ಮಂಟೇಸ್ವಾಮಿಗೆ, ಸಿದ್ದಪ್ಪಾಜಿಗೆ ಉಘೇ, ಉಘೇ ಎಂದು ಕೂಗಿ ಧನ್ಯರಾದ ಭಕ್ತರು
ವರದಿ-ಟಿ.ಬಿ.ಸಂತೋಷ, ಮದ್ದೂರು
ಮದ್ದೂರು : ತಾಲೋಕಿನ ಹೊನ್ನಾಯಕನಹಳ್ಳಿ ಗ್ರಾಮದ ಶ್ರೀ ಧರೆಗೆ ದೊಡ್ಡವರು ಮಂಟೇಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ಮಂಟೇಸ್ವಾಮಿ ದೀಪಾವಳಿ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಬಣೆಯಿಂದ ಜರುಗಿತು.
ಮಠದ ಪೀಠಾಧಿಪತಿ ಎಂ.ಎಲ್. ವರ್ಚಸ್ವಿ ಶ್ರೀಕಂಠಸಿದ್ದಲಿಂಗರಾಜೆ ಅರಸು ನೇತೃತ್ವದಲ್ಲಿ ಕೆರೆ ಸಮೀಪ ನಿರ್ಮಿಸಿರುವ ಮಂಟಪದಲ್ಲಿ ಮಂಟೇಸ್ವಾಮಿ ಕಂಡಾಯ, ಬಸವಪ್ಪ, ಸೂರ್ಯಪಾಣಿ, ಚಂಧ್ರಪಾಣಿ, ಸತ್ತಿಗೆಮ ದೊಡ್ಡಸತ್ತಿಗೆ, ಬಿಂಕು ಬಿರುದುಗಳೊಂದಿಗೆ ಸಿಡಿಮದ್ದಿನ ಸಮೇತ ಹೂವು ಹೊಂಬಾಳೆ ಕಾರ್ಯಕ್ರಮವು ವಿಧಿ ವಿಧಾನಗಳೊಂದಿಗೆ ನೆರೆವೇರಿತು.
ಈ ಸಂದರ್ಭದಲ್ಲಿ ಮಠಾಧೀಪತಿಗಳು ಮಾತನಾಡಿ, ಧರೆಗೆ ದೊಡ್ಡವರು ಮಂಟೇಸ್ವಾಮಿ ಮಠದಲ್ಲಿ ಸಂಸ್ಕøತಿ, ಸಂಪ್ರದಾಯ, ಗುರು ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಪೂಜಾ ಕೈಂಕರ್ಯಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಇತ್ತಿಚಿನ ದಿನಗಳಲ್ಲಿ ಅಪಾರ ಮಳೆಯಿಂದಾಗಿ ದೇಶವೇ ತೊಂದರೆಗೆ ಸಿಲುಕಿತು. ಮುಂದಿನ ದಿನಗಳಲ್ಲಿ ಮಳೆಯಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಪ್ರತಿಯೊಬ್ಬರಿಗೆ ಆಯಸ್ಸು, ಆರೋಗ್ಯ, ಸುಖ ಶಾಂತಿ ನೆಮ್ಮದಿ ಸಿಗಲಿ ಎಂದು ಹೇಳಿದರು.
ನಂತರ ಶ್ರೀ ಮಂಟೇಸ್ವಾಮಿ ಬಸವಪ್ಪ ಮೆರವಣಿಗೆಯು ಗ್ರಾಮದ ಹೊರ ವಲಯದಲ್ಲಿರುವ ಕೆರೆ ಸಮೀಪದ ದೇವತೆಗಳು, ಹೂವು ಹೊಂಬಾಳೆ ನಂತರ ಹೊನ್ನಾಯಕನಹಳ್ಳಿಯ ಚೌಡೇಶ್ವರಿ, ಮಾರಮ್ಮ, ಹುಚ್ಚಮ್ಮ ಸೇರಿದಂತೆ ವಿವಿಧ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರಮುಖ ಬೀದಿಗಳಲ್ಲಿ ಬಸವಪ್ಪ, ಕಂಡಾಯ, ಪೂಜೆ ಸತ್ತಿಗೆಗಳ ಮೆರವಣಿಗೆ ನಡೆಸಲಾಯಿತು. ಮನೆ ಮುಂದೆ ಬಂದ ದೇವರಿಗೆ ಮಹಿಳೆಯರು ಅರತಿ ಎತ್ತಿ, ಪೂಜೆ ಸಲ್ಲಿಸಿ ನಮಿಸಿದರು.
ಸಾವಿರಾರು ಭಕ್ತರು ಆಗಮನ:
ಮಂಟೇಸ್ವಾಮಿ, ಸಿದ್ದಪ್ಪಾಜಿ ನೀಲಗಾರರು, ವಿಶ್ವಕರ್ಮ ಕುಲಬಾಂಧವರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರರು ಭಕ್ತರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು. ಹೂ ಹೊಂಬಾಳೆ ಸಂದರ್ಭದಲ್ಲಿ ಮಂಟೇಸ್ವಾಮಿಗೆ ಸಿದ್ದಪ್ಪಾಜಿಗೆ ಉಘೇ ಎಂದು ಕೂಗು ಭಕ್ತಿಗೆ ಸಾಕ್ಷಿಯಾಯಿತು.ಅಂತಾರಾಷ್ಟ್ರೀಯ ಜಾನಪದ ಕಲಾವಿದ ಮೈಸೂರು ಗುರುರಾಜ್ ಅವರಿಂದ ಧರೆಗೆ ದೊಡ್ಡವರು ಶ್ರೀ ಮಂಟೇಸ್ವಾಮಿ ಕಥೆ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಜತೆಗೆ ಸೋಬಾನೆ, ತತ್ವಪದ ಸೇರಿದಂತೆ ಹಲವು ಜಾನಪದ ಕಲಾವಿದರು ತಮ್ಮ ಪ್ರತಿಭೆಯನ್ನು ಅನಾವರಣ ಗೋಳಿಸಿದರು. ಜಾತ್ರೆಗೆ ಅಗಮಿಸಿ ಕಲೆಯನ್ನು ಪ್ರಸ್ತುತ ಪಡಿಸಿದ ಕಲಾವಿದರಿಗೆ ಮಠಾಧಿಪತಿಗಳು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು.
ಸಾವಿರಾರು ಭಕ್ತರಿಗೆ ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು. ಜತೆಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿತು.
ದೇವಸ್ಥಾನ ಹಾಗೂ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಭವ್ಯವಾದ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಇದು ಭಕ್ತ ಸಮೂಹವನ್ನು ಆಕರ್ಷಣೀಯಗೊಳಿಸಿತು.
0 ಕಾಮೆಂಟ್‌ಗಳು