ತಿಪ್ಪೂರು ಮನು
ಅಧ್ಯಕ್ಷರು ಮದ್ದೂರು ತಾಲ್ಲೂಕು ಅಖಿಲ ಕರ್ನಾಟಕ ಒಕ್ಕಲಿಗರ ಸಂಘ
ವರದಿ-ಟಿ.ಬಿ.ಸಂತೋಷ, ಮದ್ದೂರು
ಮದ್ದೂರು : ಒಕ್ಕಲಿಗರ ಜನಸಂಖ್ಯೆಗನುಗುಣವಾಗಿ ಶೇ 12 ರಷ್ಟು ಮೀಸಲಾತಿ ಹೆಚ್ಚಿಸಬೇಕೆಂಬ ಆಗ್ರಹ ರಾಜ್ಯದ್ಯಾಂತ ಕೇಳಿ ಬಂದಿದ್ದು ಇದಕ್ಕೆ ಆದಿಚುಂಚನಗಿರಿ ಪಿಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ದ್ವನಿ ಗೂಡಿಸಿರುವ ಬೆನ್ನಲ್ಲೆ ಮಿಸಲಾತಿ ಆಗ್ರಹ ಕ್ಕೆ ಹೆಚ್ಚಿನ ಪುಷ್ಠಿ ದೊರೆತಿದೆ.
ಮಿಸಲಾತಿಗೆ ಆಗ್ರಹಿಸಿ ಅ.28 ರಂದು ಮದ್ದೂರು ಪಟ್ಟಣದಲ್ಲಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ಕರೆ ನೀಡಿರುವ ಬೃಹತ್ ಕಾಲ್ನಡಿಗೆ ಮತ್ತು ಬೈಕ್ ರ್ಯಾಲಿಗೆ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಬೆಂಬಲ ವ್ಯಕ್ತಪಡಿಸಿದೆ
ಈ ಕುರಿತು ಸಂಘದ ರಾಜ್ಯದ್ಯಕ್ಷರಾದ ನಾಗಣ್ಣ ಬಾಣಸವಾಡಿ ನಿರ್ದೆಶನ ನೀಡಿದ್ದು, ಅದರಂತೆ ಮದ್ದೂರಿನಲ್ಲಿಯೂ ತಾಲ್ಲೂಕು ಅಖಿಲ ಕರ್ನಾಟಕ ಒಕ್ಕಲಿಗರ ಸಂಘವು ಬೆಂಬಲ ವ್ಯಕ್ತಪಡಿಸಿದೆ.
ಒಕ್ಕಲಿಗ ಭಾಂದವರು ಆ ದಿನ ಪ್ರವಾಸಿಮಂದಿರದ ಬಳಿ ಬೆಳಿಗ್ಗೆ ಹತ್ತು ಘಂಟೆಗೆ ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಯುವ ಅಧ್ಯಕ್ಷ ತಿಪ್ಪೂರು ಮನು ಪತ್ರಿಕಾ ಹೇಳಿಕೆ ನೀಡಿದ್ದಾರೆ.
0 ಕಾಮೆಂಟ್‌ಗಳು