ಸೋಲಿಗರ ಹೆರಿಗೆ ಮಾದಮ್ಮರಿಗೆ ರಾಜ್ಯೋತ್ಸವ ಪ್ರಶಸ್ತಿ : ಸಂಭ್ರಮಿಸಿದ ಸಮುದಾಯ
ಅಕ್ಟೋಬರ್ 31, 2022
ವರದಿ-ಶಾರುಖ್ ಖಾನ್, ಹನೂರು
ಹನೂರು : ಆದಿವಾಸಿ ಮಹಿಳೆ ಸೋಲಿಗರ ಮಾದಮ್ಮ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ದೊರಕಿದ್ದು, ಸೋಲಿಗ ಸಮುದಾಯ ಸಂಭ್ರಮ ವ್ಯಕ್ತಪಡಿಸಿದೆ. ಹನೂರು ತಾಲೂಕಿನ ಲೋಕನಹಳ್ಳಿ ಹೋಬಳಿಯ ಪಿಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೀರಿಗೆ ಗದ್ದೆ (ಉದ್ದಟ್ಟಿ ಗ್ರಾಮ) ಪೋಡಿಗೆ ಸೇರಿದ ಪುಟ್ಟೇ ಗೌಡರ ಪತ್ನಿ ಮಾದಮ್ಮ ಅವರು ಇಲ್ಲಿಯ ತನಕ ಸಾವಿರಾರು ಸಹಜ ಹೆರಿಗೆ ಮಾಡಿಸಿ ಮಕ್ಕಳ ನಾಟಿ ಡಾಕ್ಟರ್ ಎಂದೇ ಈ ಭಾಗದಲ್ಲಿ ಪ್ರಖ್ಯಾತಿ ಪಡೆದಿದ್ದಾರೆ. ಮಕ್ಕಳು, ಬಾಣಂತಿಯರ ಆರೈಕೆಯಲ್ಲೂ ಪರಿಣಿತಿ ಹೊಂದಿರುವ ಸೋಲಿಗರ ಮಾದಮ್ಮ ಅವರ ಸೇವೆಯನ್ನು ಗುರುತಿಸಿ ಸಂಕೀರ್ಣ ವಿಭಾಗದಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. 85 ವರ್ಷದ ವಯೋವೃದ್ಧೆ ಸೋಲಿಗರ ಮಾದಮ್ಮ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕಾಗಿ ಸರ್ಕಾರಕ್ಕೆ ಹಾಗೂ ಆಯ್ಕೆ ಸಮಿತಿಗೆ ಸೋಲಿಗ ಅಭಿವೃದ್ಧಿ ಸಂಘದವರು ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ.
0 ಕಾಮೆಂಟ್‌ಗಳು