`ಟಿಪ್ಪು ಎಕ್ಸ್‍ಪ್ರೆಸ್’ ಹೆಸರು ಬದಲಿಸಿದ ಕೇಂದ್ರ ಸರ್ಕಾರ ಇನ್ನು ಮುಂದೆ ಇದು `ಒಡೆಯರ್ ಎಕ್ಸ್ ಪ್ರೆಸ್’
ಅಕ್ಟೋಬರ್ 07, 2022
ಮೈಸೂರು ತಾಳಗುಪ್ಪ ಎಕ್ಸ್‍ಪ್ರೆಸ್ ರೈಲಿಗೆ ಕುವೆಂಪು ಎಕ್ಸ್‍ಪ್ರೆಸ್ ನಾಮಕರಣ
ನವದೆಹಲಿ : ಮೈಸೂರು ಹಾಗೂ ಬೆಂಗಳೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್‍ಪ್ರೆಸ್ ರೈಲಿನ ಹೆಸರನ್ನು ಕೇಂದ್ರ ಸರ್ಕಾರ ಬದಲಿಸಿದೆ. ಇನ್ನು ಮುಂದೆ “ಟಿಪ್ಪು ಎಕ್ಸ್‍ಪ್ರೆಸ್” ಹೆಸರು “ಒಡೆಯರ್ ಎಕ್ಸ್ ಪ್ರೆಸ್” ಎಂದು ಆಗಲಿದೆ.
ಹಾಗೆಯೇ ಮೈಸೂರು-ತಾಳಗುಪ್ಪ ಎಕ್ಸ್‍ಪ್ರೆಸ್ ರೈಲು ಕುವೆಂಪು ಎಕ್ಸ್‍ಪ್ರೆಸ್ ಆಗಿ ನಾಮಕರಣವಾಗಿದೆ. ಈ ಸಂಬಂಧ ರೈಲ್ವೆ ಮಂಡಳಿ ಉಪ ನಿರ್ದೇಶಕ ರಾಜೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಥಾಂಕ್ಯೂ ಅಶ್ವಿನಿ ವೈಷ್ಣವ್ ಮತ್ತು ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ಪ್ರಹ್ಲಾದ್ ಜೋಶಿ ಹಾಗೂ ಕುವೆಂಪು ಹೆಸರು ಸೂಚಿಸಿದ ಸ್ನೇಹಿತರಾದ ಡಿಪಿ ಸತೀಶ್ ರಿಗೆ ಧನ್ಯವಾದಗಳು ಎಂದು ಸಂಸದ ಪ್ರತಾಪ್ ಹೇಳಿದ್ದಾರೆ.
0 ಕಾಮೆಂಟ್‌ಗಳು