್ಯಾಪಾರ ಜೋರು : ಹಸಿರು ಪಟಾಕಿಗೆ ಬೇಡಿಕೆ

ಮೈಸೂರು : ಎರಡು ವರ್ಷಗಳ ನಂತರ ಬೆಳಕಿನ ಹಬ್ಬ ದೀಪಾವಳಿಯನ್ನು ನಾಡಿನ ಜನತೆ ಸಾರ್ವಜನಿಕವಾಗಿ ಆಚರಿಸುತ್ತಿದ್ದು, ಪಟಾಕಿಗಳಿಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ.
ಎರಡು ವರ್ಷಗಳ ಕಾಲ ದೀಪಾವಳಿ ಸಂಭ್ರಮವನ್ನು ಕಸಿದುಕೊಂಡಿದ್ದ ಕೋರೋನಾ ಈ ಬಾರಿ ನೆಮ್ಮದಿಯನ್ನು ನೀಡಿರುವ ಕಾರಣ ಜನರು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಲ್ಲೆಡೆ ಭಾರಿ ಸದ್ದು ಮಾಡುವ ಪಟಾಕಿ ಬಿಕರಿಯಾಗುತ್ತಿಲ್ಲ. ಮತ್ತು ಸಾರ್ವಜನಿಕರು ಕಡಿಮೆ ಶಬ್ದ ಉಂಟು ಮಾಡುವ ಪಟಾಕಿಯನ್ನು ಕೊಳ್ಳುತ್ತಿರುವುದು ಕಂಡು ಬಂತು. ಜತೆಗೆ ಹಸಿರು ಪಟಾಕಿಗಳಿಗೂ ಹೆಚ್ಚು ಬೇಡಿಕೆ ಉಂಟಾಗಿದೆ. ಚಾಮುಂಡಿಪುರಂ ಪಾರ್ಕ್ ಸಮೀಪ ಹತ್ತಾರು ಅಂಗಡಿಗಳಲ್ಲಿ ಪಟಾಕಿ ವ್ಯಾಪಾರ ಭರ್ಜರಿಯಾಗಿ ಸಾಗಿದೆ.

ಪಟಾಕಿ ಹೊಡೆಯಲು ಜನ ಉತ್ಸಾಹದಲ್ಲಿದ್ದಾರೆ
ಎರಡು ವರ್ಷಗಳ ಕಾಲ ಪಟಾಕಿ ಹೊಡೆಯದೆ ಹಬ್ಬದ ಸಂಭ್ರಮದಿಂದ ದೂರವಾಗಿದ್ದ ಜನರು ಈ ವರ್ಷ ಪಟಾಕಿ ಹೊಡೆಯಲು ಉತ್ಸಾಹ ತೋರುತ್ತಿದ್ದಾರೆ. ವಿಶೇಷವಾಗಿ ಈ ಬಾರಿ ಚೈನಾ ಪಟಾಕಿ ಬದಲು ಭಾರತ ದೇಶದಲ್ಲಿ ತಯಾರಾದ ಪಟಾಕಿಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬಿಕರಿಯಾಗುತ್ತಿವೆ. ಕಡಿಮೆ ಸದ್ದು ಉಂಟು ಮಾಡುವ ಪಟಾಕಿಗಳು ಮತ್ತು ಹಸಿರು ಪಟಾಕಿಗೆ ಬೇಡಿಕೆ ಹೆಚ್ಚಾಗಿದೆ.
ಮೈಸೂರು ದಿಲೀಪ್, ಪಟಾಕಿ ಮಾರಾಟಗಾರರು 
  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು