ಕದಲೂರು ಉದಯ್ ಅವರಿಂದ ದೀಪಾವಳಿ ಉಡುಗೋರೆ : ಮದ್ದೂರಿನಲ್ಲಿ 5 ಸಾವಿರ ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ

ಆರ್ಥಿಕವಾಗಿ ಹಿಂದುಳಿದವರಿಗೆ ಆಸರೆ

 ವರದಿ-ಟಿ.ಬಿ.ಸಂತೋಷ, ಮದ್ದೂರು

ಮದ್ದೂರು : ದೀಪಾವಳಿ ಹಬ್ಬದ ಪ್ರಯುಕ್ತ ಮದ್ದೂರು ಪಟ್ಟಣದಲ್ಲಿ  ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಮಾಜ ಸೇವಕ ಕದಲೂರು ಉದಯ್ ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ಐದು ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ ಮಾಡಿದರು.  


ಕಳೆದೆರೇಡು ದಿನಗಳಿಂದ ನಿರಂತರವಾಗಿ ಮದ್ದೂರು ಪಟ್ಟಣದ ಚನ್ನೇಗೌಡ ಬಡಾವಣೆ, ಸಿದ್ದಾರ್ಥನಗರ, ರಾಮ್ ರಹಿಮ್ ನಗರ, ಕಾವೇರಿ ಬಡಾವಣೆ, ತಮಿಳು ಕಾಲೋನಿ ಮುಂತಾದ ಬಡಾವಣೆಗಳಲ್ಲಿ ಫುಡ್ ಕಿಟ್ ವಿತರಣೆ ಮಾಡಿ ಇಂದೂ ಸಹ ವಿತರಣೆ ಮುಂದುವರಿಸಿದ್ದರು.  

ಈ ಸಂದರ್ಭದಲ್ಲಿ ಅವರು ಮಾತಾನಾಡಿ, ದೀಪಾವಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಜೊತೆ ನಾವು ನಿಲ್ಲುವ ಪ್ರಯತ್ನ ಮಾಡಿದ್ದೇವೆ ಎಂದರು. 
ಗ್ರಾಪಂ ಸದಸ್ಯ ಕದಲೂರು ರವಿ, ತಿಮ್ಮೇಗೌಡ, ಗೋರವನಹಳ್ಳಿ ಮಧು, ಯತೀಶ್, ಮನೋಹರ್, ಮನು, ಹರೀಶ್ ಮುಂತಾದವರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು