ವಾರದಿಂದಲೂ ಗ್ರಾಮದಂಚಿನಲ್ಲಿ ಹುಲಿಯ ಓಡಾಟ : ಜಮೀನಿಗೆ ಹೋಗಲು ಭಯಪಡುತ್ತಿರುವ ರೈತರು
ಅಕ್ಟೋಬರ್ 31, 2022
ವರದಿ-ಶಾರುಖ್ ಖಾನ್, ಹನೂರು
ಹನೂರು : ತಾಲ್ಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿ ಸಮೀಪದ ಎಡವರಲ್ಲಿ ಕಾರಿಡಾರ್ ಸಮೀಪ ಗ್ರಾಮದ ಅಂಚಿನಲ್ಲಿ ಒಂದು ವಾರದಿಂದಲೂ ಹುಲಿಯು ಓಡಾಡುತ್ತಿದೆ ಎಂದು ಪರಿವರ್ತನಾ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎನ್.ಕೃಷ್ಣಮೂರ್ತಿ ಆತಂಕ ವ್ಯಕ್ತಪಡಿಸಿದ್ದಾರೆ. ಸೋಮವಾರ ಮೈಸೂರು ಮೇಲ್ ನೊಂದಿಗೆ ಮಾತನಾಡಿದ ಅವರು, ವಾರದಿಂದಲೂ ಈ ಭಾಗದಲ್ಲಿ ಹುಲಿಯ ಓಡಾಟವಿದೆ. ಇದರಿಂದ ರೈತರು ತಮ್ಮ ಜಮೀನುಗಳಿಗೆ ರಾತ್ರಿ ಕಾವಲಿಗೆ ಹೋಗಲು ಹೆದರುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣದಲ್ಲಿ ಸೋಲಾರ್ ಬೇಲಿ ಅಳವಡಿಸಬೇಕೆಂದು ಆಗ್ರಹಿಸಿದರು.
0 ಕಾಮೆಂಟ್‌ಗಳು