ಸಮಾಜದ ಸ್ವಾಸ್ಥ್ಯ ಕಾಪಾಡುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆಯೂ ಜವಾಬ್ದಾರಿ ವಹಿಸಬೇಕು : ಕುಮಾರ್ ದೊರೆ

ಹನೂರಿನಲ್ಲಿ 52 ಪತ್ರಕರ್ತರು, ವಿತರಕರಿಗೆ ಆರೋಗ್ಯ ಭಾಗ್ಯ ಕಾರ್ಡ್ ನೋಂದಣಿ

ವರದಿ-ಶಾರುಕ್ ಖಾನ್, ಹನೂರು 

ಹನೂರು : ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಪತ್ರಕರ್ತರು ತಮ್ಮ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ಹರಿಸಬೇಕು. ಹೀಗಾಗಿ ಸರ್ಕಾರಿ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹಿರಿಯ ಪತ್ರಕರ್ತ ಕುಮಾರ್ ದೊರೆ ಸಲಹೆ ನೀಡಿದರು.  
ಪಟ್ಟಣದ ಮೈರಾಡ ಕಚೇರಿಯಲ್ಲಿ ಭಾನುವಾರ ಸಮಾನ ಮನಸ್ಕರ ಪತ್ರಕರ್ತರ ವತಿಯಿಂದ ಉಚಿತ ಆರೋಗ್ಯ ಭಾಗ್ಯ ಕಾರ್ಡ್ ನೋಂದಣಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.  
ಪತ್ರಕರ್ತರು ಸಮಾಜದ ಶೋಷಿತ ಹಾಗೂ ಬಡಜನರಿಗೆ ಸರ್ಕಾರಿ ಸವಲತ್ತು ದೊರಕಿಸಲು ಹಗಲಿರುಳು ಶ್ರಮಿಸುತ್ತಾರೆ. ತಮ್ಮದೂ ಬದುಕಿದೆ ಎನ್ನುವ ಅಂಶವನ್ನೇ ಮರೆತು ತಮ್ಮ ಆರೋಗ್ಯವನ್ನು ಬದಿಗೊತ್ತಿ ದಿನನಿತ್ಯ ಸುದ್ದಿ ಸಂಗ್ರಹದ ಧಾವಂತದಲ್ಲಿರುತ್ತಾರೆ. ಜತೆಗೆ ಬಹುತೇಕ ಪತ್ರಕರ್ತರು ಯಾವುದೇ ಸರ್ಕಾರಿ ಸವಲತ್ತು ಪಡೆಯುವ ಗೋಜಿಗೆ ಹೋಗುವುದಿಲ್ಲ. ಇದರಿಂದ ಅವರ ವ್ಯಯಕ್ತಿಕ ಮತ್ತು ಕುಟುಂಬ ಸದಸ್ಯರ ಆರೋಗ್ಯ  ಸಾಮಾಜಿಕ ಭದ್ರತೆ ಗಟ್ಟಿಪಡಿಸಿಕೂಳ್ಳದೆ ಸ್ವಯಂಕೃತ ಅಪರಾಧ ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 
ಈ ನಿಟ್ಟಿನಲ್ಲಿ ಹನೂರು ತಾಲ್ಲೂಕು ಸಮಾನ ಮನಸ್ಕ ಪತ್ರಕರ್ತರಿಂದ ಪತ್ರಿಕಾ ಏಜೆಂಟ್‍ಗಳು, ಪತ್ರಿಕಾ ವಿತರಕರಿಗೆ, ವರಧಿಗಾರರಿಗೆ ಈ ಶಿಬಿರವನ್ನು ಹಮ್ಮಿಕೂಳ್ಳಲಾಗಿದೆ ಪತ್ರಕರ್ತರು ತಮ್ಮ ಆರೋಗ್ಯ ಸುರಕ್ಷತೆಡಗಾಗಿ ಸರ್ಕಾರಿ ಸವಲತ್ತುಗಳನ್ನು ಪಡೆದುಕೂಂಡು ಸದೃಢರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಒಟ್ಟು 52 ಜನರಿಗೆ ನೋಂದಣಿ ಮಾಡಲಾಯಿತು. 
ಗ್ರಾಮ ಒನ್ ಸೇವಾ ಕೇಂದ್ರದ ನವೀದ್, ಪತ್ರಕರ್ತರಾದ ಅಭಿಲಾμï, ನಿರಂಜನ್, ಬಂಗಾರಪ್ಪ, ಸುರೇಶ್, ರವಿಗೌಡ, ನಾಗೇಂದ್ರ, ಪತ್ರಿಕಾ ವಿತರಕ ವಿಜಯ್ ಗೌಡ, ವಿಜಯ್ ಕಾಂಚಳ್ಳಿ, ಉಸ್ಮಾನ್ ಇದ್ದರು. 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು