ಮೆದುಳು, ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಅಪಾಯಕಾರಿಯಲ್ಲ : ಖ್ಯಾತ ನ್ಯೂರೋ ಸರ್ಜನ್ ಡಾ.ಮಕ್ಸೂದ್ ಅಹಮದ್ ಅಭಿಪ್ರಾಯ
ಅಕ್ಟೋಬರ್ 21, 2022
ಬ್ರೈನ್ ಟ್ಯೂಮರ್ ಮತು ಬೆನ್ನುಮೂಳೆ ಯಶಸ್ವಿ ಶಸ್ತ್ರ ಚಿಕಿತ್ಸೆ ಪಡೆದ ರೋಗಿಗಳಿಂದ ವೈದ್ಯರಿಗೆ ಅಭಿನಂದನೆ
ಮೈಸೂರು : ಮೆದುಳು ಮತ್ತು ಬೆನ್ನುಮೂಳೆ ಶಸ್ತ್ರಚಿಕಿತ್ಸೆಯು ತೀರಾ ಸಂಕೀರ್ಣ, ಅಪಾಯಕಾರಿ ಯಶಸ್ಸಿನ ಪ್ರಮಾಣ ಕಡಿಮೆ, ಚಿಕಿತ್ಸೆ ಪಡೆದವರು ಶಾಶ್ವತವಾಗಿ ಅಸಮರ್ಥರಾಗುತ್ತಾರೆ ಎಂದು ಜನ ಸಾಮಾನ್ಯರಲ್ಲಿ ತಪ್ಪು ಕಲ್ಪನೆ ಉಂಟಾಗಿದ್ದು, ರೋಗಗಳನ್ನು ಮುಂಚಿತವಾಗಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಮತ್ತು ಅಗತ್ಯವೆನಿಸಿದರೆ ಶಸ್ತ್ರಚಿಕಿತ್ಸೆ ಮಾಡಿದ್ದಲ್ಲಿ ಉತ್ತಮ ಫಲಿತಾಂಶ ನೀಡಬಹುದು ಎಂದು ಮೈಸೂರು ಮಣಿಪಾಲ್ ಆಸ್ಪತ್ರೆಯ ಖ್ಯಾತ ನ್ಯೂರೋ ಸರ್ಜನ್ ಡಾ.ಮಕ್ಸೂದ್ ಅಹಮದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, `ಸಾಮಾನ್ಯವಾಗಿ, ಪ್ರತಿಯೊಂದು ತಲೆನೋವು ಬ್ರೈನ್ ಟ್ಯೂಮರ್‍ನ ಚಿನ್ಹೆಯಲ್ಲ. ಹೆಚ್ಚಿನ ತಲೆನೋವುಗಳು ವ್ಯಕ್ತಿಯನ್ನು ದುರ್ಬಲಗೊಳಿಸುವ ಸಂದರ್ಭಗಳಾಗಿದ್ದು, ಇವುಗಳು ಸೂಕ್ತ ಔಷಧಿಯಿಂದ ವಾಸಿಯಾಗಬಲ್ಲವು. ಕೇವಲ ಕೆಲವೇ ಸಂದರ್ಭದಲ್ಲಿನ ತಲೆನೋವುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಅಂದರೆ, ವಿಶೇಷವಾಗಿ ತೀವ್ರ ಸ್ವರೂಪದ ಹಠಾತ್ತನೆ ಬರುವ ತಲೆನೋವುಗಳು, ಕಡಿಮೆಯಾಗದೆ ಹೆಚ್ಚುತ್ತಾ ಹೋಗುವುದು ಮತ್ತು ತೀವ್ರ ಸ್ವರೂಪ ತಾಳುವುದು ಅಥವಾ ಕೆಲವೊಮ್ಮೆ ವಾಂತಿಯೊಂದಿಗೆ ತಲೆನೋವು ಕಾಣಿಸಿಕೊಳ್ಳುವುದು, ಮಂದ ದೃಷ್ಟಿ, ಎರಡೂ ಕಣ್ಣುಗಳಲ್ಲಿ ಮಂದದೃಷ್ಟಿ ಕಾಣಿಸಿಕೊಳ್ಳುವುದು, ಕೈಕಾಲುಗಳಲ್ಲಿ ದೌರ್ಬಲ್ಯ ಕಾಣಿಸಿಕೊಳ್ಳುವುದು ಮತ್ತು ಮಾತಿನಲ್ಲಿ ತೊದಲು ಉಂಟಾಗುವುದು. ಒಂದು ವೇಳೆ, ತಲೆನೋವಿನೊಂದಿಗೆ ಈ ಎಲ್ಲಾ ಚಿನ್ಹೆಗಳು ಕಂಡುಬಂದಲ್ಲಿ ಅಂತಹ ವ್ಯಕ್ತಿಯು ತಕ್ಷಣವೇ ರೋಗ ತಪಾಸಣೆಗಾಗಿ ತಜ್ಞರಲ್ಲಿಗೆ ಭೇಟಿ ನೀಡಬೇಕಾಗುತ್ತದೆ ಎಂದು ವಿವರಣೆ ನೀಡಿದರು.
ಬೆನ್ನು ನೋವಿಗೆ ಚಿಕಿತ್ಸೆ : ಅದೇ ರೀತಿ ಒಂದು ವೇಳೆ, ವಿಶ್ರಾಂತಿ ಪಡೆದಾಗ ಮತ್ತು ಸೂಕ್ತ ಔಷಧಿಯ ಸಹಾಯದಿಂದಲೂ ಬೆನ್ನುನೋವು ಸುಧಾರಿಸದಿದ್ದಲ್ಲಿ ಆಗ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಎಷ್ಟು ಬೇಗ ರೋಗ ಪತ್ತೆಯಾಗುತ್ತದೆಯೋ ಅಷ್ಟು ಹೆಚ್ಚು ಶಸ್ತ್ರಚಿಕಿತ್ಸೆಯಲ್ಲಿ ಯಶಸ್ಸನ್ನು ಗಳಿಸಬಹುದು ಮತ್ತು ಬದುಕುವ ಸಾಧ್ಯತೆಯು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಎಲ್ಲಾ ಪ್ರಕ್ರಿಯೆಗಳ ಯಶಸ್ಸು, ಆರಂಭಿಕವಾಗಿಯೇ ರೋಗದ ಪತ್ತೆ, ಸೂಕ್ತ ತಪಾಸಣೆ, ಮತ್ತು ತಕ್ಷಣದ ಕ್ರಿಯೆ ಶಸ್ತ್ರಚಿಕಿತ್ಸೆಯ ಯಶಸ್ಸಿನ ಪ್ರಮಾಣದ ಮೇಲೆ 95% ಕ್ಕಿಂತಲೂ ಹೆಚ್ಚು ಪರಿಣಾಮ ಬೀರುತ್ತದೆ. ಹಾಗಾಗಿ, ಸುಧಾರಿತ ಆರೋಗ್ಯಕ್ಕಾಗಿ, ಜನರು ಆರಂಭದಲ್ಲಿಯೇ ವೈದ್ಯಕೀಯ ಸಮಾಲೋಚನೆಯನ್ನು ಪಡೆಯಲು ಹಿಂದೇಟು ಹಾಕಬಾರದು, ಹಾಗೆಯೇ, ಈ ಹಿಂದೆ ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತಿತ್ತು. ಅಥವಾ ಅದೊಂದು ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಯೆಂದು ಪರಿಗಣಿಸಲ್ಪಟ್ಟಿತ್ತು, ಆದರೆ ಇಂದು ಸಮಾಜದ ದೃಷ್ಟಿಕೋನವು ತಲೆನೋವು, ಬೆನ್ನುನೋವು ಮತ್ತು ಇತರೆ ಆರೋಗ್ಯ ಸಂಬಂಧಿತ ಸಮಸ್ಯೆಗಳು ಕೂಡ ಅದರಂತೆ ಗಂಭೀರ ಸ್ವರೂಪದ್ದಾಗಿವೆ ಎಂಬುದಾಗಿದೆ. ಇದು ಕೇವಲ ಯಾವುದೇ ರೋಗದ ಅಪಾಯದ ಬಗ್ಗೆ ವೈದ್ಯಕೀಯ ನಿರ್ವಹಣೆಯ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುವುದಲ್ಲದೇ, ರೋಗಿಗೆ ಅತೀ ಬೇಗನೆ ರೋಗ ಪತ್ತೆ ಹಚ್ಚಿ, ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗುತ್ತದೆ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಯುವತಿಯೊಬ್ಬಳು ಮಾತನಾಡಿ, ತಾನು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಕೊನೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಡಾ.ಮಕ್ಸೂದ್ ಅಹಮದ್ ಚಿಕಿತ್ಸೆ ಪಡೆದು ಗುಣಮುಖಳಾದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಅದೇ ರೀತಿ ಮೈಸೂರಿನ ವ್ಯಕ್ತಿಯೊಬ್ಬರು ಬೆನ್ನು ಮೂಳೆ ನೋವಿನಿಂದ ವರ್ಷಾನುಗಟ್ಟಲೆ ನರಳಿ ಶಸ್ತ್ರ ಚಿಕಿತ್ಸೆಯನ್ನೂ ಮಾ ಡಿಸಿಕೊಂಡು ಗುಣಮುಖರಾಗದೆ ಕೊನೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಡಾ.ಮಕ್ಸೂದ್ ಅಹಮದ್ ಅವರಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಈಗ ಗುಣಮುಖರಾದ ಬಗ್ಗೆ ಮಾಹಿತಿ ನೀಡಿ ಡಾ.ಮಕ್ಸೂದ್ ಅಹಮದ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಮಣಿಪಾಲ್ ಆಸ್ಪತ್ರೆಯ ಪ್ರಮೋದ್ ಇನ್ನಿತರರು ಇದ್ದರು.
0 ಕಾಮೆಂಟ್‌ಗಳು