ಮಕ್ಕಳಲ್ಲಿ, ವೃದ್ಧರಲ್ಲಿ ಜ್ವರ, ಕೆಮ್ಮು, ಅಲರ್ಜಿ, ಸೋಳ್ಳೆಗಳ ಕಾಟ ವಿಪರೀತ
ವರದಿ-ಶಾರುಕ್ ಖಾನ್, ಹನೂರು
ಹನೂರು : ತಾಲ್ಲೂಕಿನ ಕೌದಳ್ಳಿ ಗ್ರಾಮ ಪಂಚಾಯತಿ ಕೇಂದ್ರವಾಗಿದೆ. ಜನಸಂಖ್ಯೆ ಹೆಚ್ಚಾಗಿರುವ ದೊಡ್ಡ ಗ್ರಾಮವೂ ಹೌದು. ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗುವ ಮುಖ್ಯ ರಸ್ತೆ ಮತ್ತು ತಮಿಳುನಾಡು ಸಂಪರ್ಕಿಸುವ ಗಡಿ ಗ್ರಾಮವಾಗಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಈ ಗ್ರಾಮ ಮಾತ್ರ ಇನ್ನೂ ಸ್ವಾತಂತ್ರ್ಯ ಪೂರ್ವದಲ್ಲಿ ಹೇ ಗಿತ್ತೋ ಹಾಗೆಯೇ ಇದೆ. ಗ್ರಾಮದಲ್ಲಿ ಮುಸ್ಲಿಂ ಮತ್ತು ನಾಯಕ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೊದಲಿಂದಲೂ ಕೌದಳ್ಳಿ ಗ್ರಾಮ ಅನೈರ್ಮಲ್ಯಕ್ಕೆ ಹೆಸರುವಾಸಿ. ಹೆಸರಿಗಷ್ಟೇ ಇಲ್ಲಿ ಗ್ರಾಮ ಪಂಚಾಯತಿ ಇದೆ. ಅಭಿವೃದ್ಧಿ ಮಾತ್ರ ಶೂನ್ಯ.
ಗ್ರಾಮದಲ್ಲಿ ಸಮರ್ಪಕವಾದ ಚರಂಡಿಗಳು ಇಲ್ಗದ ಕಾರಣ ಮಲೀನ ನೀರು ರಸ್ತೆಗಳಲ್ಲಿ ಹರಿದಾಡುತ್ತಿದೆ. ರಸ್ತೆಗೆ ಗಲೀಜು ನೀರು ಬಿಡಬೇಡಿ ಎಂದರೆ ಚರಂಡಿಯೇ ಇಲ್ಲದ ಊರಲ್ಲಿ ನೀರು ಎಲ್ಲಿ ಬಿಡಬೇಕು ಹೇಳಿ. ಇದಷ್ಟೇ ಅಲ್ಲ ಗ್ರಾಮದ ಕಿರಿದಾದ ರಸ್ತೆಗಳು ಇಂದಿಗೂ ಡಾಂವರ್ ಕಂಡಿಲ್ಲ. ಒಂದೆರಡು ಚರಂಡಿಗಳಿದ್ದರೂ ಅದರ ತುಂಬಾ ಹೂಳು ತುಂಬಿಕೊಂಡಿದೆ. ಇನ್ನು ರಾಶಿ ರಾಶಿ ಕಸದ ಗುಡ್ಡೆಗಳು ಎಲ್ಲೆಂದರಲ್ಲಿ ಸಾಮಾನ್ಯವಾಗಿದೆ. ಒಟ್ಟಾರೆ ಈ ಗ್ರಾಮ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಿರ್ಲಕ್ಷ್ಯಕ್ಕೆ ಒಳಗಾಗಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಕೌದಳ್ಳಿಯನ್ನು ಗ್ರಾಮಸ್ಥರೇ ಕಸದ ಹಳ್ಳಿ ಎಂದೂ ಕರೆದುಕೊಳ್ಳುತ್ತಾರೆ. ಗ್ರಾಮದ ತುಂಬಾ ಅನೈರ್ಮಲ್ಯ ಇರುವ ಕಾರಣ ಸಾಂಕ್ರಾಮಿಕ ರೋಗಗಳು ಅಲ್ಲಲ್ಲಿ ಕಾಣಿಸಿಕೊಂಡಿದೆ. ಮಕ್ಕಳಲ್ಲಿ ಮತ್ತು ವೃದ್ಧರಲ್ಲಿ ಜ್ವರ, ಕೆಮ್ಮು, ಅಲರ್ಜಿ ಇದೆ. ಸೋಳ್ಳೆಗಳ ಕಾಟ ವಿಪರೀತ. ಮಳೆ ಬಂತೆಂದರೆ ರಾಶಿ ರಾಶಿ ಬೆಟ್ಟವಾಗುತ್ತದೆ. ಅದನ್ನು ವಿಲೇವಾರಿ ಮಾಡದ ಕಾರಣ ಕೊಳೆತ ತ್ಯಾಜ್ಯವಾಗಿ ಮಾರ್ಪಟ್ಟು ದುರ್ವಾಸನೆ ಬಿರುತ್ತಿದೆ ಇದರಿಂದ ಜನರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಎದುರಾಗುತ್ತದೆ.
ಸಮೀಪದ ನಿವಾಸಿಗಳು ದಿನ ನಿತ್ಯ ದುರ್ವಾಸನೆಯನ್ನು ಅನುಭವಿಸಲೇಬೇಕಿದೆ. ರಾತ್ರಿ ಮಾತ್ರವಲ್ಲ ಹಗಲಲ್ಲೂ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಗ್ರಾಮಸ್ಥರು ಆಗಾಗ ನಡೆಯುವ ಪಂಚಾಯ್ತಿ ಗ್ರಾಮ ಸಭೆಗಳಲ್ಲಿ ಮನವಿ ಮತ್ತು ದೂರು ನೀಡುತ್ತಾ ಬಂದಿದ್ದರೂ ಗ್ರಾಪಂ ಆಡಳಿತ ಮತ್ತು ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ. ಕೂಡಲೇ ಸಂಬಂಧಪಟ್ಟವರು ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಲು ಮುಂದಾಗಬೇಕು ಎಲ್ಲುವುದು ಗ್ರಾಮಸ್ಥರ ಬೇಡಿಕೆಯಾಗಿದೆ.
ಈ ಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಇರುವುದು ದುಡ್ಡು ಮಾಡಲು ಎಂಬುವ ದೃಢ ನಿರ್ಧಾರ ಮಾಡಿಕೊಂಡಿದ್ದಾರೆ ಈ ಸಂಬಂಧ ಗ್ರಾಮದ ಜನತೆಯನ್ನು ದಾರಿ ತಪ್ಪಿಸಿ ಯಾರ್ ಯಾರು ಬ್ರಷ್ಟಾಚಾರಕ್ಕೆ ಒಳ ಪಟ್ಟಿದ್ದಾರೆ ಅವರನ್ನು ಕಠಿಣ ಕ್ರಮ ಜರುಗಿಸಬೇಕು
1 ಕಾಮೆಂಟ್‌ಗಳು
ಈ ಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಇರುವುದು ದುಡ್ಡು ಮಾಡಲು ಎಂಬುವ ದೃಢ ನಿರ್ಧಾರ ಮಾಡಿಕೊಂಡಿದ್ದಾರೆ ಈ ಸಂಬಂಧ ಗ್ರಾಮದ ಜನತೆಯನ್ನು ದಾರಿ ತಪ್ಪಿಸಿ ಯಾರ್ ಯಾರು ಬ್ರಷ್ಟಾಚಾರಕ್ಕೆ ಒಳ ಪಟ್ಟಿದ್ದಾರೆ ಅವರನ್ನು ಕಠಿಣ ಕ್ರಮ ಜರುಗಿಸಬೇಕು
ಪ್ರತ್ಯುತ್ತರಅಳಿಸಿ