ಹನೂರು : ಕಾಂಗ್ರೆಸ್ ಹಿರಿಯ ಮುಖಂಡ ಅಬ್ರಾರ್ ಅಹಮದ್ ನಿಧನ

ಗಣ್ಯರ ಸಂತಾಪ

ಅಬ್ರಾರ್ ಅಹಮದ್ 

ವರದಿ-ಶಾರುಕ್ ಖಾನ್, ಹನೂರು 

ಹನೂರು : ತಾಲ್ಲೂಕಿನ  ಕಾಂಗ್ರೆಸ್ ಹಿರಿಯ ಮುಖಂಡ ಅಬ್ರಾರ್ ಅಹಮದ್ (47) ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ತಾಲ್ಲೂಕಿನ ಬಂಡಳ್ಳಿ ಗ್ರಾಮ ಪಂಚಾಯತಿಗೆ 2 ಅವಧಿಗೆ  ಸದಸ್ಯರಾಗಿ ಆಯ್ಕೆಯಾಗಿದ್ದರು. ಜತೆಗೆ ಕಾಂಗ್ರೇಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರೂ ಸಹ ಆಗಿದ್ದರು. 2 ದಿನದ ಹಿಂದೆ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾದ ಅಬ್ರಾರ್ ಅಹಮದ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟರು. 
ಮೃತರು ಮಡದಿ, ಇಬ್ಬರು ಗಂಡು ಮಕ್ಕಳು ಅಪಾರ ಬಂಧು ಬಳಗ ಹಾಗೂ ಬೆಂಬಲಿಗರನ್ನು ಅಗಲಿದ್ದಾರೆ
ಬಂಡಳ್ಳಿ ಗ್ರಾಮದ  ಮುಸ್ಲಿಂ ಸ್ಮಶಾನದಲ್ಲಿ ಮೃತರ ಅಂತ್ಯಕ್ರಿಯೆ  ನಡೆಯಿತು. 
ಸಂತಾಪ : ಶಾಸಕ ನರೇಂದ್ರ, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಬಿಜೆಪಿ ಜಿಲ್ಲಾ ಓಬಿಸಿ ಸಂಯೋಜಕ ಜನಧ್ವನಿ ವೆಂಕಟೇಶ್, ಜೆಡಿಎಸ್ ಜಿ
ಲ್ಲಾಧ್ಯಕ್ಷ  ಎಮ್.ಆರ್. ಮಂಜುನಾಥ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದತ್ತೇಶ್ ಕುಮಾರ್, ಸಮಾಜ ಸೇವಕ ಮುಜಮಿಲ್ ಪಾμÁ ಅಬ್ರಾರ್ ಅಹಮದ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.