ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ
ವರದಿ-ಶಾರುಕ್ ಖಾನ್, ಹನೂರು
ಹನೂರು : ಮಹದೇಶ್ವರ ಬೆಟ್ಟದ ಹಳೇಯೂರು ಗ್ರಾಮದ ಜಡೇಸ್ವಾಮಿ ದೇವಾಲಯದ ಹಿಂಬಾಗದಲ್ಲಿ ಪತ್ತೆಯಾಗಿದ್ದ ವೃದ್ಧೆಯೊಬ್ಬರ ಮೃತದೇಹ ಪಡೆಯಲು ವಾರಸುದಾರರು ಬಾರದ ಕಾರಣ ಪೊಲೀಸರೇ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
ಶವ ಪತ್ತೆಯಾದ ಕೂಡಲೇ ವಾರಸುದಾರರ ಪತ್ತೇಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಜತೆಗೆ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮೃತದೇಹವನ್ನು ಇಡಲಾಗಿತ್ತು. ಶನಿವಾರದ ತನಕವೂ ವಾರಸುದಾರರು ಪತ್ತೆಯಾಗದ ಕಾರಣ ಮಹದೇಶ್ವರ ಬೆಟ್ಟದ ಪೊಲೀಸ್ ಸಿಬ್ಬಂದಿ ಮೃತಶರೀರದ ಅಂತ್ಯಸಂಸ್ಕಾರವನ್ನ ನೆರವೇರಿಸಿದರು.
ಪೊಲೀಸರ ಈ ಕಾರ್ಯವನ್ನು ಸಾರ್ವಜನಿಕರು ಮತ್ತು ಎಸ್.ಪಿ ಟಿ.ಪಿ.ಶಿವಕುಮಾರ್ ಶ್ಲಾಘಿಸಿದ್ದಾರೆ.
ಅಂತ್ಯಸಂಸ್ಕಾರದಲ್ಲಿ ಪೊಲೀಸ್ ಪೇದೆಗಳಾದ ಬೈರಪ್ಪ, ಬಸವರಾಜೇಂದ್ರ, ಯೋಗೇಶ್, ಲಕ್ಷ್ಮೀ ಇನ್ನಿತರರು ಇದ್ದರು.
0 ಕಾಮೆಂಟ್‌ಗಳು