ಕಾಂಚಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ಸರ್ದಾರ್ ವಲ್ಲಭ ಭಾಯಿ ಪಟೇಲ್ ಜನ್ಮದಿನದ ಪ್ರಯುಕ್ತ ಎಸ್‍ಡಿಎಂಸಿ ವತಿಯಿಂದ ಶೂ ವಿತರಣೆ.
ಅಕ್ಟೋಬರ್ 31, 2022
ವರದಿ-ಶಾರುಖ್ ಖಾನ್, ಹನೂರು
ಹನೂರು : ತಾಲ್ಲೂಕಿನ ಸೂಳೇರಿಪಾಳ್ಯ ಗ್ರಾಪಂ. ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ದಾರ್ ವಲ್ಲಭಾಯ್ ಪಟೇಲ್ ಜನ್ಮದಿನದ ಪ್ರಯುಕ್ತ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಗಳನ್ನ ವಿತರಿಸಲಾಯಿತು. ಇದೇ ವೇಳೆ ಮಾತನಾಡಿದ ಎಸ್ ಡಿ ಎಂ ಸಿ ಅಧ್ಯಕ್ಷರಾದ ನಂಜುಂಡೇಗೌಡ ಸರ್ಕಾರದಿಂದ ಮಂಜೂರಾದ ಅನುದಾನದಿಂದ ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಗಳನ್ನು ವಿತರಣೆ ಮಾಡಲಾಗಿದೆ. ಅದರಲ್ಲಿ 51 ಹೆಣ್ಣು ಮಕ್ಕಳಿಗೆ ಮತ್ತು 48 ಗಂಡು ಮಕ್ಕಳಿಗೆ ಒಟ್ಟು 99 ಮಕ್ಕಳಿಗೆ ಶೂ ಗಳನ್ನ ವಿತರಣೆ ಮಾಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಮಾದಪ್ಪ, ಎಸ್ ಟಿ ಎಮ್ ಸಿ ಸದಸ್ಯರಾದ ಏನಿರಾಜ್, ಜಡೇಸ್ವಾಮಿ, ಶಿಕ್ಷಕರಾದ ರವಿಚಂದ್ರ, ರಾಜು ನಾಯ್ಕ್ ಹಾಗೂ ಪೊಷಕರು ಹಾಜರಿದ್ದರು.
0 ಕಾಮೆಂಟ್‌ಗಳು