ಮೈಸೂರು ಸಿಸಿಬಿ ಪೊಲೀಸರ ಭರ್ಜರಿ ಭೇಟೆ : 23 ಲಕ್ಷ ಮೌಲ್ಯದ ಗಾಂಜಾ ವಶ, ನಾಲ್ವರ ಬಂಧನ
ಅಕ್ಟೋಬರ್ 24, 2022
46 ಕೆ.ಜಿ. 691 ಗ್ರಾಂ ತೂಕದ ಗಾಂಜಾ, 10 ಸಾವಿರ ನಗದು, 3 ಮೊಬೈಲ್ ಫೋನ್‍ಗಳು ಒಂದು ಕಾರು ಪೊಲೀಸ್ ವಶಕ್ಕೆ
ಮೈಸೂರು : ನಗರದ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬನ್ನಿಮಂಟಪದ ಹನುಮಂತನಗರ ರಸ್ತೆಯಲ್ಲಿ ದಾಳಿ ಮಾಡಿ ಅಕ್ರಮವಾಗಿ ಕಾರಿನೊಳಗಡೆ ಗಾಂಜಾ ಇಟ್ಟುಕೊಂಡು ಗಿರಾಕಿಗಳನ್ನು ಅಲ್ಲಿಗೆ ಕರೆಯಿಸಿಕೊಂಡು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ ಅವರ ವಶದಲ್ಲಿದ್ದ 5 ಕೆ.ಜಿ. 691 ಗ್ರಾಂ ತೂಕದ ಗಾಂಜಾ, ಒಂದು ಮಾರುತಿ 800 ಕಾರು, 10 ಸಾವಿರ ನಗದು ಹಾಗೂ 3 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಜತೆಗೆ, ನರಸಿಂಹರಾಜ ಪೊಲೀಸ್ ಠಾಣೆ ಸರಹದ್ದು ಮಂಡಿ ಮೊಹಲ್ಲಾದ 2ನೇ ಈದ್ಗಾದ ಸಿ.ವಿ.ರಸ್ತೆಯ 7ನೇ ಕ್ರಾಸ್‍ನಲ್ಲಿರುವ ಮನೆಯೊಂದರ ಮೇಲೆ ದಾಳಿ ಮಾಡಿ ಅಲ್ಲಿ ಗಾಂಜಾವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ಬಂಧಿಸಿ ಆತನ ವಶದಲ್ಲಿದ್ದ 41 ಕೆ.ಜಿ. ತೂಕದ ಗಾಂಜಾವನ್ನು ವಶಪಡಿಸಿಕೊಂಡಿರುತ್ತಾರೆ. ಈ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಆರೋಪಿಗಳು ಸದರಿ ಗಾಂಜಾವನ್ನು ಎಲ್ಲಿಂದ ಮತ್ತು ಯಾರಿಂದ ಖರೀದಿ ಮಾಡಿಕೊಂಡು ತರುತ್ತಿದ್ದರು ಎಂಬ ಬಗ್ಗೆ ಹಾಗೂ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿಸಿದ್ದಾರೆ. ಮೈಸೂರು ನಗರದ ಸಿಸಿಬಿ ಪೊಲೀಸರು ಇತ್ತೀಚೆಗೆ ಹಲವಾರು ಗಾಂಜಾ ಹಾಗೂ ಎಂಡಿಎಂಎ ಡ್ರಗ್ಸ್ ಮಾರಾಟದ ಜಾಲಗಳ ಮೇಲೆ ದಾಳಿ ಮಾಡಿ ಪ್ರಕರಣಗಳನ್ನು ದಾಖಲಿಸಿದ್ದು, ಅದೇ ರೀತಿ ಸದರಿ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ. ಖಸಿಪಿ ಎಂ.ಎಸ್.ಗೀತ, ಸಿಸಿಬಿ ಎಸಿಪಿ ಸಿ.ಕೆ.ಅಶ್ವಥನಾರಾಯಣ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಎ.ಮಲ್ಲೇಶ, ಎಎಸ್‍ಐ ರಾಜು, ಸಿಬ್ಬಂದಿಗಳಾದ ಅನಿಲ್, ಸುಭಾನುಲ್ಲಾ ಬಾಲ್‍ದಾರ್, ಡಿ.ಶ್ರೀನಿವಾಸಪ್ರಸಾದ್, ಜೋಸೆಫ್ ನೊರೋನ್ಹ, ರವಿಕುಮಾರ್, ರಾಧೇಶ್, ಜನಾರ್ಧನರಾವ್, ಶ್ರೀನಿವಾಸ.ಕೆ.ಜಿ., ಅರುಣ್‍ಕುಮಾರ್, ರಘು, ಮಮತ ದಾಳಿಯಲ್ಲಿ ಭಾಗವಹಿಸಿದ್ದರು. ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ದಾಳಿ ಕಾರ್ಯವನ್ನು ಶ್ಲಾಘಿಸಿದ್ದಾರೆ.
0 ಕಾಮೆಂಟ್‌ಗಳು