ಚಾಮರಾಜನಗರ ಜಿಲ್ಲೆ ಗ್ರಾಮ ಪಂಚಾಯ್ತಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ

 ವರದಿ-ಶಾರುಕ್ ಖಾನ್, ಹನೂರು 
ಚಾಮರಾಜನಗರ  : ಜಿಲ್ಲೆಯ ಮೂರು ಗ್ರಾಮ ಪಂಚಾಯ್ತಿಗಳಿಗೆ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
ಹನೂರು ತಾಲ್ಲೂಕಿನ ಸೂಳೇರಿ ಪಾಳ್ಯ ಗ್ರಾಪಂ ಗಂಗನದೊಡ್ಡಿ ಕ್ಷೇತ್ರ, ಪುಣಜರ ಗ್ರಾಪಂ ಕ್ಯಾತದೇವರಗುಡಿ ಕ್ಷೇತ್ರ ಹಾಗೂ ಯಳಂದೂರು ತಾಲೂಕಿನ ಅಂಬಳೆ ಗ್ರಾಪಂ ವೈ.ಕೆ.ಮೋಳೆ ಕ್ಷೇತ್ರದ ತಲಾ ಒಂದು ಸ್ಥಾನಗಳಿಗೆ ಉಪಚುನಾವಣೆ ನಿಗದಿಯಾಗಿದೆ. 
ಉಮೇದುವಾರಿಕೆ ಸಲ್ಲಿಸಲು ಈ ತಿಂಗಳ 18 ರಂದು ಕಡೆಯ ದಿನವಾಗಿದೆ. 19 ರಂದು ನಾಮಪತ್ರ ಪರಿಶೀಲನೆ, ಹಿಂತೆಗೆದುಕೊಳ್ಳಲು 21 ರಂದು ಕಡೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ 28 ರಂದು ಬೆಳಿಗ್ಗೆ 7 ರಿಂದ 5 ಗಂಟೆಯವರೆಗೆ ನಡೆಸಲಾಗುತ್ತದೆ ಮರುಮತದಾನ ಅವಶ್ಯವಿದ್ದಲ್ಲಿ 30ರಂದು ಬೆಳಿಗ್ಗೆ 7 ರಿಂದ ಸಂಜೆಯವರಗೆ ನಡೆಸಲಾಗುತ್ತದೆ. ಮತ ಎಣಿಕೆ ಕಾರ್ಯವು ತಾಲೂಕು ಕೇಂದ್ರದಲ್ಲಿ 31ರಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. 
13 ರಂದು ಜಿಲ್ಲಾಧಿಕಾರಿಯವರು ಚುನಾವಣಾ ಅಧಿಸೂಚನೆ ಹೊರಡಿಸುವರು. ಈ ತಿಂಗಳ 31ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ. ಚುನಾವಣಾ ನೀತಿ ಸಂಹಿತೆಯು ಚುನಾವಣಾ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 13 ರಿಂದ 31 ರವರಿಗೆ ಜಾರಿಯಲ್ಲಿರುತ್ತದೆ ಎಂದು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು