ಸ್ವಚ್ಛತೆ ನಿರಂತರವಾಗಿರಲಿ : ಡಾ.ನಾಗರಾಜು
ವರದಿ-ನಜೀರ್ ಅಹಮದ್, ಮೈಸೂರು
ಮೈಸೂರು : ನಗರದ ಸ್ವಚ್ಛತೆಗೆ ಎಎಸ್‍ಜಿ ಆಸ್ಪತ್ರೆಯ ಕೊಡುಗೆ ಅಪಾರವಾಗಿದೆ ಎಂದು ಮೈಸೂರು ಮಹಾನಗರಪಾಲಿಕೆ ಉಪ ಮೇಯರ್ ಡಾ.ರೂಪ ಹೇಳಿದರು.
ನಗರದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಎಎಸ್‍ಜಿ ಕಣ್ಣಿನ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ `ಈ ದೀಪಾವಳಿ ಸ್ವಚ್ಛ ಮನೆ ಮಾತ್ರವಲ್ಲ, ಮೈಸೂರು ನಗರ ಕೂಡ ಸ್ವಚ್ಛವಾಗಿರಲಿ’ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರು ಎಂದಾಕ್ಷಣ ನಮಗೆ ಸಾಂಸ್ಕøತಿಕ ನಗರಿ, ಸ್ವಚ್ಛ ನಗರಿ ಎಂಬುದು ನೆನಪಾಗುತ್ತದೆ. ಹಲವಾರು ಬಾರಿ ಮೈಸೂರಿಗೆ ಸ್ವಚ್ಛ ನಗರ ಎಂಬ ಸ್ಥಾನಮಾನ ಸಿಕ್ಕಿದೆ. ನಮ್ಮ ನಗರವನ್ನು ಸ್ವಚ್ಛವಾಗಿಡಲು ಎಲ್ಲ ನಾಗರಿಕರ ಸಹಕಾರ ಅಗತ್ಯ, ಕೇವಲ ಒಂದು ದಿನ ಕಾರ್ಯಕ್ರಮ ಮಾ ಡಿದರೆ ಸಾಲದು ನಮ್ಮ ಪ್ರಯತ್ನ ನಿರಂತರವಾಗಿರಬೇಕಯ. ಈ ನಿಟ್ಟಿನಲ್ಲಿ ಪಾಲಿಕೆ ಪೌರಕಾರ್ಮಿಕರು, ಆರೋಗ್ಯಾಧಿಕಾರಿಗಳ ಸೇವೆ ಅನನ್ಯವಾಗಿದೆ. ಸಂಘ ಸಂಸ್ಥೆಯವರು ಸಹ ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.

ಮಹಾನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು ಮಾತನಾಡಿ, ದಿನನಿತ್ಯ ಮೈಸೂರು ನಗರದಲ್ಲಿ ಸುಮಾರು 450 ರಿಂದ 500 ಟನ್ ಕನ ಉತ್ಪತ್ತಿಯಾಗುತ್ತದೆ. ಇದನ್ನು ವಿಲೇವಾರಿ ಮಾಡುವುದು ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ನಮ್ಮ ಪೌರಕಾರ್ಮಿಕರ ಸಿಬ್ಬಂದಿ ಸೈನಿಕರಂತೆ ಕೆಲಸ ಮಾ ಡುತ್ತಿದ್ದಾರೆ. ಸ್ವಚ್ಛ ಮೈಸೂರು, ಆ ರೋಗ್ಯ ಮೈಸೂರು ಎಂಬ ಕೀರ್ತಿ ನಮ್ಮ ಪೌರಕಾರ್ಮಿಕರಿಗೆ ಸಲ್ಲಬೇಕು.
ಡೆಂಗ್ಯೂ, ಚಿಕನ್‍ಗುನ್ಯಾ ಮಲೇರಿಯಾ ಮುಂತಾದ ಸಾಂಕ್ರಮಿಕ ರೋಗಗಳು ಹರಡದಂತೆ ನಮ್ಮ ಆರೋಗ್ಯ ಸಿಬ್ಬಂದಿ ನಿರಂತರವಾಗಿ ಕೆಲಸ ಮಾಡುತ್ತಿದೆ.
2014 ರಲ್ಲಿ ಮೈಸೂರು ಸ್ವಚ್ಛ ನಗರ ಎಂಬ ಕೀರ್ತಿಗೆ ಪಾತ್ರವಾಗಿತ್ತು. ಆಗ ಕೇವಲ 72 ನಗರಗಳು ಮಾತ್ರ ಸ್ವರ್ಧೆಯಲ್ಲಿ ಭಾ ಗವಹಿಸಿದ್ದವು. ಈಗ ಎಲ್ಲ ನಗರಗಳೂ ಭಾಗವಹಿಸುತ್ತಿವೆ. ಸ್ವಚ್ಛ ನಗರ ಕೀರ್ತಿ ಗಳಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ. ಜನರು ತಮ್ಮ ಮನೆಗಳಲ್ಲಿ ಸಂಗ್ರಹವಾಗುವ ಹಸಿ-ಒಣ ಕಸವನ್ನು ಬೇರ್ಪಡಿಸಿ ಕೊಡಬೇಕು. ದಿನನಿತ್ಯ ಸಂಗ್ರಹವಾಗುವ 400 ಟನ್ ಕಸದಲ್ಲಿ ನಾವು ಗೊಬ್ಬರ, ಬಯೋ ಗ್ಯಾಸ್ ಉತ್ಪನ್ನ ಮಾ ಡಲಾಗುತ್ತಿದೆ. ವಿದ್ಯುತ್ ಉತ್ಪನ್ನವನ್ನೂ ಸಹ ಮಾಡಬಹುದಾಗಿದೆ. ಯಾವುದೇ ಕಾರಣಕ್ಕೂ ಒಂದು ಬಾರಿ ಉಪಯೋಗಿಸಿ ಎಸೆಯುವ ಪ್ಲಾಸ್ಟಿಕ್ ಬಳಕೆ ಮಾಡಬೇಡಿ ಎಂದು ಹೇಳಿ. ತಮ್ಮನ್ನು ಸ್ವಾಗತಿಸಲು ಆಸ್ಪತ್ರೆಯವರು ನೀಡಿದ ಬೊಕ್ಕೆಯಲ್ಲಿದ್ದ ಒಮ್ಮೆ ಮಾತ್ರ ಬಳಸುವ ಪ್ಲಾಸ್ಟಿಕ್‍ನ್ನು ತೆರೆದು ಕಸದ ಬುಟ್ಟಿಗೆ ಹಾಕಿದರು.

ನಾವು ಕಸದವರು : ಎಎಸ್‍ಜಿ ಆಸ್ಪತ್ರೆಯ ವೈದ್ಯರಾದ ಡಾ.ಪವನ್ ವಿ.ಜೋಷಿ ಮಾತನಾಡಿ, ನಗರದಲ್ಲಿ ನಮ್ಮ ಮನೆಗಳ ಮುಂದೆ ಕಸ ಸಂಗ್ರಹಿಸುವ ಪೌರಕಾರ್ಮಿಕರಿಗೆ ಕಸದವರು ಎಂದು ಹೇಳುತ್ತಾರೆ. ಯಾವುದೇ ಕಾರಣಕ್ಕೂ ಆ ರೀತಿ ಹೇಳಬೇಡಿ ವಾಸ್ತವದಲ್ಲಿ ನಾವು ಕಸದವರು. ಅವರು ನಮ್ಮನ್ನು ಸ್ವಚ್ಛ ಮಾಡುವವರು ಎಂದರು.
ದೇಶದ 19 ರಾಜ್ಯಗಳಲ್ಲಿನ 40 ಎಎಸ್‍ಜಿ ಆಸ್ಪತ್ರೆಗಳು ಸ್ವಚ್ಛ ಭಾರತ ಜಾಗೃತಿ ಅಭಿಯಾನವನ್ನು ಏಕಕಾಲಕ್ಕೆ ನಡೆಸುತ್ತಿವೆ ಎಂದರು.
ಇದೇ ಸಂದರ್ಭದಲ್ಲಿ ಉಪ ಮೇಯರ್ ಡಾ.ರೂಪ, ಡಾ.ನಾಗರಾಜು ಮತ್ತು ಎಎಸ್‍ಜಿ ಆಸ್ಪತ್ರೆಯ ವೈದ್ಯರು ಸಾಂಕೇತಿಕವಾಗಿ ಅರಮನೆ ಮುಂಭಾಗದಲ್ಲಿ ಸಂಗ್ರಹವಾಗಿದ್ದ ಕಸವನ್ನು ಗುಡಿಸಿ ತೆರವುಗೊಳಿಸಿದರು. ಕಾರ್ಯಕ್ರಮದಲ್ಲಿ ಎಎಸ್‍ಜಿ ಆಸ್ಪತ್ರೆಯ ಮುಖ್ಯಸ್ಥ ಡಾ.ರೋಷನ್, ಡಾ.ವಿನಿ ಬದಲಾನಿ, ಡಾ.ಮಹೇಶ್ ಕುಮಾರ್, ಬೈರಾಪುರ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿ.ಜಗದೀಶ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶಶಿರೇಖಾ, ಒಲವು ಪ್ರತಿಷ್ಠಾನದ ಅಧ್ಯಕ್ಷರಾದ ರಾಬರ್ಟ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.