೭ ವಾರ್ಡ್ಗಳ ಜನರಿಗೆ ಉಪಯೋಗ, ಎಲ್ಲಾ ಜಾತಿ ಪಂಗಡದವರನ್ನೂ ಇಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ
ವರದಿ-ನಜೀರ್ ಅಹಮದ್
ಮೈಸೂರು : ೧೩ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸ್ಮಶಾನದ ಕಾಂಪೌAಡ್ ನಿರ್ಮಾಣ ಕಾಮಗಾರಿಗೆ ಶಾಸಕ ತನ್ವೀರ್ ಸೇಠ್ ಬುಧವಾರ ಭೂಮಿಪೂಜೆ ಸಲ್ಲಿಸಿದರು.
ನಗರದ ಎನ್‌ಆರ್ ಮೊಹಲ್ಲಾ ೧೫ನೇ ವಾರ್ಡ್ನಲ್ಲಿನ ಹಿಂದೂ ಸ್ಮಶಾನದ ಬಳಿ ನಡೆದ ಕಾರ್ಯಕ್ರಮದಲ್ಲಿ ಭೂಮಿಪೂಜೆ ಸಲ್ಲಿಸಿ ಅವರು ಮಾತನಾಡಿ, ಈ ಭಾಗದ ಜನರ ಬಹುದಿನಗಳ ಬೇಡಿಕೆ ಇಂದು ಈಡೇರಿದೆ. ಇದೊಂದು ಶುಭಕಾರ್ಯ ಮನುಷ್ಯ ಎಷ್ಟೇ ಶ್ರೀಮಂತನಾಗಿದ್ದರೂ ಅಂತಿಮವಾಗಿ ಮಣ್ಣಿಗೆ ಸೇರಲೇಬೇಕು. ಎನ್‌ಆರ್ ಮೊಹಲ್ಲಾದಲ್ಲಿನ ಸುಮಾರು ೭ ವಾರ್ಡ್ಗಳ ಜನರಿಗೆ ಈ ಸ್ಮಶಾನ ಉಪಯೋಗವಾಗುತ್ತಿದೆ. ಮೃತರಾದ ಎಲ್ಲಾ ಜಾತಿ ಪಂಗಡದವರನ್ನೂ ಸಹ ಇಲ್ಲಿ ಅಂತ್ಯಸAಸ್ಕಾರ ಮಾಡಲಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಸ್ಮಶಾನಕ್ಕೆ ಸೇರಿದ ಜಮೀನು ವಿವಾದದಲ್ಲಿತ್ತು. ಈಗ ತೀರ್ಮಾನವಾಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದಲೂ ಅಭಿವೃದ್ಧಿಗೆ ಹಣ ಮಂಜೂರಾಗಿದೆ ಎಂದರು.
ಹೋರಾಟದ ಮೂಲಕ ಸ್ಮಶಾನಕ್ಕೆ ಜಾಗ ಒದಗಿಸಿದ ಈ ಭಾಗದ ಎಲ್ಲ ಮುಖಂಡರೂ, ಯಜಮಾನರೂ ಅಭಿನಂದನಾರ್ಹರು. ಇಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿದ್ದೇವೆ. ಉಳಿದ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ತಾವು ನೆರವು ನಿಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯ ಪ್ರದೀಪ್ ಚಂದ್ರ ಮಾತನಾಡಿ, ಎನ್‌ಆರ್ ಕ್ಷೇತ್ರದಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ಸಾಗುತ್ತಿವೆ. ಶಾಸಕರಾದ ತನ್ವೀರ್ ಸೇಠ್ ರವರು ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ ಎಂದರು.
ಮಾಜಿ ಮೇಯರ್ ದಕ್ಷಿಣಮೂರ್ತಿ, ನಗರಪಾಲಿಕೆ ಮಾಜಿ ಸದಸ್ಯ ಪುಟ್ಟಲಿಂಗು, ಕೆಪಿಸಿಸಿ ಸಂಚಾಲಕ ಶೌಕತ್ ಅಲಿಖಾನ್, ಮುಖಂಡರಾದ ಎಂ.ಎನ್.ಮಾಧು, ಸೈಯದ್ ಎಕ್ಬಾಲ್, ರಹಮಾನ್ ಖಾನ್, ಬಿಜೆಪಿ ಮುಖಂಡ ನರಸಿಂಹಮೂರ್ತಿ, ಸೈಯದ್ ಫಾರೂಖ್, ಎನ್.ಮಾದೇಗೌಡ, ಗುತ್ತಿಗೆದಾರ ಪಿ.ಬಿ.ಕರೀಗೌಡ ಮುಂತಾದವರು ಇದ್ದರು.
0 ಕಾಮೆಂಟ್‌ಗಳು