ಉದ್ಧೇಶ ಪೂರ್ವಕವಾಗಿ ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರು ಬದಲಾವಣೆ ಮಾಡಿದ್ದೇವೆ : ಪ್ರತಾಪ್ ಸಿಂಹ

ಮೈಸೂರಿಗೆ ಒಡೆಯರ್ ಕೊಡುಗೆ ನೂರಿದೆ, ಟಿಪ್ಪು ಕೊಡುಗೆ ಮೂರನ್ನು ಹೇಳಿ ಎಂದು ಸವಾಲು


 ಮೈಸೂರು: ಉದ್ದೇಶ ಪೂರ್ವಕವಾಗಿಯೇ ನಾವು ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರನ್ನು ಬದಲಾಯಿಸಿದ್ದೇವೆ. ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ನಿಲುವಿಗೆ ತಾವೇ ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಭಾರತದ  ಇತಿಹಾಸದಲ್ಲಿ ಒಂದು ರೈಲಿಗೆ ಹೆಸರನ್ನು ಇಟ್ಟ ಉದಾಹರಣೆ ಇದೆ. ಆದರೆ, ಇಟ್ಟ ಹೆಸರನ್ನು ಬದಲಾಯಿಸಿದ ಉದಾಹರಣೆ ಇಲ್ಲ. ನಾನೇ ಮೊದಲ ಬಾರಿಗೆ ರೈಲಿಗೆ ಇಟ್ಟ ಹೆಸರನ್ನು ಬದಲಾಯಿಸಿದ್ದೇನೆ ಎಂದರು.
ಮೈಸೂರಿಗೆ ಟಿಪ್ಪು ಕೊಡುಗೆ ಏನು? ಹೆಸರನ್ನು ಬದಲಾಯಿಸಬಾರದು ಎಂದು ಹೇಳುವವರು ಟಿಪ್ಪು ಮೈಸೂರಿಗೆ ನೀಡಿದ ಮೂರು ಸಾಧನೆಯನ್ನು ತಿಳಿಸಲಿ ಎಂದು ಸವಾಲು ಹಾಕಿದರು.
ಮೈಸೂರಿಗೆ ಒಡೆಯರ್ ಅವರು ನೀಡಿದ ನೂರು ಸಾಧನೆಯನ್ನು ನಾನು ಹೇಳಬಲ್ಲೆ, ಆದರೆ ಟಿಪ್ಪು ಸಾಧನೆ ಏನು? ಆತ ಮೈಸೂರಿನವನಾ? ಟಿಪ್ಪು ಶ್ರೀರಂಗಪಟ್ಟಣದವನು. ಹಾಗಿದ್ದ ಮೇಲೆ ಮೈಸೂರು ರೈಲಿಗೆ ಟಿಪ್ಪು ಹೆಸರನ್ನು ಏಕೆ ಇಡಬೇಕು ಎಂದು ಪ್ರಶ್ನಿಸಿದರು.
ಕೆಲವರು ಹೊಸ ರೈಲನ್ನು ತರಬಹುದಿತ್ತು ಎಂದು ಹೇಳುತ್ತಿದ್ದಾರೆ. ೨೦೧೪ ರಲ್ಲಿ ಮೈಸೂರಿನಿಂದ ವಾರಣಾಸಿಗೆ ತಂದ ರೈಲಿನಿಂದ ಹಿಡಿದು ಕಾಚಿಗೂಡ ಎಕ್ಸ್ ಪ್ರೆಸ್, ಕೋಚುವೆಲ್, ಚೆನೈ ಎಕ್ಸ್ ಪ್ರೆಸ್, ಉದಯ್‌ಪುರ ರೈಲು, ವಿಶ್ವಮಾನವ ರೈಲು ಸೇರಿದಂತೆ ಹತ್ತು ರೈಲುಗಳನ್ನು ಮೈಸೂರಿಗೆ ತಂದಿದ್ದೇನೆ. ಇಷ್ಟು ಕಡಿಮೆ ಅವಧಿಯಲ್ಲಿ ದೇಶದ ಯಾವ ಸಂಸದರೂ ಇಷ್ಟೊಂದು ರೈಲನ್ನು ಅವರ ಕ್ಷೇತ್ರಕ್ಕೆ ತಂದAತಹ ಉದಾಹರಣೆ ಇಲ್ಲ, ಹೊಸ ರೈಲುಗಳನ್ನು ತರುವ ಜೊತೆಗೆ ರೈಲಿನ ಹೆಸರನ್ನು ನಾನು ಬದಲಾಯಿಸಿದ್ದೇನೆ. ಉದ್ದೇಶಪೂರ್ವಕವಾಗಿಯೇ ಟಿಪ್ಪು ರೈಲನ್ನು ಬದಲಾಯಿಸಿದ್ದು ಎಂಬುದಕ್ಕೆ ಸ್ಪಷ್ಟನೆಯನ್ನು ನೀಡುತ್ತಿದ್ದೇನೆ ಎಂದು ಒತ್ತಿ ಒತ್ತಿ ಹೇಳಿದರು.
ಟಿಪ್ಪು ಒಬ್ಬ ಕನ್ನಡ ವಿರೋಧಿ ಎಂದು ೨೦೦೬  ಡಿ.ಎಚ್.ಶಂಕರಮೂರ್ತಿ ಹೇಳಿಕೆ ಕೊಟ್ಟಾಗ ಬಹಳಷ್ಟು ಮಂದಿ ವಿರೋಧಿಸಿದ್ದರು. ಅವರು ಟಿಪ್ಪು ಪರ್ಶಿಯನ್ ಭಾಷೆಯನ್ನು ಆಡಳಿತ ಭಾಷೆಯಾಗಿ ಹೇರಿದ ಎಂಬುದನ್ನು  ಒಪ್ಪಿಕೊಳ್ಳಲು ಸಿದ್ಧರಿಲ್ಲ, ದಿವಾನ್ ಎಂದು ಹೇಳುವ ಪದವೇ ಪರ್ಶಿಯನ್ ಭಾಷೆ. ಹಾಗಾಗಿ ನಮ್ಮ ಕಂದಾಯ ಇಲಾಖೆಯಲ್ಲಿರುವ ಒಂದೊAದು ಪದಗಳೂ ಪರ್ಶಿಯನ್ ಭಾಷೆಯದ್ದಾಗಿದೆ. ಟಿಪ್ಪು ಒಬ್ಬ ಕನ್ನಡ ವಿರೋಧಿಯಾಗಿದ್ದ, ಪರ್ಶಿಯನ್ ಭಾಷೆಯನ್ನು ಕನ್ನಡದ ಮೇಲೆ ಹೇರಿದ್ದ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಇವತ್ತು ನಮ್ಮ ಭೂಮಿಯ ದಾಖಲೆಗಳಲ್ಲಿವೆ. ಟಿಪ್ಪು ನಮ್ಮ ಮೇಲೆ ಕೆಟ್ಟ ಮೇಲ್ಪಂಕ್ತಿಯನ್ನು ಹಾಕಿಕೊಟ್ಟ ವ್ಯಕ್ತಿಯೇ ಹೊರತು. ಅವನು ಒಳ್ಳೆಯದಕ್ಕೆ ಉದಹಾರಣೆ ಅಲ್ಲ, ಹಾಗಾಗಿ ಅಭಿವೃದ್ದಿಯ ದ್ಯೋತಕಗಳಿಗೆ ಟಿಪ್ಪು ಹೆಸರನ್ನು ಸಾರ್ವಜನಿಕವಾಗಿ ಇಡಲಾಗಿದಿಯೋ ಅದನ್ನೆಲ್ಲಾ ತೆಗೆಯುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಈಗಾಗಲೇ ಕರ್ನಾಟಕದಲ್ಲಿ ಟಿಪ್ಪು ಜಯಂತಿಯನ್ನು ರದ್ದು ಮಾಡಲಾಗಿದೆ. ಅದೇ ರೀತಿ ರೈಲಿಗೆ ಇಟ್ಟಿದ್ದ ಹೆಸರನ್ನು ಬದಲಾಯಿಸಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.

ಟಿಪ್ಪು ರೈಲಿನ ಹೆಸರನ್ನು ಮಾತ್ರ ಬದಲಾಯಿಸಬಹುದು, ಆದರೆ ಟಿಪ್ಪುವನ್ನು ಜನರ ಮನಸ್ಸಿನಿಂದ ಬದಲಾಯಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸೇರಿದಂತೆ ಅನೇಕರು ಹೇಳುತ್ತಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಯರ‍್ಯಾರು ಟಿಪ್ಪು ಹೆಸರನ್ನು ಬದಲಾಯಿಸಬಹುದು. ಜನರ ಮನಸ್ಸಿನಿಂದ ಅಳಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೊ, ಅವರನ್ನು ಜನರೇ ಕಿತ್ತು ಹಾಕಿಬಿಟ್ಟಿದ್ದಾರೆ ಎಂದು ಪರೋಕ್ಷವಾಗಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರಿಗೆ ತಿರುಗೇಟು ನೀಡಿದರು.
ಸಿದ್ಧರಾಮಯ್ಯ ಅವರು ಮೈಸೂರಿನಲ್ಲಿ ಓದಿದ ಕಾಲೇಜು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಒಳಪಡುತ್ತದೆ. ಅಂತಹ ವಿಶ್ವ ವಿದ್ಯಾನಿಲಯವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದರು. ಮೈಸೂರಿಗರು ಕುಡಿಯುವ ನೀರು, ತಿನ್ನುವ ಅನ್ನ,  ಕೆ.ಆರ್.ಎಸ್.ನಿಂದ ಬರುತ್ತಿದೆ. ಇದು ಮೈಸೂರು ಮಹಾರಾಜರ ಕೊಡುಗೆ. ಅಂತಹ ಮೈಸೂರು ಮಹಾರಾಜರಿಂದ ಉಪಕೃತರಾಗಿ ಟಿಪ್ಪು ಹೆಸರನ್ನು ಇಟ್ಟಂತ ಸಿದ್ಧರಾಮಯ್ಯ ಅವರು, ದೇವರಾಜ ಅರಸು ಮಾರ್ಕೆಟ್ ವಿಚಾರ ಬಂದಾಗ, ಮೈಸೂರು ಮಹಾರಾಜ ಏನು ಅವನ ಸ್ವಂತ ದುಡ್ಡಿಂದ ಕಟ್ಟಿದ್ದನಾ ಎಂಬ ಏಕವಚನದಲ್ಲಿ ಉಡಾಫೆಯಿಂದ ಮಾತನಾಡಿದ್ದರು. ಇವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಲೇವಡಿ ಮಾಡಿದರು.
ಮೈಸೂರು ದಸರಾ ಆಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಸ್.ಟಿ.ಸೋಮಶೇಖರ್ ಅವರು ಅತ್ಯಂತ ವಿಜೃಂಭಣೆಯಿAದ ಮಾಡಿದ್ದಾರೆ. ಒಂದು ಮನೆಯ ಮದುವೆ ಮಾಡಬೇಕಾದರೆ ಸಣ್ಣ ಪುಟ್ಟ ವ್ಯತ್ಯಾಸಗಳು ಆಗುತ್ತದೆ. ಹಾಗಾಗಿ ದಸರಾ ನೋಡಲು ೪೦ ಲಕ್ಷ ಜನ ಬಂದಿದ್ದರು. ಆಗ ಸಣ್ಣ ಪುಟ್ಟ ವ್ಯತ್ಯಾಸವಾಗಿರಬಹುದು. ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮಾಡುವವರಿಗೆ ಮದ್ದುಕೊಡಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಿರುದ್ಧ ಮತ್ತೊಮ್ಮೆ ಪರೋಕ್ಷ ವಾಗ್ದಾಳಿ ನಡೆಸಿದರು. 
ಮೈಸೂರಿಗೆ ಅಂತಾರಾಷ್ಟಿçÃಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ತರಬೇಕು ಎಂಬ ಉದ್ದೇಶ ಹೊಂದಿದ್ದು, ಮುಂದಿನ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಅನುಮೋದನೆ ಸಿಗಲಿದ್ದು, ಮೈಸೂರಿನ ಸಾತಗಳ್ಳಿಯಲ್ಲಿ ೨೦ ಎಕರೆ ಜಾಗವನ್ನು ನೋಡಲಾಗಿದೆ. ಕ್ಯಾಬಿನೆಟ್ ಅನುಮೋದನೆ ದೊರೆತ ಮೂರು ತಿಂಗಳಲ್ಲಿ ಕಾಮಗಾರಿ ಪ್ರಾರಂಭ ಮಾಡುವುದಾಗಿ ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು