`ಪಟಾಕಿ ಬಿಟ್ಟಾಕಿ ಪರಿಸರ ಉಳಿಸಿ’ ಕರ್ನಾಟಕ ವೈಜ್ಞಾನಿಕ ಪರಿಷತ್, ಪ್ರಗತಿಪರ ಸಂಘಟನೆಗಳ ಆಂದೋಲನ

ಪಟಾಕಿ ಬದಲು ಹಣತೆ ಹಚ್ಚಲು ಮನವಿ

ವರದಿ-ಟಿ.ಬಿ.ಸಂತೋಷ, ಮದ್ದೂರು

ಮದ್ದೂರು : ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಾಲೋಕಿನ ಕೆ.ಎಂ.ದೊಡ್ಡಿ ಗ್ರಾಮದಲ್ಲಿ ಕರ್ನಾಟಕ ವೈಜ್ಞಾನಿಕ ಪರಿಷತ್ ಹಾಗೂ ಪ್ರಗತಿಪರ ಸಂಘಟನೆಗಳಿಂದ `ಪಟಾಕಿ ಬಿಟ್ಟಾಕಿ ಪರಿಸರ ಉಳಿಸಿ’ ಜಾಗೃತಿ ಆಂದೋಲನ ನಡೆಯಿತು.
ಪಟ್ಟಣ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಬಳಿಕ ಕರ್ನಾಟಕ ವೈಜ್ಞಾನಿಕ ಪರಿಷತ್ ಜಿಲ್ಲಾಧ್ಯಕ್ಷ ಚಿಕ್ಕರಸಿನಕೆರೆ ಶಿವಲಿಂಗಯ್ಯ ಮಾತನಾಡಿ, ಪ್ರಕೃತಿಗೆ ಹಾನಿಯಾಗುವ ಪಟಾಕಿಗಳನ್ನು ಸಿಡಿಸುವುದ್ದನ್ನ ಬಿಟ್ಟು ಪರಿಸರ ಸಂರಕ್ಷಣೆಯನ್ನ ಮಾಡಬೇಕು. ಪಟಾಕಿಯಿಂದ ಪರಿಸರ ಹಾಳಾಗುವುದರ ಜತೆಗೆ ಪ್ರಾಣಿ ಪಕ್ಷಿ ಸಂಕುಲಗಳಿಗೆ ಪ್ರಾಣ ಹಾನಿಯುಂಟು ಮಾಡುತ್ತದೆ ಎಂದರು.
ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಪಟಾಕಿ ಬದಲು ಹಣತೆಯ ದೀಪವನ್ನು ಹಚ್ಚಿ ದೀಪಾವಳಿ ಹಬ್ಬವನ್ನು ಆಚರಿಸುವಂತೆ ಮನವಿ ಮಾಡಿದರು. 
ಸುಧಾಮೂರ್ತಿ ಅಭಿಮಾನಿಗಳ ಸಂಘದ ಅಧ್ಯಕ್ಷೆ ವಸಂತಮ್ಮ, ಕರಡಕೆರೆ ಯೋಗೇಶ್, ಆಸರೆ ರಘು ವೆಂಕಟೆಗೌಡ, ಗುಡಿಗೆರೆ ಬಸವರಾಜ್, ಮುಡಿನಹಳ್ಳಿ ತಿಮ್ಮಯ್ಯ, ಸುಜಾತ, ಲೀಲಾ ರಾಮೇಗೌಡ, ವಿಜಯಲಕ್ಷ್ಮಿ, ಪುಟ್ಟಲಕ್ಷಮ್ಮ, ಸವಿತ ಮುಂತಾದವರು ಇದ್ದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು