ಮೈಸೂರಿನಲ್ಲಿ ಹಸಿರು ಪಟಾಕಿಗೆ ಮುಗಿಬಿದ್ದ ಜನ : ಪಟಾಕಿ ಅಂಗಡಿಗಳ ಮುಂದೆ ಜನ ಜಂಗುಳಿ

ಜೆ.ಕೆ.ಗ್ರೌಂಡ್ ನಲ್ಲಿ ಭರ್ಜರಿ ವ್ಯಾಪಾರ

ಮೈಸೂರು : ಕಳೆದ ಎರಡು ವರ್ಷಗಳಿಂದ ಬೆಳಕಿನ ಹಬ್ಬ ದೀಪಾವಳಿಯ ಮೇಲೆ ಕರೋನಾ ಕರಿ ನೆರಳು ಆವರಿಸಿದ್ದ ಕಾರಣ ಜನರು ದೀಪಾವಳಿ ಸಂಭ್ರಮದಿಂದ ದೂರ ಉಳಿದಿದ್ದರು. ಆದರೆ, ಈ ಬಾರಿ ಭರ್ಜರಿಯಾಗಿ ಬೆಳಕಿನ ಹಬ್ಬದ ಆಚರಣೆಯಲ್ಲಿ ಜನರು ತೊಡಗಿದ್ದು, ಹಸಿರು ಪಟಾಕಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಬಂದಿದೆ.

ನಗರದ ಜೀವಣ್ಣ ರಾಯಣ್ಣ ಕಟ್ಟೆ ಮೈದಾನದಲ್ಲಿ ನಿರ್ಮಿಸಿರುವ ಪಟಾಕಿ ಅಂಗಡಿಗಳಲ್ಲಿ ಭಾರಿ ಶಬ್ದವನ್ನುಂಟು ಮಾಡುವ ಪಟಾಕಿಗಳಿಗೆ ಬೇಡಿಕೆ ಕಂಡು ಬಂದಿಲ್ಲ. ಹಿರಿಯ ನಾಗರಿಕರು ತಮ್ಮ ಮೊಮ್ಮಕ್ಕಳಿಗೆ ಹಸಿರು ಪಟಾಕಿ, ಕಡಿಮೆ ಶಬ್ದ ಮತ್ತು ಪರಿಸರಕ್ಕೆ ಹಾನಿಯಾಗದ ಪಟಾಕಿಗಳನ್ನು ಕೊಳ್ಳುತ್ತಿದ್ದುದು ಕಂಡು ಬಂತು.
ವಿಶೇಷವಾಗಿ ಸುರು ಸುರು ಬತ್ತಿ, ಚಕ್ರಗಳು, ರಾಕೇಟ್, ಮಕ್ಕಳ ಆಟಿಕೆ ಪಿಸ್ತೂಲು, ಹೂವಿನ ಕುಂಡಗಳು ಹೆಚ್ಚು ಮಾರಾಟವಾದವು.

ಹಸಿರು ಪಟಾಕಿಗೆ ಹೆಚ್ಚು ಬೇಡಿಕೆ ಇದೆ
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಾವುಗಳು ಕೇವಲ ಕಡಿಮೆ ಶಬ್ದ ಉಂಟುಮಾಡುವ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದೇವೆ. ಜತೆಗೆ ಪರಿಸರಕ್ಕೆ ಹಾನಿಯಾಗದ ಮತ್ತು ಚಿಕ್ಕ ಮಕ್ಕಳು ಬಳಸುವ, ಅಪಾಯವನ್ನು ಉಂಟು ಮಾಡದಿರುವ ಪಟಾಕಿಗಳನ್ನು ಮಾರುತ್ತಿದ್ದೇವೆ. ನಮಗೂ ಪರಿಸರದ ಬಗ್ಗೆ ಮತ್ತು ಮಕ್ಕಳ ಬಗ್ಗೆ ಕಾಳಜಿ ಇದೆ. ಕರೋನ ನಂತರ ಈ ಬಾರಿ ದೀಪಾವಳಿ ಆಚರಣೆಗೆ ಸಾರ್ವಜನಿಕರು ಉತ್ಸುಕರಾಗಿದ್ದು, ವಹಿವಾಟು ಉತ್ತಮವಾಗಿದೆ.
-ಶರತ್ ಪಟಾಕಿ ಅಂಗಡಿ ಮಾಲಿಕರು
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು