ಮೈಸೂರಿನಲ್ಲಿ ವಿನ್ ಫಿನಿತ್ ಆರೋಗ್ಯ ಉತ್ಪನ್ನಗಳ ಮಾರಾಟ ಶಾಖೆಗೆ ಚಾಲನೆ 
ಮೈಸೂರು : ಸಾವಿರಾರು ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸುವ ವಿನ್ ಫಿನಿತ್ ಆರೋಗ್ಯ ಉತ್ಪನ್ನಗಳ ಮಾರಾಟ ಶಾಖೆಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜೆ.ಮಂಜುನಾಥ್ ಸೋಮವಾರ ಚಾಲನೆ ನೀಡಿದರು.
ನಗರದ ಇರ್ವಿನ್ ರಸ್ತೆಯಲ್ಲಿನ ಕಾಳಿಕಾಂಬ ದೇವಾಲಯ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭವಾದ ಈ ಮಳಿಗೆಯಲ್ಲಿ ವಿನ್ ಫಿನಿತ್ ಕಂಪನಿಯ ಆರೋಗ್ಯ ಮತ್ತು ಕೃಷಿ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು.
ಈ ಸಂದರ್ಭದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜೆ.ಮಂಜುನಾಥ್ ಕ್ರೌನ್ ಡೈರೆಕ್ಟರ್ ಕೆ.ರಾಜು ಅವರು ಪ್ರಾರಂಭಿಸಿರುವ ವಿನ್ ಫಿನಿತ್ ಉತ್ಪನ್ನಗಳ ನೂತನ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ, ವಿನ್ ಫಿನಿತ್ ಅಪ್ಪಟ ಭಾರತೀತ ಕಂಪನಿಯಾಗಿದ್ದು, ದೇಶದಲ್ಲಿ ಆಯುರ್ವೇದ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ಜತೆಗೆ ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಸೃಷ್ಟಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ನಮ್ಮ ಉತ್ಪನ್ನಗಳು ಯಾವುದೇ ಬೇರೆ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಕೇವಲ ನಮ್ಮ ಮಾರಾಟ ಜಾಲಗಳಲ್ಲಿ ಮಾತ್ರ ದೊರೆಯುತ್ತದೆ. ಇದರಿಂದ ಹೊಸ ಹೊಸ ಉದ್ಯೋಗವನ್ನು ಸೃಷ್ಟಿ ಮಾಡಲು ಸಹಾಯಕವಾಗಿದೆ. ಈಗಾಗಲೇ ಸಾವಿರಾರು ನಿರುದ್ಯೋಗಿಗಳನ್ನು ನಮ್ಮಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ರಾಯಲ್ ಕ್ರೌನ್ ಡೈರೆಕ್ಟರ್ ಶ್ರೀನಿವಾಸ್ ಮಾತನಾಡಿ, ಸಂಸ್ಥೆಯ ಉತ್ಪನ್ನಗಳು ಅತ್ಯಂತ ಗುಣಮಟ್ಟದಿಂದ ಕೂಡಿದ್ದು, ಅತ್ಯುತ್ತಮ ವಹಿವಾಟು ನಡೆಯುತ್ತಿದೆ. ಈ ಭಾಗದಲ್ಲಿ ಇದು ಅತ್ಯಂತ ಜನಪ್ರಿಯ ಕಂಪನಿಯಾಗಿದೆ ಎಂದರು.
ಡೈಮಂಡ್ ಡೈರೆಕ್ಟರ್ ಎನ್.ಮಂಜು ಮಾತನಾಡಿ, ಕಂಪನಿ 2020 ರಲ್ಲಿ ಪ್ರಾರಂಭವಾಗಿ ಇಂದು ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಕಾರ್ಯನಿರ್ವಹಿಸುತ್ತಿದೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದು, ನಮ್ಮ ಸಂಸ್ಥೆ ಲಕ್ಷಾಂತರ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ. ಜತೆಗೆ ದೇಶದ ಅಪೌಷ್ಟಿಕತೆಯ ಸಮಸ್ಯೆ ನಿವಾರಣೆಗೆ ನಮ್ಮ ಕಂಪನಿಯ ಆಯುರ್ವೇದ ಉತ್ಪನ್ನಗಳು ಸಹಕಾರಿಯಾಗಿವೆ. ಈ ಭಾಗದ ಜನರ ಆರೋಗ್ಯ ಕಾಪಾಡುತ್ತಾ, ಇಲ್ಲಿನ ನಿರುದ್ಯೋಗ ಸಮಸ್ಯೆ ಹೋಗಲಾಡಿಸುವುದೇ ನಮ್ಮ ಗುರಿಯಾಗಿದೆ ಎಂದರು.
ವಿನ್ ಫಿನಿತ್ ಕಂಪನಿಯ ಮೈಸೂರು ನಗರದ ಪ್ರಮುಖ ನಾಯಕರು
ಕಾರ್ಯಕ್ರಮದಲ್ಲಿ ನೂತನ ಪ್ರತಿನಿಧಿಗಳಿಗೆ ತರಬೇತಿ ಮತ್ತು ಉತ್ಪನ್ನಗಳ ಮಾರಾಟ ಪ್ರಕ್ರಿಯೆ ನಡೆಯಿತು. ಕಂಪನಿ ವ್ಯವಸ್ಥಾಪಕ ನಿರ್ದೇಶಕರಿಗೆ ಆತ್ಮೀಯವಾಗಿ ಸ್ವಾಗತ ಕೋರಲಾಯಿತು.
ಕ್ರೌನ್ ಡೈರೆಕ್ಟರ್ ಕೆ.ರಾಜು, ಸುಂದರ್ ಬಾಬು, ಕ್ರೌನ್ ಡೈರೆಕ್ಟರ್ ಪದ್ಮಾವತಿ ಶೇಖರ್, ಮೋಹನ್, ನವೀನ್, ಪ್ರದೀಪ್, ಪ್ರೇಮಕುಮಾರ್, ಕಂಬು, ಮುತ್ತುರಾಜು, ಸುಮೇರಾ, ರೂಪ, ಗೀತಾ, ಕೆ.ಆರ್.ಪೇಟೆ ಮಂಜುನಾಥ್, ಪಿರಿಯಾಪಟ್ಟಣ ಯೋಗೇಶ್, ಶಿವರಾಮು, ಪ್ರವೀಣ್, ಚಂದ್ರು, ಅರುಣ್, ಶೇಖರ್, ಕಾಂತರಾಜು, ಎಲ್.ರಾಜು, ಮಹದೇವ, ಸೋಮಣ್ಣ ಇನ್ನಿತರರು ಇದ್ದರು.
0 ಕಾಮೆಂಟ್‌ಗಳು