ಮೈಸೂರು ಜಿಲ್ಲಾ ಫೋಟೋ ಗ್ರಾಫರ್ಸ್ ಮತ್ತು ವಿಡಿಯೋ ಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಪಿ.ಮಹೇಶ್ ಭರ್ಜರಿ ಗೆಲುವು

ಛಾಯಾಗ್ರಾಕರ ಕಲ್ಯಾಣಕ್ಕೆ ಸಂಘಟನೆ ಬದ್ಧವಾಗಿದೆ : ಮಹೇಶ್

ಮೈಸೂರು : ಮೈಸೂರು ಜಿಲ್ಲಾ ಫೋಟೋ ಗ್ರಾಫರ್ಸ್ ಮತ್ತು ವಿಡಿಯೋ ಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಪಿ.ಮಹೇಶ್ ಇಂದು ಚುನಾಯಿತರಾದರು.
ಸಂಘದ ಕಚೇರಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದ ಚುನಾವಣೆಯಲ್ಲಿ ಪಿ.ಮಹೇಶ್ 535 ಮತಗಳನ್ನು ಪಡೆದು ಚುನಾಯಿತರಾದರು. ಉಳಿದಂತೆ ಎಂ.ಲೋಕೇಶ್(475), ಜಿ.ಎಂ.ಸುದರ್ಶನ್(453), ಎ.ಮೋಹನ್(449), ಚೈತನ್ಯ ರಾವ್(432), ಬಿ.ಮಾದೇಶ (411), ಆರ್.ಪ್ರಮೋದ್(408), ಮಂಜುನಾಥ(398), ಜೆ.ರವಿಚಂದ್ರ(391), ಕೆ.ಉಮೇಶ್(381), ಎಂ.ಎಸ್.ಕಾಂತರಾಜ್(374), ಬಿ.ಮಂಜುನಾಥ್(368), ಹೆಚ್.ಎಸ್.ಶಿವಕುಮಾರ್(363) ಮತಗಳನ್ನು ಪಡೆದು ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಮಹೇಶ್ ಮಾತನಾಡಿ, ಸಂಘದ ಸದಸ್ಯರು ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡಿದ್ದಾರೆ. ಸದಸ್ಯರ ಕಲ್ಯಾಣಕ್ಕಾಗಿ ಶ್ರಮಿಸುತ್ತೇನೆ ಎಂದರು.


ನೂತನ ನಿರ್ದೇಶಕ ಮಂಜುನಾಥ್ ಅವರನ್ನು ಪತ್ರಕರ್ತ ಕಿಶೋರ್ ಅಭಿನಂದಿಸಿದರು
ನಿರ್ದೇಶಕರಾಗಿ ಚುನಾಯಿತರಾದ ಮಂಜುನಾಥ್ ಮಾತನಾಡಿ, ಕಳೆದ ಬಾರಿ ನಾನು ಆರೋಗ್ಯ ಸಮಿತಿ ಅಧ್ಯಕ್ಷನಾಗಿದ್ದೆ, ಈ ಬಾರಿ ನಿರ್ದೇಶಕನಾಗಿ ಚುನಾಯಿತನಾಗಿದ್ದೇನೆ. ನಮ್ಮ ಸಂಘದ ಸದಸ್ಯರು ಮತ್ತು ಕುಟುಂಬದವರಿಗೆ ಆರೋಗ್ಯನಿಧಿ ಕಲ್ಪಿಸುವ ಯೋಜನೆ ಇದೆ. ಇದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

2022-2024 ನೇ ಸಾಲಿನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ  ಮಹೇಶ್ ದಡದಹಳ್ಳಿ, ಉಪಾಧ್ಯಕ್ಷರಾಗಿ ಮಾದೇಶ್ ಬಿ., ಕಾರ್ಯದರ್ಶಿ-  ಜಿ. ಎಂ ಸುದರ್ಶನ್, ಸಹ ಕಾರ್ಯದರ್ಶಿ-ಪ್ರಮೋದ್ ಆರ್. ಖಜಾಂಚಿ- ಲೋಕೇಶ್ ಎಂ. ಜನ ಸಂಪರ್ಕಾಧಿಕಾರಿ-ಮಂಜುನಾಥ್ ಬಿ., ಆರೋಗ್ಯನಿಧಿ ಛೇರ್ಮೆನ್-ಹೆಚ್.ಎಸ್. ಶಿವಕುಮಾರ್, ಇವರೆಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದು, ನಿರ್ದೇಶಕರುಗಳಾಗಿ ಎ.ಮೋಹನ್,  ಚೈತನ್ಯ ರಾವ್, ಮಜುನಾಥ್, ರವಿಚಂದ್ರ ಜೆ, ಉಮೇಶ್ ಕೆ,  ಕಾಂತರಾಜ್ ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು.
ಚುನಾವಣಾಧಿಕಾರಿಯಾಗಿ ಎನ್.ಗೋವಿಂದ ಚುನಾವಣಾ ಕಾರ್ಯ ನಡೆಸಿಕೊಟ್ಟರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು