ಹನೂರು : ಪತ್ರಕರ್ತರು ಪತ್ರಿಕಾರಂಗಕ್ಕೆ ಶೋಭೆ
ತರುವ ಜತೆಗೆ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿಯುವ
ವ್ಯಕ್ತಿತ್ವವನ್ನು ರೂಪಿಸಿಕೂಳ್ಳಬೇಕು ಎಂದು ಹಿರಿಯ ವಕೀಲ
ನಾಗರಾಜು ತಿಳಿಸಿದರು
ಹನೂರು ಪಟ್ಟಣದ ಮೈರಾಡ ಕಚೇರಿಯಲ್ಲಿ ಮಹಾತ್ಮ ಗಾಂದೀಜಿ
ಜನ್ಮಾದಿನಾಚರಣೆ ಹಿನ್ನಲೆ ಸಮಾನ ಮನಸ್ಕ ಪತ್ರಕರ್ತರಿಂದ
ಪ್ರತಿಕೋದ್ಯಮ ಕುರಿತು ಉಪನ್ಯಾಸ ಕಾರ್ಯಕ್ರಮ ಹಾಗೂ
ಪತ್ರಿಕಾ ರಂಗದ ಪ್ರಚಲಿತ ವಿದ್ಯಾಮಾನದ ಬಗ್ಗೆ ಚರ್ಚೆ
ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗ 4ನೇ ಅಂಗವಾಗಿದ್ದು
ಪತ್ರಕರ್ತರು ಪತ್ರಿಕಾ ಧರ್ಮ ಎತ್ತಿ ಹಿಡಿಯುವಂತಹ ಕೆಲಸ
ಮಾಡಬೇಕಾಗಿದೆ, ತಮ್ಮ ವೃತ್ತಿಯಲ್ಲಿ ಸಮಾಜಕ್ಕೆ ಮಾರಕವಾದ
ವಿಷಯಗಳನ್ನು ಪ್ರಚಾರ ಮಾಡಬಾರದು, ಭಾರತ ಸರ್ಕಾರವು
ಮಾದ್ಯಮದವರಿಗೆ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರದ
ಪ್ರಕಾರ ತಮ್ಮ ವರದಿ ಯಾವುದೇ ವ್ಯಕ್ತಿಯ ಮಾನಹಾನಿ
ಯಾಗಬಾರದು, ಕಾನೂನಿಗೆ ದಕ್ಕೆ ಯಾಗ ಬಾರದು, ನ್ಯಾಯಾಂಗ
ನಿಂದನೆಯಾಗಬಾರದು ಸೇರಿದಂತೆ ರಾಷ್ಟ್ರ ಒಕ್ಕೂಟಕ್ಕೆ ದಕ್ಕೆ
ಯಾಗಬಾರದು ಇಂತಹ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು
ವರದಿ ಮಾಡಬೇಕಾಗಿರುವುದು ಒಬ್ಬ ಪತ್ರಕರ್ತನ ಕರ್ತವ್ಯ
ಎಂದು ತಿಳಿಸಿದರು.
ಬಳಿಕ ವಿಚಾರವಾಧಿ ನಾಗರಾಜು ಮಾತನಾಡಿ, ಬಿಡಿ ಸುದ್ದಿಗಾರರು
ಪತ್ರಿಕಾರಂಗವನ್ನು ವೃತ್ತಿ ಮಾಡಿಕೊಳ್ಳದೇ ಪ್ರವೃತ್ತಿಯಾಗಿ
ರೂಪಿಸಿಕೂಂಡು ಸಮಾಜಕ್ಕೆ ಕೇಡು ಉಂಟು ಮಾಡುವಂತಹ
ಹುಳುವಾಗದೆ ಜೇನು ಹುಳುವಿನಂತೆ ಪರೋಪಕಾರಿ
ಕೆಲಸವನ್ನು ಮಾಡಬೇಕು. ಇಂದಿನ ಮಾದ್ಯಮ ತನ್ನ ಗುಣಮಟ್ಟ
ಕಳೆದುಕೂಳ್ಳುತ್ತಿದ್ದು ಅದಕ್ಕೆ ಹಲವಾರು ಕಾರಣಗಳಿವೆ.
ಅದರಲ್ಲಿ ಮುಖ್ಯವಾದದ್ದು, ಆಮಿಷ, ದಿಡೀರ್ ಶ್ರೀಮಂತಿಕೆ ಜೀವನ
ಇಂತಹ ಕಾರಣಗಳಿಂದ ಪತ್ರಿಕಾ ಮೌಲ್ಯ ಕುಸಿಯುತ್ತಿದೆ.
ಪತ್ರಕರ್ತರಿಗೆ ಜೀವನೋಪಯಕ್ಕೆ ನಿಮ್ಮದೇ ಆದ ಇತರೆ
ಆದಾಯ ಮೂಲಗಳನ್ನು ಕಂಡು ಕೂಂಡರೆ ಯಾವುದೇ
ಲಾಭಿ ಆಮಿಷಕ್ಕೆ ಮಣಿಯುವ ಪ್ರಮೇಯವು ಬರುವುದಿಲ್ಲ
ಎಂದು ಕಿವಿ ಮಾತು ಹೇಳಿದರು
ನಂತರ ಪತ್ರಕರ್ತ ಕುಮಾರ್ ದೊರೆ ಪತ್ರಿಕೋದ್ಯಮ
ಸೇರಿದಂತೆ ಪ್ರಚಲಿತ ವಿದ್ಯಾಮಾನದ ಬಗ್ಗೆ ಮಾತನಾಡಿ,
ಪತ್ರಕರ್ತರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು
ಯಾರೋ ಮಾಡಿದ ವರದಿಗಳನ್ನು ಎರವಲು ಪಡೆಯದೇ
ಸ್ವಂತಿಕೆ ಮತ್ತು ಕ್ರಿಯಾಶೀಲತೆಯಿಂದ ವರಧಿ ಮಾಡುವ
ಕೌಶಲ್ಯ ಬೆಳಿಸಿಕೂಳ್ಳಬೇಕು ಎಂದರು.
ಅಲ್ಲದೆ, ಈ ಹಿಂದೆ ಪತ್ರಿಕೆಗಳು ನಿರ್ವಹಿಸಿದ ಯಶಸ್ವಿ
ಯಶೋಗಾಥೆಗಳಾದ ತಿಹಾರ್ ಜೈಲು ಹಗರಣ, ಪೋನ್ ಕದ್ದಾಲಿಕೆ ಹಗರಣ, ಮುಂತಾದ ಪ್ರಕರಣಗಳನ್ನು ಭೇಧಿಸುವಲ್ಲಿ ಪತ್ರಿಕಾ ವರಧಿಗಾರರು ತೋರಿದ ದಿಟ್ಟತನಗಳ ಕುರಿತು ತಿಳಿಸಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಬಂಗಾರಪ್ಪ, ಸಿ. ಕುಮಾರ್ದೊರೆ, ಶಾರುಕ್ ಖಾನ್,ಸುರೇಶ್, ವಿಜಯ್‌ಕುಮಾರ್, ಅಜಿತ್ ಕುಮಾರ್,ಚೇತನ್ ಕುಮಾರ್ ,
ಪ್ರಸನ್ನ, ರವಿ, ಉಸ್ಮಾನ್, ಛಾಯಗ್ರಾಹಕ ಬಸವರಾಜು ಸೇರಿದಂತೆ ಹಲವರು ಇದ್ದರು.
0 ಕಾಮೆಂಟ್‌ಗಳು