ಕಾಡಂಚಿನ ರಸ್ತೆಬದಿಯ ಪ್ಲಾಸ್ಟಿಕ್ ತೆರವುಗೊಳಿಸಿದ ಅರಣಾಧಿಕಾರಿಗಳು
ವರದಿ-ಶಾರುಕ್ ಖಾನ್, ಹನೂರು
ಹನೂರು : 68ನೇ ವನ್ಯಜೀವಿ ಸಪ್ತಾಹದ ಪ್ರಯುಕ್ತ ಹನೂರು ಅರಣ್ಯ ವಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪ್ಲಾಸ್ಟಿಕ್ ತ್ಯಾಜ್ಯ ಕಾರ್ಯಕ್ರಮ ಕೈಗೊಂಡಿದ್ದರು.
ಪಟ್ಟಣದ ಶ್ರೀಮಲೆಮಹದೇಶ್ವರ ಕ್ರೀಡಾಂಗಣ ಸಮೀಪದ ಅರಣ್ಯ ನರ್ಸರಿಯಿಂದ ಅಜ್ಜೀಪುರದ ಕಣಿವೆ ಮುಖ್ಯ ರಸ್ತೆಯ ಎರಡು ಬದಿಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತೆರವು ಕಾರ್ಯ ನಡೆಯಿತು.
ಪ್ರವೀಣ್ ವಲಯ ಅರಣ್ಯ ಅಧಿಕಾರಿ
ವಲಯ ಅರಣ್ಯ ಅಧಿಕಾರಿ ಪ್ರವೀಣ್ ಮಾತನಾಡಿ, ವನ್ಯಜೀವಿಗಳ ಆವಾಸ ಸ್ಥಾನದ ಕಾಡಿನ ಹಾದಿಯಲ್ಲಿ ಸಾಗುವ ಪ್ರಯಾಣಿಕರು ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡಬಾರದು. ಪ್ಲಾಸ್ಟಿಕ್ ಬಿಸಾಡುವುದರಿಂದ ವನ್ಯಪ್ರಾಣಿಗಳು ಅದನ್ನು ತಿನ್ನುವುದರಿಂದ ಅಜೀರ್ಣವಾಗಿ ಪ್ರಾಣಕ್ಕೆ ಸಂಚಕಾರ ಉಂಟಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಿಆರ್‍ಎಫ್‍ಓ ಪ್ರಸಾದ್ ಮತ್ತು ಸಿಬ್ಬಂದಿಗಳು ಭಾ ಗವಹಿಸಿದ್ದರು.
0 ಕಾಮೆಂಟ್‌ಗಳು