ನಡುಕಪುರ ಮಂಜು ಸ್ವಯಂ ಘೋಷಿತ ಅಧ್ಯಕ್ಷ : ಡಾ.ಬಾಬು ಜಗಜೀವನರಾಂ ವಿಚಾರ ವೇದಿಕೆ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಕಾನೂನು ಸಮರ : ಎಚ್ಚರಿಕೆ ನೀಡಿದ ಬಾಳೆಹೊನ್ನಿಗ ಜಿ. ಕುಮಾರ್

 ವರದಿ-ಮಳವಳ್ಳಿ ಬಾಬು

ಮಳವಳ್ಳಿ : ಡಾ.ಬಾಬು ಜಗಜೀವನರಾಂ ವಿಚಾರ ವೇದಿಕೆ ಸಂಘದ ಹೆಸರನ್ನು ನಾನಾಗಲಿ ಅಥವಾ ಸಂಘದ ಸದಸ್ಯರಾಗಲಿ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಸಂಘದ ಸಂಸ್ಥಾಪಕ ಮತ್ತು ಅಧ್ಯಕ್ಷ ಬಾಳೆಹೊನ್ನಿಗ ಜಿ.ಕುಮಾರ ಸ್ಪಷ್ಟನೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಂಘ ಸ್ಥಾಪನೆಯಾದಗಿನಿಂದ ಸಮುದಾಯದ ಸಮಸ್ಯೆಗಳನ್ನು ಪರಿಹರಿಸುತ್ತಾ ಹಲವಾರು ವರ್ಷಗಳಿಂದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಯಾರೂ ಸಹ ನನ್ನ ರಾಜೀನಾಮೆ ಕೇಳಲಿಲ್ಲ, ಕೋವಿಡ್ ಹಿನ್ನೆಲೆಯಲ್ಲಿ ಒಂದು ವರ್ಷ ಸಂಘದ ಚಟುವಟಿಕೆಯನ್ನು ನಡೆಸಲಾಗಲಿಲ್ಲ ಎಂದರು.
ಈ ನಡುವೆ ನಮ್ಮ ಸಂಘದ ಗೌರವಾಧ್ಯಕ್ಷರಾದ ನಡುಕಪುರ ಮಂಜು ಅವರು, ಯಾರ ಅನುಮತಿ ಕೇಳದೆ ಹಾಗೂ 16 ಹಳ್ಳಿಯ ಸದಸ್ಯರುಗಳನ್ನು ಕರೆಯದೆ ಕೇವಲ ಒಂದು ಪಕ್ಷದ 8 ಮಂದಿಯನ್ನು ಕರೆದುಕೊಂಡು ಸಭೆ ನಡೆಸಿ ಯಾರ ಗಮನಕ್ಕೂ ತಾರದೇ ತಾವೇ ಸ್ವಯಂ ಘೋಷಣೆ ಮಾಡಿಕೊಂಡು ಅಧ್ಯಕ್ಷ ಎಂದು ಹೇಳುತ್ತಿದ್ದಾರೆ, ಇದು ತಪ್ಪು ಇದರಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ತಿಳಿಸಿದ ಅವರು, ಈ ಕೂಡಲೇ ವೇದಿಕೆಯ ಹೆಸರನ್ನು ಬಳಸುವುದನ್ನು ನಿಲ್ಲಿಸದಿದ್ದರೆ ಅವರ ವಿರುದ್ಧ ಕಾನೂನು ಅಸ್ತ್ರವನ್ನು ಬಳಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಿಕ್ಷಕಿ ಕನ್ನಿಕಾಪರಮೇಶ್ವರಿ ರವರ ಪ್ರಕರಣಕ್ಕೆ ಸಂಬಂಧಿಸಿದಂತೆ, ಯಾವ ಜನ ನಾಯಕರು ನಮಗೆ ಬೆಂಬಲ ನೀಡಿಲ್ಲ, ಈ ಸಂಬಂಧ ನಾವು ಯಾರೊಡನೆಯು ಚರ್ಚೆ ಮಾಡಿಲ್ಲ, ಆಕೆಗೆ ಅನ್ಯಾಯವಾದಾಗ ಸಮುದಾಯದ ಹೆಣ್ಣು ಮಗಳಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾವು ಹೋರಾಟ ಮಾಡಿದ್ದೇವೆ, ಆಕೆ ದೂರು ನೀಡಿದ ಹಿನ್ನೆಲೆಯಲ್ಲಿ ಕೇಸು ದಾಖಲಾಗಿದೆ. ಸತ್ಯಾಸತ್ಯತೆಯನ್ನು ತನಿಖಾಧಿಕಾರಿಗಳು ಮಾಡಲಿದ್ದಾರೆ, ನಿಮಗೆ ಮನಸಿದ್ದರೆ ಬೆಂಬಲಿಸಿ, ಇಲ್ಲದಿದ್ದರೆ ಸುಮ್ಮನಿರಿ, ಅದನ್ನು ಬಿಟ್ಟು ಸಮುದಾಯದ ಜನರಿಗೆ ತಪ್ಪು ಸಂದೇಶ ನೀಡುವುದು ನಿಮಗೆ ತರವಲ್ಲ ಎಂದು ಟೀಕಿಸಿದರು.
ಸುದ್ದಿ ಗೋಷ್ಠಿಯಲ್ಲಿ ವೇದಿಕೆಯ ಕಾರ್ಯದರ್ಶಿ ಬಿ.ಜಿ.ಪುರ ಮಂಜು, ಉಪಾಧ್ಯಕ್ಷ ಸತೀಶ್, ಮಂಜುನಾಥ, ಸಿದ್ದರಾಜು, ಹರೀಶ ಸೇರಿದಂತೆ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು